
ಗೌರಿ ಲಂಕೇಶ್ ಪತ್ರಿಕೆಯ ಸಂಪಾದಕಿ ಗೌರಿ ಲಂಕೇಶ್ ಅವರು ಬರೆದ ಅಂಕಣ ಬರೆಹಗಳ ಕೃತಿ-‘ಕಂಡ ಹಾಗೆ-ಸಂಗ್ರಹ -1'. ನೇರ ನಡೆಯ ಗೌರಿ ಅವರು ತಮ್ಮ ವಿಚಾರ-ಭಾವಗಳನ್ನು ನೇರ ನುಡಿಯಲ್ಲೇ ವ್ಯಕ್ತಪಡಿಸಿದ್ದರ ತದ್ರೂಪವೇ ಈ ಅಂಕಣ ಬರೆಹಗಳು. ಸಮಾಜ-ಶಿಕ್ಷಣ- ರಾಜಕೀಯ ವಿದ್ಯಮಾನಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ಅತ್ಯಂತ ಸಂಯುಮದಿಂದ ಸಾಮಾಜಿಕ ನ್ಯಾಯ ಹಾಗೂ ಕಳಕಳಿಯೊಂದಿಗೆ ಬರೆದ ಬರೆಹಗಳಿದ್ದು, ತಮ್ಮದೇ ಓದುಗರ ವರ್ಗವನ್ನು ನಿರ್ಮಿಸಿಕೊಳ್ಳುವಷ್ಟು ಶಕ್ತಿಯಾಲಿಯಾಗಿವೆ ಇಲ್ಲಿಯ ಬರೆಹಗಳು. ವಸ್ತು, ವಿಷಯ ಮಂಡನಾ ರೀತಿ, ಸಮರ್ಥನೆಗಳು, ಬದುಕಿನ ಬದ್ಧತೆಗಳು ಹೀಗೆ ಒಂದು ಬರೆಹವು ಮೌಲಿಕವಾಗಿ ಓದುಗರನ್ನು ಸೆಳೆಯುತ್ತದೆ.
©2025 Book Brahma Private Limited.