
ಲೇಖಕ ಪ್ರತಾಪಸಿಂಹ ಹಾಗೂ ಡಾ. ಜಿ.ಬಿ. ಹರೀಶ್ ಜಂಟಿಯಾಗಿ ಬರೆದ ಕೃತಿ-ಮಹಮ್ಮದ್ ಅಲಿ ಜಿನ್ನಾ. ಭಾರತದ ಸ್ವಾತಂತ್ಯ್ರಕ್ಕಾಗಿ ಹೋರಾಡಿದವರಲ್ಲಿ ಮಹಮ್ಮದ್ ಅಲಿ ಜಿನ್ನಾ ಸಹ ಒಬ್ಬರು. ಮಹಾತ್ಮ ಗಾಂಧೀಜಿ ಅವರೊಡನೆ ಇದ್ದು, ದೇಶದ ಐಕ್ಯತೆಯನ್ನು ಕಾಯ್ದುಕೊಂಡು ಬಂದಿದ್ದರು. ಆದರೆ, ದೇಶ ವಿಭಜನೆಯಾಗಲು ಮಹಮ್ಮದ್ ಅಲಿ ಜಿನ್ನಾ ಅವರ ಮಹಾದಾಸೆಯೇ ಕಾರಣ ಎಂಬ ರೀತಿಯಲ್ಲಿ ಇತಿಹಾಸದ ಘಟನೆಗಳು ವಿಶ್ಲೇಷಿಸುತ್ತವೆ. ಮೊದಲು ತಾವು ಭಾರತೀಯ ಎಂದಿದ್ದ ಜಿನ್ನಾ ಸ್ವಾತಂತ್ಯ್ರ ನಂತರ ಅವರು ಪಾಕಿಸ್ತಾನದ ಬೇಡಿಕೆಯನ್ನು ಮುಂದಿಟ್ಟರು. ಹೀಗೆ ವಿಭಿನ್ನ ವ್ಯಕ್ತಿತ್ವವನ್ನು ಕಟ್ಟಿಕೊಡುವ ಕೃತಿ ಇದು.
©2025 Book Brahma Private Limited.