
ವಿದ್ವಾಂಸ ಡಾ. ಎಲ್. ಬಸವರಾಜು ಅವರು ಶರಣ ಅಲ್ಲಮಪ್ರಭುವಿನ ಶೂನ್ಯ ಸಂಪಾದನೆ ಕೃತಿಯನ್ನು ಸಂಪಾದಿಸಿದ್ದಾರೆ. 12ನೇ ಶತಮಾನದ ಶರಣ ಅಲ್ಲಮನು ಅಂದಿನ ಅನುಭಾವ ಮಂಟಪದ ಅಧ್ಯಕ್ಷರು. ಸರಳ ಜೀವನದ ಮೂಲಕವೇ ಜೀವನದ ಪರಮೋಚ್ಛ ಗುರಿಯಾದ ಮೋಕ್ಷವನ್ನು ಕಾಣಬೇಕು ಎಂಬುದು ಇಲ್ಲಿಯ ಸಂದೇಶ. ಶೂನ್ಯ ಸಂಪಾದನೆ ಗ್ರಂಥವು ಎಡೆಯೂರ ಸಿದ್ದಲಿಂಗೇಶ್ವರರ ರಚನೆ. ಈ ಗ್ರಂಥವು 12ನೇ ಶತಮಾನದ ಬಸವಾದಿ ಶರಣರು ಕಲ್ಯಾಣ ನಗರದಲ್ಲಿ ಅನುಭವ ಮಂಟಪದಲ್ಲಿ ಮಾಡಿದ ಅನುಭಾವ ಗೋಷ್ಟಿಯ ಆಗರ. ಶಿವಶರಣರ ವಚನ ಸಾಹಿತ್ಯದ ಸಮುದ್ರ ಮಂಥನ ಮಾಡಿದಾಗ ತೇಲಿಬಂದ ಅಮೃತವೇ ಶೂನ್ಯ ಸಂಪಾದನೆ ಎಂದು ಅರ್ಥೈಸಲಾಗುತ್ತದೆ.
©2025 Book Brahma Private Limited.