
‘ಶಿಶಿರ ಕಾಲ’ ಶಿಶಿರ್ ಹೆಗಡೆ ಅಂಕಣ ಬರಹವಾಗಿದೆ. ಪ್ರತೀ ವಾರ ಬರೆಯುವುದು, ಅದಕ್ಕೆ ಬೇಕಾದ ತಯಾರಿಗಳು ಇವೆಲ್ಲ ನನ್ನಿಂದ ಇಷ್ಟು ನಿರಂತರ ನಡೆಯುತ್ತದೆಯೆಂದು ಎಂದೂ ಅಂದುಕೊಂಡಿರಲಿಲ್ಲ. ಈಗ ಮೂರು ವರ್ಷಕ್ಕಿಂತ ಜಾಸ್ತಿಯೇ ಆಯಿತು. ವಾರಕ್ಕೊಮ್ಮೆ ಬರೆಯಲು ಕೂರುವುದು ಅಭ್ಯಾಸವಾಗಿದೆ. ಶಿಶಿರಕಾಲ ಅಂಕಣ ಆರಂಭವಾದಾಗಿನಿಂದ ಒಂದು ವಾರವೂ ತಪ್ಪಿಸಿದ್ದಿಲ್ಲ. ಆನಾರೋಗ್ಯ, ವೈಯಕ್ತಿಕ ಕಾರಣಗಳು, ವೃತ್ತಿ, ಓಡಾಟ, ಕೌಟುಂಬಿಕ ಅವಶ್ಯಕತೆಗಳು ಅದೆಷ್ಟೋ ಬಾರಿ ಬರೆಯುವ ಒತ್ತಡವನ್ನು ಹೆಚ್ಚಿಸಿದ್ದಿದೆ. ಆದರೆ ಪ್ರತೀ ವಾರ ಓದುಗರ ನಿರೀಕ್ಷೆ ಅದೆಲ್ಲವನ್ನು ಮೀರುವುದಕ್ಕೆ ಶಕ್ತಿಯಾಗಿದೆ. ಇದೆಲ್ಲದರಿಂದ ನನ್ನಲ್ಲಿ ಒಂದಿಷ್ಟು ಓದಿನ ಶಿಸ್ತು ಬಂದಿದೆ. ಓದು ಅನಿವಾರ್ಯತೆಯಾದ ಬಗ್ಗೆ ನನಗೆ ಖುಷಿಯಿದೆ. ಜೊತೆಗೆ ಬರವಣಿಗೆ ನನಗೊಂದು ಗುರುತನ್ನು ತಂದು ಕೊಟ್ಟಿದೆ. ನನಗೆ ಅದೆಲ್ಲದರ ಬಗ್ಗೆ ಸಾರ್ಥಕ್ಯವಿದೆ.
©2025 Book Brahma Private Limited.