
ದಿನಪತ್ರಿಕೆಯೊಂದರಲ್ಲಿ ಪ್ರಕಟವಾದ ಅಂಕಣ ಮಾಲೆಯ ಭಾಗವೇ ’ತೃಣಮಾತ್ರ’. ಒಟ್ಟು 141 ಲೇಖನಗಳಿರುವ ಕೃತಿ ಇದು. ಲೇಖಕರ ಪ್ರಕಾರ ದೇಹ, ದೇಶ ಹಾಗೂ ದೇವ ಎಂಬ ಮೂರು ಅಂಶಗಳನ್ನು ಆಧರಿಸಿ ಅಂಕಣಗಳು ಮೂಡಿಬಂದಿವೆ. ಸಣ್ಣಸಣ್ಣ ಸಂಗತಿಗಳಿಂದ ಹಿಡಿದು ಅನುಭಾವದವರೆಗೆ ಲೇಖಕರು ಕೃತಿ ರಚಿಸಿದ್ದಾರೆ.’ಸುಲಿದ ಬಾಳೆಯ ಹಣ್ಣಿನಂದದಿ’ ಎನ್ನುವಂತೆ ಬರೆದ ಕೃತಿ ಇದಾಗಿರುವುದರಿಂದ ಥಟ್ಟನೆ ಸೆಳೆಯುತ್ತದೆ.
ಓದುಗರನ್ನು ಸೆಳೆಯಲು ಇನ್ನಿಲ್ಲದ ಯತ್ನ ನಡೆಸುವ ಸಾವಣ್ಣ ಪ್ರಕಾಶನ ಕೃತಿಯನ್ನು ಹೊರತಂದಿದೆ.

©2025 Book Brahma Private Limited.