
ಗದಗ ನಿಂದ ಹೊರಡುತ್ತಿದ್ದ ಕಿತ್ತೂರು ಕರ್ನಾಟಕ ದಿನಪತ್ರಿಕೆಯಲ್ಲಿ ಬೇಂದ್ರೆ ಸಾಹಿತ್ಯ ಕುರಿತು ಲೇಖಕ ಸಂಗಮೇಶ ತಮ್ಮನಗೌಡ್ರ ಅವರ ‘ಬೇಂದ್ರೆ ಹಿಂಗಂತಾರ’ ಅಂಕಣ ಬರೆಹಗಳನ್ನು ಸಂಗ್ರಹಿಸಿದ ಕೃತಿಯೇ ಇದು. ಶಬ್ದ ಶೃತಿಯಾದಾಗ ಮಾತು ಕೃತಿಯಾದೀತು, ಹೀಗೆಂದರು ತಪ್ಪು ಹಾಗೆಂದರೂ ಬೆಪ್ಪು, ಇಳೆ ಎಂದರೆ ಬರೀ ಮಣ್ಣಲ್ಲ; ನಮಗೋ ನೋಡುವ ಕಣ್ಣಿಲ್ಲ, ಸತ್ತರೂ ಸತ್ಯ ಬಿಡಬಾರದು, ಹೇಳಿದ್ದ ಹೇಳಿದ್ರ ಆಕಳಿಸಕ ಹತ್ತತಾರ, ನಗಿಯಲ್ಲಿ ಹೊಗಿ ಬ್ಯಾಡ, ಹೊಗಿಯಲ್ಲಿ ಧಗಿ ಬಭ್ಯಾಡ ...ಹೀಗೆ ಒಟ್ಟು 17 ಬರೆಹಗಳು ಇಲ್ಲಿ ಸಂಕಲನಗೊಂಡಿವೆ.
©2025 Book Brahma Private Limited.