
‘ವಿಜಾಪುರ ವೈಭವ’ ಕೃತಿಯು ಡಿ.ಸಿ. ರಾಜಪ್ಪ ಅವರ ಪ್ರಧಾನ ಸಂಪಾದಕತ್ವದ ಓಂಕಾರ ಕಾಕಡೆ ಅವರ ಸಂಪಾದಕತ್ವದ ಕೃತಿಯಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ: ಜಗತ್ತಿನ ಭೂಪಟದಲ್ಲಿ ವಿಜಾಪುರವನ್ನು ಕೂರಿಸಲು ಒಂದು ಗೋಲ ಗುಮ್ಮಟ ಸಾಕು. ಗೋಲಗುಮ್ಮಟದಲ್ಲಿ ನಿಂತು ಪಿಸುಗುಟ್ಟಿದ ಒಂದು ಮಾತೂ ಸಹಾ ಹೇಗೆ ಮರುಧ್ವನಿಯಾಗಿ, ಅಲೆ ಅಲೆಯಾಗಿ ಬೆಳೆಯುತ್ತಾ ಹೋಗುತ್ತದೋ ಹಾಗೆ ವಿಜಾಪುರದ ವೈಭವವೊ ಜಗತ್ತಿನ ಕೌತುಕವಾಗಿ ಹರಡಿಹೋಗಿದೆ. ಒಂದು ಗೋಲಗುಮ್ಮಟ ಮಾತ್ರವಲ್ಲ, ಇಬ್ರಾಹಿಂ ರೋಜಾ, ಗಗನಮಹಲ್, ಜೋಡಗುಮ್ಮಟ, ತಾಜ್ ಬಾವಡಿ, ಉಪಲಿ ಬುರುಜು, ಬಾರಾ ಕಮಾನ್ ಹೀಗೆ ಕೌತುಕಪಡಲು ಅದೆಷ್ಟು ಜಾಗಗಳು.. ! ವಿಜಾಪುರದ ವೈಭವ ಎಂದರೆ ಇಷ್ಟು ಮಾತ್ರವೇ? ಇಷ್ಟು ಮಾತ್ರ- ಎಂದು ತಿಳಿದಿದ್ದ ಕಾಲವೂ ಒಂದಿತ್ತು. ಆದರೆ ವಿಜಾಪುರವನ್ನು ಅರಿಯಲು ಹೊರಟರೆ ನಡೆದಷ್ಟು ದಾರಿಯಿದೆ ಎಂಬುದನ್ನು ತಿಳಿಸಿಕೊಟ್ಟ ಹೆಗ್ಗಳಿಕೆ- ‘ವಿಜಾಪುರ ವೈಭವ’ದ್ದು ಎಂದು ಇಲ್ಲಿ ವಿಶ್ಲೇಷಿತವಾಗಿದೆ.
©2025 Book Brahma Private Limited.