
ಹಿರಿಯ ಲೇಖಕ ಎನ್.ಎ. ಕೊಠಾರಿ ಸೇರಿದಂತೆ ಇತರೆ (ಸುದಾಂಶು ಎಸ್. ಪಾಲ್ ಸುಲೆ, ಎಸ್. ಎಂ. ಪರೇಖ್, ಎಂ. ಪಿ. ನವಲ್ಕರ್ ) ನಾಲ್ವರು ಲೇಖಕರು ಇಂಗ್ಲಿಷಿನಲ್ಲಿ (Of Science and Scientists-1994) ಬರೆದ ಕೃತಿಯನ್ನು ಲೇಖಕ ಎಂ.ಎ. ಸೇತುರಾವ್ ಅವರು ಕನ್ನಡಕ್ಕೆ ಅನುವಾದಿಸಿದ ಕೃತಿ-ವಿಜ್ಞಾನ ಮತ್ತು ವಿಜ್ಞಾನಿಗಳು: ದಂತಕಥೆಗಳ ಸಂಕಲನ. ನ್ಯಾಷನಲ್ ಬುಕ್ ಟ್ರಸ್ಟ್ ತನ್ನ ವಿಜ್ಞಾನ ಮಾಲಿಕೆಯಡಿ ಪ್ರಕಟಿಸಿದ ಕೃತಿ ಇದು. ಮಕ್ಕಳಿಗೆ ಶಿಕ್ಷಣ ಹಾಗೂ ನೀತಿಯನ್ನು ಬೋಧಿಸುವುದು ಕೃತಿಯ ಉದ್ದೇಶ. ವಿಜ್ಞಾನಿಗಳ ದಂತಕಥೆಗಳು ಮಕ್ಕಳಲ್ಲಿ ಪ್ರೇರಣೆ ನೀಡುತ್ತವೆ. ಜೀವನೋತ್ಸಾಹ ಹೆಚ್ಚಿಸುತ್ತವೆ. ವೈಜ್ಞಾನಿಕ ಮನೋಭಾವ ಬೆಳೆಸುತ್ತವೆ. ಪ್ರಕೃತಿಯ ಕುರಿತು ಕುತೂಹಲ ಮೂಡಿಸುತ್ತವೆ. ವಿಜ್ಞಾನಿಗಳ ವ್ಯಕ್ತಿಚಿತ್ರಣಗಳನ್ನು ನೀಡುತ್ತದೆ. `ವಿಜ್ಞಾನ, ವಿಜ್ಞಾನಿ ಮತ್ತು ಸತ್ಯ’ ಮತ್ತು `ವಿನೋದ, ನಮ್ರತೆ ಮತ್ತು ಮಾನವೀಯತೆ’ ಹೀಗೆ ವಿವಿಧ ಅಧ್ಯಾಯಗಳನ್ನು ಒಳಗೊಂಡಿವೆ.
©2025 Book Brahma Private Limited.