
ಎ.ವಿ. ನಾವಡ ಸಂಪಾದಕತ್ವದಲ್ಲಿ ಮೂಡಿಬಂದ ಕೃತಿ ಫರ್ಡಿನೆಂಡ್ ಕಿಟೆಲ್ ವಾಚಿಕೆ . ಕೆಟೆಲ್ ಕೇವಲ ನಿಘಂಟು ರಚಿಸುವ ಕಾರ್ಯ ಮಾತ್ರ ಮಾಡಿದುದಲ್ಲ.ಹಾಗೆ ನೋಡಿದರೆ ಹೊಸಗನ್ನಡದ ಕಾವ್ಯ ಇನ್ನೂ ರೂಪಗೊಳ್ಳುವ ಮೊದಲೇ ಕಿಟೆಲ್ ಹೊಸಗನಡ ಎನ್ನಬಹುದಾದ ಭಾಷಾಶೈಲಿಯಲ್ಲಿ ಪದ್ಯರಚನೆಯನ್ನು ಮಾಡಿದವರು.ಆದರೆ,ಅವರ ನಿಘಂಟಿಗೆ ಹೆಚ್ಚು ಪ್ರಚಾರ ಸಿಕ್ಕಿದುದರಿಂದ ಅವರ ಇತರ ಬರವಣಿಗೆಗಳು ಹೆಚ್ಚು ಚರ್ಚೆಗೆ ಒಳಗಾಗಲಿಲ್ಲ ಎನಿಸುತ್ತದೆ .ಕಿಟೆಲ್ ಅವರ ರಚನೆಗಳ ಪ್ರಾತಿನಿದಿಕ ಸಂಕಲನವಾದ ಈ ಕೃತಿಯು ಆಸಕ್ತರಿಗೆ ಹಾಗೂ ಸಂಶೋಧಕರಿಗೆ ಉಪಯುಕ್ತವಾದೀತು.
©2025 Book Brahma Private Limited.