
ಕಲಾವಿದ ಜೆ. ಎಸ್. ಖಂಡೇರಾವ್ ಅವರ ಜೀವನ ಚರಿತ್ರೆಯನ್ನು ಕುಪ್ಪಣ್ಣ ಕಂದಗಲ್ ಅವರು ರಚಿಸಿದ್ದಾರೆ. ಮಾನವೀಯತೆಯ ಮೂರ್ತಿವೆತ್ತಂತಿದ್ದ ಕಲಾವಿದ ಖಂಡೇರಾವ್ ಅವರು ಸರಳತೆ ಮತ್ತು ಸೌಜನ್ಯಕ್ಕೆ ಹೆಸರಾದವರು. ಸೌಮ್ಯ ಸ್ವಭಾವದ ಖಂಡೇರಾವ್ ಅವರಲ್ಲಿ ಅಗಾಧವಾದ ಕಲಾಪ್ರತಿಭೆ ಇದೆ. ಅಸಾಧಾರಣ ಕಲಾ ಸಾಮರ್ಥ್ಯ ಹೊಂದಿದ ಅವರು ಕೀರ್ತಿ ಮತ್ತು ಸ್ಥಾನಮಾನಗಳನ್ನು ಅರಸಿ ಹೋದವರಲ್ಲವಾದರೂ ಕಲಾ ಕ್ಷೇತ್ರದಲ್ಲಿ ಅವರ ಹೆಸರು ಉನ್ನತ ಶ್ರೇಣಿಯಲ್ಲಿದೆ. ಅವರ ಕಲಾಬದುಕಿನ ವಿವಿಧ ಮಜಲುಗಳನ್ನ ಈ ಕೃತಿ ತೆರೆದಿಡುತ್ತದೆ.
©2025 Book Brahma Private Limited.