ಬೇಗಂಪುರ

Author : ಬಂಜಗೆರೆ ಜಯಪ್ರಕಾಶ

Pages 249

₹ 345.00




Year of Publication: 2023
Published by: ಜೀರುಂಡೆ ಪುಸ್ತಕ
Address: ನಂ.42, 9ನೇ ಅಡ್ಡರಸ್ತೆ, ಗಂಗೊಂಡನಹಳ್ಳಿ ಮುಖ್ಯರಸ್ತೆ, ಇಂದಿರಾನಗರ, ದೊದ್ದಬಿದರುಕಲ್ಲು, ಬೆಂಗಳೂರು- 560073
Phone: 9742225779

Synopsys

‘ಬೇಗಂಪುರ’ ಇಂಗ್ಲೀಷ್ ನಲ್ಲಿ ಗೇಲ್ ಓಮ್ವೆಟ್ ಅವರು ರಚಿಸಿರುವ 'Seeking Begumpura: The social vision of Anticaste intellectuals' ಕೃತಿಯ ಕನ್ನಡಾನುವಾದ. ಈ ಕೃತಿಯನ್ನು ಹಿರಿಯ ಚಿಂತಕ, ಲೇಖಕ ಡಾ.ಬಂಜಗೆರೆ ಜಯಪ್ರಕಾಶ್ ಕನ್ನಡೀಕರಿಸಿದ್ದಾರೆ. ಭಕ್ತಿ ಚಳವಳಿಯ ತೀವ್ರಗಾಮಿ ಸಂತ ರವಿದಾಸ್ (ಕ್ರಿ.ಶ. 1450-1520) ತನ್ನನ್ನು ತಾನು 'ಈಗ ಸ್ವತಂತ್ರನಾಗಿರುವ ಚಮ್ಮಾರ' ಎಂದು ಕರೆದುಕೊಳ್ಳುತ್ತಾನೆ. ತನ್ನ "ಬೇಗಂಪುರ" ಹಾಡಿನಲ್ಲಿ ಭಾರತೀಯ ಆದರ್ಶರಾಜ್ಯವನ್ನು - ಒಂದು ಆಧುನಿಕ ಜಾತಿರಹಿತ, ವರ್ಗರಹಿತ, ತೆರಿಗೆ-ಮುಕ್ತ ನಗರವನ್ನು -ಮೊದಲು ಕಲ್ಪಿಸಿಕೊಂಡವನು. ಇದು ಬ್ರಾಹ್ಮಣೀಯ ಕಲಿಯುಗದ ನರಕಸದೃಶ ಕಲ್ಪನೆಗೆ ವ್ಯತಿರಿಕ್ತವಾಗಿತ್ತು. ಭಾರತವನ್ನು 'ಪುನಃಶೋಧಿಸಲು' ಪೌರಸ್ತ್ಯವಾದಿ, ರಾಷ್ಟ್ರೀಯವಾದಿ ಮತ್ತು ಹಿಂದುತ್ವವಾದಿ ಪ್ರವೃತ್ತಿಗಳನ್ನು ತಿರಸ್ಕರಿಸುತ್ತಾ, ಗೇಲ್ ಓಮ್ವೆಟ್ ಅವರು ಐದು ಶತಮಾನಗಳ ಅವಧಿಯಲ್ಲಿ ವ್ಯಾಪಿಸಿಕೊಂಡಿರುವ ತಳಸ್ತರೀಯ ದಾರ್ಶನಿಕರ ವಿಶ್ವ ದೃಷ್ಟಿಕೋನವನ್ನು ಒಟ್ಟುಗೂಡಿಸಿ ಇಲ್ಲಿ ನೀಡಿದ್ದಾರೆ - ಚೋಖಾಮೇಳ, ಜನಾಬಾಯಿ, ಕಬೀರ್, ರವಿದಾಸ್, ತುಕಾರಾಂ, ಕರ್ತಾಭಜ, ಫುಲೆ, ಅಯೋತಿ ದಾಸ್, ಪಂಡಿತಾ ರಮಾಬಾಯಿ, ಪೆರಿಯಾರ್ , ಅಂಬೇಡ್ಕರ್ ಇವರ ದೃಷ್ಟಿಕೋನವು ಗಾಂಧಿಯವರ ರಾಮರಾಜ್ಯ ಆದರ್ಶದ ಗ್ರಾಮರಾಜ್ಯ, ನೆಹರು ಅವರ ಹಿಂದೂತ್ವ-ಲೇಪಿತ ಬ್ರಾಹ್ಮಣೀಯ ಸಮಾಜವಾದ ಮತ್ತು ಸಾವರ್ಕರ್ ಅವರ ಪ್ರಾದೇಶವಾದಿ ಹಿಂದೂ ರಾಷ್ಟ್ರ ಪರಿಕಲ್ಪನೆಗಳಿಗೆ ವ್ಯತಿರಿಕ್ತವಾಗಿದೆ. ತಾರ್ಕಿಕತೆ ಮತ್ತು ಭಾವಪರವಶತೆ-ಜ್ಞಾನ ಮತ್ತು ಭಕ್ತಿಗಳ-ಪಥವು 'ವಾಗ್ದಾನಿತ' ನಾಡಿಗೆ ಕರೆದೊಯ್ಯುತ್ತದೆ. ಗೇಲ್ ಓಮ್ವೆಟ್ ಅವರು 'ದಲಿತ್ ಅಂಡ್ ದ ಡೆಮಾಕ್ರಟಿಕ್ ರೆವಲ್ಯೂಷನ್', 'ಬುದ್ಧಿಸಂ ಇನ್ ಇಂಡಿಯಾ: ಚಾಲೆಂಜಿಂಗ್ ಬ್ರಾಹ್ಮಣಿಸಂ ಅಂಡ್ ಕ್ಯಾಸ್ಟ್' ಮತ್ತು 'ಅಂಬೇಡ್ಕರ್: ಟುವರ್ಡ್ಸ್ ಆ್ಯನ್ ಎನ್ಲೈಟನ್ಡ್ ಇಂಡಿಯಾ' ಮತ್ತಿತರ ಪುಸ್ತಕಗಳ ಲೇಖಕರಾಗಿದ್ದಾರೆ. ಡಾ. ಬಂಜಗೆರೆ ಜಯಪ್ರಕಾಶ ಕನ್ನಡದ ಹೆಸರಾಂತ ಲೇಖಕ, ಸಂಸ್ಕೃತಿ ಚಿಂತಕ ಮತ್ತು ಸಾಮಾಜಿಕ ಹೋರಾಟಗಾರರಾಗಿದ್ದು ಇಪ್ಪತ್ತಕ್ಕೂ ಹೆಚ್ಚು ಕೃತಿಗಳನ್ನು ಬರೆದಿದ್ದಾರೆ. ಅಲ್ಲದೆ, ಇಂಗ್ಲಿಷ್ ಮತ್ತು ತೆಲುಗು ಭಾಷೆಗಳ ಹಲವು ಕೃತಿಗಳ ಅನುವಾದಕರೂ ಆಗಿದ್ದಾರೆ.

About the Author

ಬಂಜಗೆರೆ ಜಯಪ್ರಕಾಶ
(17 June 1965)

ಕವಿ, ಸಂಸ್ಕೃತಿ ಚಿಂತಕ, ವಿಮರ್ಶಕ, ಅಂಕಣಕಾರ, ಅನುವಾದಕ ಮತ್ತು ಜನಪರ ಹೋರಾಟಗಾರರಾಗಿರುವ ಬಂಜಗೆರೆ ಜಯಪ್ರಕಾಶ್ ಹುಟ್ಟಿದ್ದು ಜೂನ್ 17-1965ರಲ್ಲಿ. ಹಿಂದುಳಿದ ಬುಡಕಟ್ಟು ಜಾತಿಯ ರೈತಾಪಿ ಕುಟುಂಬದ ಹಿನ್ನೆಲೆ ಇರುವ ಬಂಜಗೆರೆ ಜಯಪ್ರಕಾಶ್ ಅವರು ಚಿತ್ರದುರ್ಗ ಜಿಲ್ಲೆ, ಚಳ್ಳಕೆರೆ ತಾಲೋಕಿನ ಬಂಜಗೆರೆಯವರು.  ಚಳ್ಳಕೆರೆ ಚಿತ್ರದುರ್ಗಗಳಲ್ಲಿ ಪಿಯುಸಿವರೆಗೆ ವಿದ್ಯಾಭ್ಯಾಸ. 1985ರಲ್ಲಿ ಮೈಸೂರು ಮಹಾರಾಜ ಕಾಲೇಜಿನಿಂದ ಪತ್ರಿಕೋದ್ಯಮ ಪದವಿ. 1987 ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎಸ್.ಡಬ್ಲ್ಯು ಪದವಿ. ಕನ್ನಡ ವಿಶ್ವವಿದ್ಯಾಲಯದಿಂದ 1999ರಲ್ಲಿ ಡಾಕ್ಟರ್ ಆಫ್ ಲಿಟರೇಚರ್ (ಡಿ.ಲಿಟ್)ಪದವಿ. ಕಳೆದ ಎರಡು ಮೂರು ದಶಕಗಳಿಂದ ಜನಪರ ಚಳುವಳಿಗಳಲ್ಲಿ ಸಕ್ರಿಯ ಪಾತ್ರ. ಕನ್ನಡ ವಿಶ್ವವಿದ್ಯಾಲಯವು ...

READ MORE

Related Books