ನಾಲ್ಕು ಪರಮ ರಹಸ್ಯಗಳು

Author : ಶಿವಾನಂದ ಬೇಕಲ್

Pages 195

₹ 359.00




Year of Publication: 2023
Published by: ಮಂಜುಳಾ ಪಬ್ಲಿಷಿಂಗ್
Address: ಕೇರಳ

Synopsys

ನಾಲ್ಕು ಪರಮ ರಹಸ್ಯಗಳು ಶಿವಾನಂದ ಬೇಕಲ್‌ ಅವರ ಅನುವಾದಿತ ಕೃತಿಯಾಗಿದೆ. ಜಗತ್ತಿನಾದ್ಯಂತದ ಜನರಲ್ಲಿನ ಆತಂಕ ಹಾಗೂ ಆಂತರಿಕ ತುಮುಲವನ್ನು ಹತ್ತಿಕ್ಕಲು ಮತ್ತು ಒಂದು ಸುಂದರ ಸ್ಥಿತಿಯಲ್ಲಿ ಬದುಕುವಂತೆ ಮಾಡಲು ತಮ್ಮನ್ನೇ ಸಮರ್ಪಿಸಿಕೊಂಡವರು ಪರಿವರ್ತನಾ ಲೀಡರ್‌ಗಳಾದ ಪ್ರೀತಾಜಿ ಮತ್ತು ಕೃಷ್ಣಾಜಿ, ಲಕ್ಷಗಟ್ಟಲೆ ಜೀವರನ್ನು ತಮ್ಮ ಒ ಅಂಡ್ ಒ ಅಕಾಡೆಮಿ ಕೋರ್ಸ್‌ಗಳ ಹಾಗೂ ಭಾರತದಲ್ಲಿನ ವೈಭವೋಪೇತ ಧ್ಯಾನ ಕೇಂದ್ರವಾದ ಏಕಂನ ಮುಖಾಂತರ ಪರಿವರ್ತಿಸುತ್ತ, ಪ್ರೀತಾಜಿ ಮತ್ತು ಕೃಷ್ಣಾಜಿ ತಮ್ಮ ಅಧ್ಯಾಪನದ ಮುಖ್ಯ ಅಂಶಗಳ ನಾಲ್ಕು ಹಂತಗಳ ಮೂಲಕ ಪವಾಡ ಸದೃಶವಾಗಿ ನಮ್ಮ ಬದುಕಿನಲ್ಲಿ ಋಷಿ, ಪ್ರೇಮ, ಸಂಪತ್ತು ಮತ್ತು ಉದ್ದೇಶಗಳನ್ನು ಉದ್ದೀಪಿಸುತ್ತಿದ್ದಾರೆ. ಅವುಗಳೇ ಈ ಕೃತಿಯ ನಾಲ್ಕು ಪರಮ ರಹಸ್ಯಗಳು.

About the Author

ಶಿವಾನಂದ ಬೇಕಲ್
(21 February 1951)

ಡಾ. ಶಿವಾನಂದ ಬೇಕಲ್ ಅವರು ಹುಟ್ಟಿದ್ದು ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಐತಿಹಾಸಿಕ ಸ್ಥಳ ಬೇಕಲ್ ನಲ್ಲಿ. ತಂದೆ- ಬೇಕಲ್  ಸಾಂತನಾಯಕರು, ತಾಯಿ- ಲಲಿತಾಬಾಯಿ. ಪ್ರಾಥಮಿಕದಿಂದ ಹೈಸ್ಕೂಲುವರೆಗೆ ವಿದ್ಯಾಭ್ಯಾಸ ನಡೆದದ್ದು ಬೇಕಲ್‌ನಲ್ಲಿ . ಕಾಸರಗೋಡಿನಲ್ಲಿ ಬಿ.ಎಸ್ಸಿ, ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎಡ್, ಕರ್ನಾಟಕ ವಿಶ್ವ ವಿದ್ಯಾಲಯದಿಂದ ಎಂ.ಎ. ಮತ್ತು ಗುಲಬರ್ಗಾ ವಿಶ್ವ ವಿದ್ಯಾಲಯದಿಂದ ಡಾಕ್ಟರೇಟ್ ಪಡೆದರು. 16ನೇ ವಯಸ್ಸಿನಲ್ಲಿ ಬರೆದ ‘ಕೇದಗೆಯ ಹಾವು’ ಮೊದಲ ಕಥೆಗೆ 1968ರಲ್ಲಿ ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆಯಲ್ಲಿ ಬಹುಮಾನ ಗಳಿಸಿತು. ಇವರ ಲೇಖನ ಕೃಷಿ ಮಂಗಳೂರಿನ ನವಭಾರತ, ಕಿನ್ನಗೋಳಿಯ ಯುಗಪುರುಷ ನಂತರ  ಸುಧಾ, ತರಂಗ, ಪ್ರಜಾವಾಣಿ, ...

READ MORE

Related Books