ಎಡ್ವರ್ಡ್‌ ಸೈದ್‌

Author : ರಾಮಲಿಂಗಪ್ಪ ಟಿ. ಬೇಗೂರು

Pages 93

₹ 50.00




Year of Publication: 2003
Published by: ಅಧ್ಯಯನ ಮಂಡಲ
Address: (ಕೆ. ಆರ್‌. ನಾಗರಾಜ), 13/85, ಆರ್‌.ವಿ.ರಸ್ತೆ, ಬಸವನಗುಡಿ, ಬೆಂಗಳೂರು

Synopsys

‘ಎಡ್ಬರ್ಡ್‌ ಸೈದ್‌’ ರಾಮಲಿಂಗಪ್ಪ ಟಿ. ಬೇಗೂರು ಅವರ ಅನುವಾದಿತ ಚಿಂತನೆಗಳ ಬರಹವಾಗಿದೆ. ಸಾಹಿತ್ಯ-ಇತಿಹಾಸ-ಸಾಂಸ್ಕೃತಿಕ ಮತ್ತು ರಾಜಕೀಯಗಳೆಂಬ ವರ್ತುಲದ ಸುತ್ತ ತಮ್ಮ ವಿಶ್ಲೇಷಣಾತ್ಮಕ ಬರಹ-ಭಾಷಣಗಳಿಂದ ಜಾಗತಿಕ ಮಟ್ಟದಲ್ಲಿ ಇಂದು ಗುರುತಿಸಲ್ಪಟ್ಟ ಎಡ್ವರ್ಡ್ ಸೈದ್ ಅವರ ಚಿಂತನೆಗಳನ್ನು ಗ್ರಹಿಸಲು ಈ ಪುಸ್ತಕ ತುಂಬ ಸಹಕಾರಿ.

About the Author

ರಾಮಲಿಂಗಪ್ಪ ಟಿ. ಬೇಗೂರು
(29 December 1968)

ವಿಮರ್ಶಕ-ಲೇಖಕ ರಾಮಲಿಂಗಪ್ಪ ಟಿ. ಬೇಗೂರು ಅವರು ಮೂಲತಃ ನೆಲಮಂಗಲ ತಾಲ್ಲೂಕಿನ ತೆಪ್ಪದ ಬೇಗೂರು ಗ್ರಾಮದವರು. 1968ರ ಡಿಸೆಂಬರ್ 29ರಂದು ಜನಿಸಿದರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಆರು ಚಿನ್ನದ ಪದಕಗಳೊಂದಿಗೆ ಪ್ರಥಮ ರಾಂಕ್‌ನಲ್ಲಿ ಕನ್ನಡ ಎಂ.ಎ. ಪದವಿ. ಬೆಂಗಳೂರು, ಚಳ್ಳಕೆರೆ, ಕುಕನೂರು, ಕೋಲಾರ, ಚಿಂತಾಮಣಿಗಳಲ್ಲಿ ಕನ್ನಡ ಅಧ್ಯಾಪಕರಾಗಿ ಕೆಲಸ ನಿರ್ವಹಿಸಿದ್ದಾರೆ. ಸದ್ಯ ಕೆಂಗೇರಿ ಪದವಿ ಕಾಲೇಜಿನಲ್ಲಿ ಸಹಪ್ರಾಧ್ಯಾಪಕರಾಗಿದ್ದಾರೆ. ಕನ್ನಡ ಕಾವ್ಯ, ವಿಚಾರಸಾಹಿತ್ಯ, ಸಂಶೋಧನೆ, ವಿಮರ್ಶೆಗಳಲ್ಲಿ ಪರಿಶ್ರಮ ಇರುವ ಇವರಿಗೆ ಜಿ.ಎಸ್.ಎಸ್. ಕಾವ್ಯಪ್ರಶಸ್ತಿ ಲಭಿಸಿದೆ. ’ಮಾಯಾಪಾತಾಳ’,’ಸಂಕರಬಂಡಿ’, ಮಾರ್ಗಾಂತರ, ಪರಕಾಯ, ಎಡ್ವರ್ಡ್ ಸೈದ್, ಅಲ್ಲಮಪ್ರಭು : ಆಧುನಿಕ ಪೂರ್ವ ಅನುಸಂಧಾನಗಳು ಮೊದಲಾದವು ಪ್ರಕಟಿತ ...

READ MORE

Reviews

ಹೊಸತು-2004- ನವೆಂಬರ್‌

ಸಾಹಿತ್ಯ-ಇತಿಹಾಸ-ಸಾಂಸ್ಕೃತಿಕ ಮತ್ತು ರಾಜಕೀಯಗಳೆಂಬ ವರ್ತುಲದ ಸುತ್ತ ತಮ್ಮ ವಿಶ್ಲೇಷಣಾತ್ಮಕ ಬರಹ-ಭಾಷಣ ಗಳಿಂದ ಜಾಗತಿಕ ಮಟ್ಟದಲ್ಲಿ ಇಂದು ಗುರುತಿಸಲ್ಪಟ್ಟ ಎಡ್ವರ್ಡ್ ಸೈದ್ ಅವರ ಚಿಂತನೆಗಳನ್ನು ಗ್ರಹಿಸಲು ಈ ಪುಸ್ತಕ ತುಂಬ ಸಹಕಾರಿ. ಶ್ರೀಮಂತ ರಾಷ್ಟ್ರಗಳು ಸುಧಾರಣೆಯ ನೆಪದಲ್ಲಿ ಬಡರಾಷ್ಟ್ರಗಳಲ್ಲಿ ತಮ್ಮ ವಸಾಹತು ಸ್ಥಾಪಿಸಿ ಯಜಮಾನ ಸಂಸ್ಕೃತಿ ಬೆಳೆಸುವುದನ್ನು ವಿರೋಧಿಸುವ ಸೈದ್ ಹಿಂದೆ ಪ್ಯಾಲೆಸ್ತೀನ್ ನಿರಾಶ್ರಿತರಾಗಿದ್ದರು. ಅಮೆರಿಕಾದ ವಿಶ್ವವಿದ್ಯಾನಿಲಯದಲ್ಲಿ ತೌಲನಿಕ ಸಾಹಿತ್ಯ ವಿಭಾಗದ ಪ್ರಾಧ್ಯಾಪಕರಾಗಿದ್ದರು. ಪ್ರಮುಖ ರಾಜಕೀಯ ಚಿಂತಕರಲ್ಲೊಬ್ಬರಾಗಿದ್ದರು. ವಿಶೇಷವಾಗಿ ಈ ಪುಸ್ತಕದಲ್ಲಿ ಸೈದ್ ಅವರನ್ನೂ ಅವರ ಇತಿಹಾಸದ ಬರೆವಣಿಗೆಯನ್ನೂ ಹೊಸ ಜಾಗತಿಕ ದೃಷ್ಟಿಕೋನವೊಂದನ್ನೂ ಪರಿಚಯಿಸುವ ಪ್ರಯತ್ನ ಮಾಡಲಾಗಿದೆ.

Related Books