ಒಲವಿನ ದೈವ

Author : ಮಹಾಬಲೇಶ್ವರ ರಾವ್

Pages 100

₹ 130.00




Year of Publication: 2023
Published by: ಕದಂಬ ಪ್ರಕಾಶನ
Address: ನಂ.834, 62ನೆ ಅಡ್ಡರಸ್ತೆ, ಕುಮಾರಸ್ವಾಮಿ ಲೇಔಟ್, 1ನೇ ಹಂತ, ಬೆಂಗಳೂರು-78

Synopsys

‘ಒಲವಿನ ದೈವ’ ಮಹಾಬಲೇಶ್ವರ ರಾವ್ ಅವರ ಅನುವಾದಿತ ಕೃತಿ. ಈ ಕೃತಿಯು ಕೃಷ್ಣನ ಪ್ರೇಮ, ವಿಶ್ವಾಸ, ತತ್ತ್ವ ದರ್ಶನ ಮತ್ತು ಇನ್ನಿತರ ವಿಚಾರಗಳ ಬಗೆಗಿನ ಚಿಂತನೆ ಕೃಷ್ಣನ ಕತೆ ನಮಗಾರಿಗೂ ಹೊಸದಲ್ಲವಾದರೂ ಲೋಕದೊಡನೆ ಕೃಷ್ಣನ ಸಂಬಂಧ, ಎಲ್ಲ ಕಾಲಕ್ಕೂ ಅಗತ್ಯವಾದ ಪ್ರೇಮಭಾವದ ಪ್ರಸಾರಕನಾಗಿರುವ ಅವತಾರಪುರುಷನ ಅಗತ್ಯ ಸರಿದಾರಿ ತೋರುತ್ತ ದಾರಿತಪ್ಪಿದವರನ್ನು ಶಿಕ್ಷಿಸುವ ಧೈರ್ಯ ಇವನ್ನೆಲ್ಲ ಒಳಗೊಳ್ಳುವಂತೆ ಆಚಾರ್ಯರು ಬರೆದಿರುವುದನ್ನು ಓದಿ ಸ್ವಯಂಸ್ಪೂರ್ತಿಯಿಂದ ಶಿಕ್ಷಣ ತಜ್ಞ ಪ್ರೊ, ಮಹಾಬಲೇಶ್ವರ ರಾವ್ ಕನ್ನಡಕ್ಕೆ ಸರಳ ಸುಂದರವಾಗಿ ಅನುವಾದಿಸಿದ್ದಾರೆ.

About the Author

ಮಹಾಬಲೇಶ್ವರ ರಾವ್

ಮಹಾಬಲೇಶ್ವರ ರಾವ್ ಅವರು 1952ರಲ್ಲಿ ಉಡುಪಿ ಜಿಲ್ಲೆಯ ಮಣೂರಿನಲ್ಲಿ ಜನಿಸಿದರು. ಎಂ.ಎ., ಎಂ.ಎಡ್ ಮತ್ತು ಪಿಎಚ್.ಡಿ. ಪದವೀಧರರಾದ ಅವರು ಆರು ವರ್ಷ ಪ್ರೌಢಶಾಲಾ ಕನ್ನಡ ಶಿಕ್ಷಕರಾಗಿ, ಮೂರು ವರ್ಷ ಆಕಾಶವಾಣಿಯ ಭದ್ರಾವತಿ ಹಾಗೂ ಮಂಗಳೂರು ಕೇಂದ್ರಗಳಲ್ಲಿ ಪ್ರಸಾರಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಮಹಾಬಲೇಶ್ವರ ರಾವ್‌ ಕಳೆದ ನಾಲ್ಕು ದಶಕಗಳಿಂದ ಕನ್ನಡ ಭಾಷಾ ಬೋಧನೆ, ಬರವಣಿಗೆ, ಭಾಷಣ, ಸಾಹಿತ್ಯ ಮೊದಲಾದ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಲೇಖಕರಾಗಿ, ಅನುವಾದಕರಾಗಿ, ಅಂಕಣಕಾರರಾಗಿ ತಮ್ಮದೇ ಛಾಪು ಮೂಡಿಸಿರುವ ಅವರು 14ವರ್ಷ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿದ್ದಾರೆ.  ’ಉದಯವಾಣಿ’, ’ಪ್ರಜಾವಾಣಿ’, ’ತರಂಗ’, ’ಹೊಸತು’ ಮೊದಲಾದ ಕನಡ ದಿನಪತ್ರಿಕೆ, ಮ್ಯಾಗಸೈನ್‌ಗಳಲ್ಲಿ ಅವರ ನೂರಾರು ಲೇಖನಗಳನ್ನು ಪ್ರಕಟಣೆ ಕಂಡಿವೆ.  ...

READ MORE

Related Books