ನಿಂತ ನೆಲವೇ ಬಾಯ್ಬಿಟ್ಟಾಗ

Author : ಟಿ.ಎಸ್. ವೇಣುಗೋಪಾಲ್

Pages 88

₹ 100.00




Year of Publication: 2023
Published by: ಋತುಮಾನ ಟ್ರಸ್ಟ್
Address: ಎಫ್-3, ಎ ಬ್ಲಾಕ್, ಶಾಂತಿನಿಕೇತನ ಅಪಾರ್ಟ್ಮೆಂಟ್, ಶಾಂತಿನಿಕೇತನ ಬಡಾವಣೆ, ಅರೆಕೆರೆ, ಬನ್ನೇರುಘಟ್ಟ ರಸ್ತೆ, ಬೆಂಗಳೂರು- 560076.
Phone: 9480009997

Synopsys

ಸಮಕಾಲೀನ ವಿಷಯಗಳಿಗೆ ಪ್ರವೇಶಿಕೆಯಾಗುವಂತ, ಕಿರು ಅವಧಿಯಲ್ಲಿ ಓದಿ ಮುಗಿಸಬಹುದಾದ, ಅಂಗೈಯಗಲದ ಕಿರು ಹೊತ್ತಿಗೆಗಳನ್ನು ಋತುಮಾನ ತರಲಿಚ್ಛಿಸಿದೆ. ಈ 'ಪ್ರಸ್ತುತ' ಸರಣಿಯ ಮೊದಲ ಕೃತಿ ನೊಬೆಲ್ ವಿಜೇತ ದಂಪತಿ ಅಭಿಜಿತ್ ಬ್ಯಾನರ್ಜಿ ಮತ್ತು ಎಸ್ತರ್ ಡುಫ್ಲೋ ಅವರ ವಲಸೆಯ ಕುರಿತ ಚಿಂತನೆಗಳ "ನಿಂತ ನೆಲವೇ ಬಾಯ್ಬಿಟ್ಟಾಗ" . ಟಿ. ಎಸ್. ವೇಣುಗೋಪಾಲ್ ಮತ್ತು ಶೈಲಜಾ ದಂಪತಿ ಇದನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಯುರೋಪ್ ಮತ್ತು ಅಮೆರಿಕೆಯ ರಾಜಕಾರಣದಲ್ಲಿ ವಲಸೆ ಅನ್ನೋದು ಮುಖ್ಯ ವಿಷಯ. ವಿಶ್ವದ ಶ್ರೀಮಂತ ರಾಷ್ಟ್ರಗಳಲ್ಲಿ ರಾಜಕೀಯವಾಗಿ ಇಂದು ಇದರ ಪ್ರಭಾವ ವಿಪರೀತವಾಗಿದೆ. ಐರೋಪ್ಯ ದೇಶಗಳಲ್ಲಿನ ಮುಖ್ಯವಾಹಿನಿಯ ಪಕ್ಷಗಳಿಗೂ ಇದನ್ನು ನಿಭಾಯಿಸುವುದಕ್ಕೆ ಕಷ್ಟವಾಗುತ್ತಿದೆ. ಅವುಗಳು ಪ್ರತಿಪಾದಿಸುತ್ತಿರುವ ಉದಾರವಾದಿ ಪರಂಪರೆಯೇ ಬೇರೆ, ಅದು ಗಡಿಯಲ್ಲಿ ಕಾಣುತ್ತಿರುವ ಅಪಾಯವೇ ಬೇರೆ. ಅವೆರಡನ್ನು ಹೊಂದಿಸಿಕೊಂಡು ಹೋಗುವುದಕ್ಕೆ ಅವು ಹೆಣಗಾಡುತ್ತಿವೆ. ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಅದರ ತೀವ್ರತೆ ಅಷ್ಟು ಇಲ್ಲ. ಆದರೂ ದಕ್ಷಿಣ ಆಫ್ರಿಕಾದಲ್ಲಿ ಜಿಂಬಾಬ್ವೆಯ ನಿರಾಶ್ರಿತರ ಮೇಲೆ ನಡೆಯುತ್ತಿರುವ ಕಾಳಗವಾಗಲಿ, ಬಾಂಗ್ಲಾದೇಶದಲ್ಲಿ ರೋಹಿಂಗ್ಯಾ ಬಿಕ್ಕಟ್ಟಾಗಲಿ, ಮತ್ತು ಭಾರತದಲ್ಲಿ ಅಸ್ಸಾಮಿನ ಪೌರತ್ವ ಮಸೂದೆಯಾಗಲಿ ಇವೆಲ್ಲಾ ಅದಕ್ಕೆ ಗುರಿಯಾದವರಿಗೆ ಆತಂಕಕಾರಿ ವಿಷಯಗಳೇ. ಹಾಗಾದರೆ ನಿಜವಾಗಿಯೂ ಆತಂಕಕ್ಕೆ ಕಾರಣಗಳಿವೆಯೇ ? ಇತಿಹಾಸ ಮತ್ತು ಪ್ರಸ್ತುತ ಅಂಕಿಅಂಶಗಳು ನಿಜವಾಗಿಯೂ ಏನು ಹೇಳುತ್ತದೆ ? ಜಾಗತಿಕವಾಗಿ ಇರುವ ಈ ವಲಸೆ ಸಮಸ್ಯೆಯನ್ನು ನಾವು ನೋಡಬೇಕಿರುವುದು ಹೇಗೆ ? ಎಂಬೆಲ್ಲಾ ಪ್ರಶ್ನೆಗಳಿಗೆ ಪುಟ್ಟ ಕಿಟಕಿ ಈ ಕೃತಿ.

About the Author

ಟಿ.ಎಸ್. ವೇಣುಗೋಪಾಲ್
(24 April 1955)

ಲೇಖಕ ಟಿ. ಎಸ್. ವೇಣುಗೋಪಾಲ್ ಅವರು ಮೈಸೂರಿನವರು. 1955 ಏಪ್ರಿಲ್ 24  ರಂದು ಜನನ. ಸಂಖ್ಯಾಶಾಸ್ತ್ರ ಪ್ರಾಧ್ಯಾಪಕ. ‘ವಾದಿ ಸಂವಾದಿ, ಧರೆಗಿಳಿದ ನಾಟ್ಯತಾರೆ, ಗಾನವಸಂತ, ಭಗವದ್ಗೀತೆ, ಸಾಮಾಜಿಕ ಆರ್ಥಿಕ ಸಂಗತಿಗಳ ಒಳನೋಟ, ಪುರಾಣ ಮತ್ತು ವಾಸ್ತವ’ ಮುಂತಾದ ಕೃತಿಗಳನ್ನು ಲೇಖಕಿ ಶೈಲಜಾ ಅವರೊಂದಿಗೆ ಸಂಪಾದಿಸಿದ್ದಾರೆ. ...

READ MORE

Related Books