ಭ್ರಮೆಯ ಭವಿಷ್ಯ

Author : ಬಿ. ಸುಜ್ಞಾನಮೂರ್ತಿ

₹ 110.00




Year of Publication: 2022
Published by: ಲಡಾಯಿ ಪ್ರಕಾಶನ
Address: 21, ಪ್ರಸಾದ್ ಹಾಸ್ಟೆಲ್, ಗದಗ- 582101
Phone: 9480286844

Synopsys

ಲೇಖಕ ಬಿ. ಸುಜ್ಞಾನಮೂರ್ತಿ ಅವರ ಅನುವಾದಿತ ಕೃತಿ ಭ್ರಮೆಯ ಭವಿಷ್ಯ. ಧರ್ಮದ ಬಗ್ಗೆ ಮನೋವಿಶ್ಲೇಷಣೆ ಎಂಬ ಉಪಶೀರ್ಷಿಕೆ ಈ ಕೃತಿಗಿದೆ. ಮನಸ್ಸಿನಲ್ಲಿ ಕಾಮವಾಂಛೆಗಳೊಂದಿಗೆ ಹಣ್ಣುಗಾಯಿ ನೀರುಗಾಯಿಯಾಗುವ ವ್ಯಕ್ತಿ ಆ ಬಯಕೆಗಳ ಉದಾತ್ತೀಕರಣದ ಮೂಲಕ ಪರಮಭಕ್ತನಾಗಿ ಪೂಜೆ ಪುನಸ್ಕಾರಗಳಲ್ಲಿ ಸದಾ ಮುಳುಗಿ ತೇಲಬಹುದು. ತನ್ನನ್ನು ತಾನು ಅಲ್ಪನಾಗಿ ಕೈಯಲ್ಲಾಗದದವನಂತೆ ಭಾವಿಸುವ ಇತರರ ಮೇಲೆ ಅಧಿಕಾರ ಚಲಾಯಿಸಬಹುದು. ನಮ್ಮ ಮಾನಸಿಕ ಸ್ವರೂಪವನ್ನು ಫಾಯ್ಡ್ ಒಂದು ಮಂಜಿನಗಡ್ಡೆಯಂತೆ ಎಂದು ಬಣ್ಣಿಸಿದ್ದಾನೆ. ಈ ಕುರಿತು ಅನೇಕ ಲೇಖನಗಳು ಈ ಕೃತಿಯಲ್ಲಿದೆ.

About the Author

ಬಿ. ಸುಜ್ಞಾನಮೂರ್ತಿ
(06 July 1960)

ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗದಲ್ಲಿ ಸಹಾಯಕ ನಿರ್ದೇಶಕರಾಗಿರುವ ಬಿ. ಸುಜ್ಞಾನಮೂರ್ತಿ ಅವರು ಅನುವಾದ ಕ್ಷೇತ್ರದಲ್ಲಿ ಮಹತ್ವದ ಕೆಲಸ ಮಾಡುತ್ತಿದ್ದಾರೆ. ಯಾರದೀ ಕಾಡು, ಅಸಮರ್ಥನ ಜೀವನಯಾತ್ರೆ, ಬೆಕ್ಕಿನ ಆತ್ಮಕತೆ, ನೇಣುಗಂಬದ ನೆರಳಿನಲ್ಲಿ, ನಮಗೆ ಗೋಡೆಗಳಲ್ಲ, ಜಾತಿವಿನಾಪ, ದಲಿತತತ್ವ, ಪುರುಷ ಅಹಂಕಾರಕ್ಕೆ ಸವಾಲ್, ದಲಿತ ಹೋರಾಟಗಾರ ಅರ್ಯ ಕಾಳಿ, ಚಾರ ಮಾರ್ಗವಿನಾಶ, ಪರಿಯಾರ್ ಜೀವನಚಳವಳಿ, ತಿಗುರಿ ತಿರುಗಿಸು ನೇಗಿಲು ಉಳು, ದಲಿತ ರಾಜಕೀಯ, ಆಕಾಶದೇವರು, ಮುಸತಿ ಅಪರಾಧ-ಶಿಕ್ಷೆ, ಸ್ವಾಭಿಮಾನದ ಮದುವೆಗಳು, ಆಸ್ಪಕೃತ, ತೆಲಂಗಾಣ ಹೋರಾಟ ಆದ ಪ್ರಮುಖ ಅನುವಾದಿತ ಕೃತಿಗಳು. ಯಾರದೀ ಕಾಡು ಕಾದಂಬರಿಗೆ ಮತ್ತು ತೆಲಂಗಾಣ ಹೋರಾಟ ಕೃತಿಗೆ ಕರ್ನಾಟಕ ...

READ MORE

Related Books