M ಡಾಕ್ಯುಮೆಂಟ್

Author : ರಾಜಾರಾಂ ತಲ್ಲೂರು

Pages 592

₹ 625.00




Year of Publication: 2023
Published by: ಅಹರ್ನಿಶಿ ಪ್ರಕಾಶನ
Address: ಅಹರ್ನಿಶಿ ಪ್ರಕಾಶನ, ಅಂಚೆ ಕಚೇರಿ ರಸ್ತೆ, ಕೋಟೆ, ಶಿವಮೊಗ್ಗ - 577202
Phone: 9449174662

Synopsys

“M ಡಾಕ್ಯುಮೆಂಟ್” ಭಾರತ ಏರುಗತಿ ಬೆಳವಣಿಗೆಯ ದಿನಗಳ ಕಥನವಾಗಿದ್ದು, ಮೊಂಟೆಕ್ ಸಿಂಗ್ ಅಹ್ಲೂವಾಲಿಯಾ ಅವರ ಮೂಲಕ ಕೃತಿಯನ್ನು ರಾಜಾರಾಂ ತಲ್ಲೂರು ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. 1980-2014 ತನಕದ ಭಾರತದ ಸಾಮಾಜಿಕ, ಆರ್ಥಿಕ ಚರಿತ್ರೆ ಇದು. ಇದನ್ನು “ಫರ್ಸ್ಟ್ ಹ್ಯಾಂಡ್ ಇನ್ಫಾರ್ಮೇಷನ್” ಸಹಿತ ಒಳಮನೆಯ ದೃಷ್ಟಿಕೋನದಿಂದ ಬರೆಯಬಹುದಾಗಿದ್ದವರು ಕೇವಲ ಇಬ್ಬರೇ ಇಬ್ಬರು. ಒಬ್ಬರು ಭಾರತದ ಪ್ರಧಾನಿ ಆಗಿದ್ದ ಡಾ| ಮನಮೋಹನ್ ಸಿಂಗ್; ಇನ್ನೊಬ್ಬರು ಮೊಂಟೆಕ್ ಸಿಂಗ್ ಅಹ್ಲೂವಾಲಿಯಾ. ಮನಮೋಹನ್ ಸಿಂಗ್ ಈ ಚರಿತ್ರೆಯನ್ನು ದಾಖಲಿಸಿಲ್ಲ ಮತ್ತು ಹೆಚ್ಚಿನಂಶ ಇನ್ನು ದಾಖಲಿಸುವುದು ಅವರ ಪ್ರಾಯದ ಕಾರಣಕ್ಕೆ ಸಾಧ್ಯವಾಗದು. ಹಾಗಾಗಿ ಈ ಪುಸ್ತಕ ನಿಸ್ಸಂದೇಹವಾಗಿ ಭಾರತದ ಆ ಅವಧಿಯ ಬಹಳ ಅಥೆಂಟಿಕ್ ದಾಖಲೆ.

ಪುಸ್ತಕದಲ್ಲಿ ನಾಲ್ಕು ಭಾಗಗಳಿವೆ. ಮೊದಲ ಭಾಗ ಮೊಂಟೆಕ್ ಅವರ ಬದುಕಿನ ಆರಂಭಿಕ ದಿನಗಳ ಆತ್ಮಕಥೆಯಂತಿದೆ. ಎರಡನೇ ಭಾಗ 1980-1991ರ ತನಕದ ನಡುವಿನ ಅವಧಿಯಲ್ಲಿ ಆರ್ಥಿಕ ಉದಾರೀಕರಣದ ಚಿಂತನೆಗಳಿಗೆ ಕಾರಣವಾದ ರಾಜಕೀಯ-ಆರ್ಥಿಕ-ಸಾಮಾಜಿಕ-ಜಾಗತಿಕ ಬಿಕ್ಕಟ್ಟುಗಳ ಸನ್ನಿವೇಶಗಳನ್ನು ವಿವರಿಸುತ್ತದೆ. ಮೂರನೇ ಭಾಗದಲ್ಲಿ, 1991ರ ಬಳಿಕದ ಆರ್ಥಿಕ ಸುಧಾರಣೆಗಳ ಆರಂಭದ ದಿನಗಳನ್ನು ವಿವರಿಸಲಾಗಿದೆ. ಭಾಗ 4 ರಲ್ಲಿ ಮನಮೋಹನ್ ಸಿಂಗ್ ಅವರ ಹತ್ತು ವರ್ಷಗಳ ಅವಧಿಯನ್ನು ಇಂಚಿಂಚಾಗಿ ಬಿಚ್ಚಿಡಲಾಗಿದೆ. ಇದಲ್ಲದೇ ಉಪಸಂಹಾರದಲ್ಲಿ ತೀರಾ ಇತ್ತೀಚೆಗಿನ ನೋಟು ರದ್ಧತಿ, GST ಮತ್ತಿತರ ಸಂಗತಿಗಳನ್ನೂ ಚರ್ಚಿಸಿದ್ದಾರೆ.

About the Author

ರಾಜಾರಾಂ ತಲ್ಲೂರು

ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು ಅವರು ಉಡುಪಿಯ ಕುಂದಾಪುರ ತಾಲ್ಲೂಕಿನ ತಲ್ಲೂರು ಗ್ರಾಮದಲ್ಲಿ 1969ರಲ್ಲಿ ಜನಿಸಿದರು. ಅಲ್ಲೇ ಪ್ರಾಥಮಿಕ ಶಿಕ್ಷಣ, ಸುರತ್ಕಲ್ಲಿನಲ್ಲಿ ಮಾಧ್ಯಮಿಕ ಮತ್ತು ಪದವಿ ಶಿಕ್ಷಣ ಪೂರ್ಣಗೊಳಿಸಿದ ಅವರು ಕರಾವಳಿ ಅಲೆ, ಕೆನರಾಟೈಮ್ಸ್, ಜನಂತರಂಗ ಬಳಗದಲ್ಲಿ ಪತ್ರಕರ್ತರಾಗಿ ದುಡಿಮೆ ಆರಂಭಿಸಿದರು. ಪಟ್ಟಾಂಗ ಎಂಬ ಪತ್ರಿಕೆ ಮತ್ತು ಸವಿ ಎಂಬ ಜಾಹೀರಾತು ಏಜೆನ್ಸಿ ಪ್ರಾರಂಭಿಸಿದ ಅವರು 2000 ಇಸವಿಯಲ್ಲಿ ಉದಯವಾಣಿ ಆನ್ ಲೈನ್ ಆವೃತ್ತಿ ಪ್ರಾರಂಭಿಸಿದಾಗ ಅದರ ಸುದ್ದಿ ಸಂಪಾದಕರಾಗಿ ಮುಖ್ಯಸ್ಥನಾಗಿ ಕಾರ್ಯ ನಿರ್ವಹಿಸಿದರು. 2001ರಲ್ಲಿ ಉದಯವಾಣಿ ಆರೋಗ್ಯ ಪುರವಣಿಯಲ್ಲಿ ಆರಂಭಗೊಂಡಾಗ ಅದರ ಸಂಪಾದಕರಾಗಿ ಸೇವೆಸಲ್ಲಿಸಿದ ಅವರು 2017ರ ತನಕವೂ ಆರೋಗ್ಯವಾಣಿಯ ಸಂಪಾದಕೀಯ ಉಸ್ತುವಾರಿ ನೋಡಿಕೊಂಡರು. ಈ ...

READ MORE

Related Books