ಹಿಂದುತ್ವ

Author : ಜಿ.ಬಿ. ಹರೀಶ

Pages 230

₹ 100.00




Year of Publication: 2009
Published by: ರಾಷ್ಟ್ರೋತ್ಥಾನ ಸಾಹಿತ್ಯ
Address: ಕೇಶವ ಶಿಲ್ಪ, ಕೆಂಪೇಗೌಡ ನಗರ, ಬೆಂಗಳೂರು-560019.
Phone: 9945036300

Synopsys

ಹಿಂದುತ್ವ ಇತಿಹಾಸ ಬರಹದ ಪುಸ್ತಕವನ್ನು ವಿನಾಯಕ ದಾಮೋದರ್‌ ಸಾವರ್ಕರ್‌ ಅವರು ರಚಿಸಿದ್ದಾರೆ. ಈ ಕೃತಿಯ ಕನ್ನಡನುವಾದವನ್ನು ಜಿ. ಬಿ. ಹರೀಶ ಅವರು ಮಾಡಿದ್ದಾರೆ. ಈ ಪುಸ್ತಕದಲ್ಲಿ ಹಿಂದುಗಳು ವೇದಭೂಮಿಯಾದ ಸಿಂಧುಸ್ಥಾನದಿಂದ, ಸಿಂಧು ನದಿಯಿಂದ, ಸಿಂಧು ಸಮುದ್ರಗಳಿಂದ ತಮ್ಮ ಹೆಸರನ್ನು ಪಡೆದಿದ್ದಾರೆ. ಋಗ್ವೇದ ಎಷ್ಟು ಪ್ರಾಚೀನವೋ ಹಿಂದು ಹೆಸರು, ಹಿಂದು ಜನಾಂಗ, ಹಿಂದು ಧರ್ಮ ಅಷ್ಟೇ ಪ್ರಾಚೀನ ಎಂಬುದನ್ನು ಹಿಂದುತ್ವ ಕೃತಿಯಲ್ಲಿ ಸಾವರ್ಕರ್ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಹಿಂದುತ್ವ ಅತ್ಯಂತ ವಿಶಾಲ ಪರಿಕಲ್ಪನೆ, ಹಿಂದು ಧರ್ಮ, ಸನಾತನ ಧರ್ಮ ಅದರ ಒಂದು ಭಾಗ ಮಾತ್ರ ಎಂಬುದು ಸಾವರ್ಕರ್ ಅವರ ಮುಖ್ಯ ಪ್ರತಿಪಾದನೆ. ಹಿಂದುಗಳ ಪ್ರಾಮಾಣಿಕತೆ, ಧರ್ಮಶ್ರದ್ಧೆ, ಕವಿತ್ವ, ಪರಾಕ್ರಮದ ಕಥೆ ಈ ಗ್ರಂಥದ ಪ್ರತಿಯೊಂದು ಪುಟದಲ್ಲೂ ತುಂಬಿದೆ. ಹಿಂದುಗಳ ಭವ್ಯತೆ ಹಾಗೂ ಸದ್ಯದ ಆತಂಕದ ಪರಿಸ್ಥಿತಿಯ ಬಗ್ಗೆ ಕಾಳಜಿ ಇರುವ ಪ್ರತಿಯೊಬ್ಬರೂ ಓದಬೇಕಾದ ಕೃತಿ ಸಾವರ್ಕರ್ ಅವರ ಹಿಂದುತ್ವ ಎಂದು ಕೃತಿಯ ಕುರಿತಾಗಿ ಇಲ್ಲಿ ವಿವರಿಸಲಾಗಿದೆ.

About the Author

ಜಿ.ಬಿ. ಹರೀಶ

ಜಿ.ಬಿ ಹರೀಶ್ ಅವರು ಹೊಸ ತಲೆಮಾರಿನ ಗಂಭೀರ ವಿಮರ್ಶಕರಲ್ಲಿ ಒಬ್ಬರು. ಕನ್ನಡ ಕಾವ್ಯಗಳು, ಜೈನ, ಬೌದ್ಧ ಮತ್ತು ಶಾಸ್ತ್ರ ಸಾಹಿತ್ಯ ವಿಷಯಗಳಲ್ಲಿ ವಿಶೇಷ ಪರಿಣತಿ ಪಡೆದಿದ್ದಾರೆ. ಮೈಸೂರು ವಿ.ವಿ.ಯಿಂದ ಕನ್ನಡ ಸ್ನಾತಕೋತ್ತರ ಪದವಿಯನ್ನು ಪಡೆದು ಕೊಂಡ ಇವರು ದೇವಚಂದ್ರನ ರಾಜಾವಳಿ ಕಥಾಸಾರ: ಜೈನ ಸಾಹಿತ್ಯಕ, ಸಾಂಸ್ಕೃತಿಕ ಮತ್ತು ಐತಿಹಾಸಿಕ ಅಧ್ಯಯನ ಎಂಬ ವಿಷಯದಲ್ಲಿ ಪಿಎಚ್.ಡಿ. ಪದವಿ ಪಡೆದಿದ್ದಾರೆ. ಸಾಹಿತ್ಯ, ಕಲೆ ಮತ್ತು ತತ್ವಶಾಸ್ತ್ರ ಇವರ ಆಸಕ್ತಿಯ ಕ್ಷೇತ್ರಗಳು, ತುಮಕೂರು ವಿ.ವಿ., ಬೆಂಗಳೂರಿನ ಶೇಷಾದ್ರಿಪುರಂ ಸ್ನಾತಕೋತ್ತರ ಕೇಂದ್ರ, ಎಂ.ಇ.ಎಸ್. ಸ್ನಾತಕೋತ್ತರ ಕೇಂದ್ರ, ಬಿ.ಎಂ.ಶ್ರೀ. ಸ್ಮಾರಕ ಪ್ರತಿಷ್ಠಾನ ಸೇರಿದಂತೆ ಹಲವು ...

READ MORE

Related Books