ಟುಂಟುಣಿ ಮತ್ತು ಇತರ ಪುಟಾಣಿ ಕತೆಗಳು

Author : ನಾಗಮಣಿ ಎಸ್.ಎನ್

Pages 112

₹ 140.00




Year of Publication: 2023
Published by: ನವಕರ್ನಾಟಕ ಪ್ರಕಾಶನ
Address: 101, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಕುಮಾರ ಪಾರ್ಕ್ ಈಸ್ಟ್, ಬೆಂಗಳೂರು - 560 001
Phone: 080 - 22161900 / 22161901 / 22161902

Synopsys

`ಟುಂಟುಣಿ ಮತ್ತು ಇತರ ಪುಟಾಣಿ ಕತೆಗಳು’ ಕೃತಿಯು ನಾಗಮಣಿ ಎಸ್. ಎನ್ ಹಾಗೂ ಸರಸಿಜ ಆರ್.ಸಿ ಅವರ ಅನುವಾದಿತ ಬಂಗಾಳಿ ಮೂಲದ ಪ್ರಸಿದ್ಧ ಜಾನಪದ ಕತಾಸಂಕಲನವಾಗಿದೆ. ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ; ಈ ಜಾನಪದ ಕಥೆಗಳು ಬಂಗಾಳಿಯಿಂದ ಅನುವಾದಿತವಾದವು. ಬಾಂಗ್ಲಾ ಪ್ರಾಂತ್ಯದ ಹಳ್ಳಿಯ ಆಡುಭಾಷೆಯಲ್ಲಿ 1913ರಲ್ಲಿ ರಚಿತವಾದ ಟುಂಟುಣಿ‌ ಬೊಇ (ಟುಂಟುಣಿ ಮತ್ತು ಇತರ ಪುಟಾಣಿ ಕತೆಗಳು) ಬಂಗಾಳಿ ಸಾಹಿತ್ಯ ಲೋಕದಲ್ಲಿ ಒಂದು ಮೈಲಿಗಲ್ಲು. ಅಂದಿನಿಂದ ಚಿಕ್ಕವರಷ್ಟೇ ಅಲ್ಲದೆ ದೊಡ್ಡವರೂ ಕೂಡ ಓದಿ ಆನಂದಿಸಿದ, ಪಂಡಿತ ಪಾಮರರೆನ್ನದೆ ಎಲ್ಲರ ಮನ ಸೆಳೆದ, ಇಂದಿಗೂ ಬಹು ಜನಪ್ರಿಯವಾಗಿರುವ ಈ ಕತೆಗಳನ್ನು ಗುರುದೇವ ರವೀಂದ್ರನಾಥ ಟಾಗೂರರು ಬಹುವಾಗಿ ಮೆಚ್ಚಿಕೊಂಡಿದ್ದರು. ಹಾಸ್ಯರಸ ತುಂಬಿರುವ ಈ ಕತೆಗಳು ಕರುಣರಸವನ್ನೂ ಒಡಲೊಳಗೆ ಬಚ್ಚಿಟ್ಟುಕೊಂಡಿವೆ. ಮಾನವ ಪ್ರಕೃತಿಯ ಸಂಬಂಧದ ಬಗ್ಗೆ ಆಳವಾಗಿ ಆಲೋಚಿಸುವಂತೆ ಮಾಡುತ್ತವೆ, ಬಂಗಾಳಕ್ಕೆ ಮಾತ್ರ ಸೀಮಿತವಾಗದೆ ವಿಶ್ವಾತ್ಮಕ ಗುಣ ಹೊಂದಿವೆ.

About the Author

ನಾಗಮಣಿ ಎಸ್.ಎನ್

ಅನುವಾದಕಿ ನಾಗಮಣಿ ಎಸ್.ಎನ್. ಅವರು ಬರಹಗಾರ್ತಿ. ಮೂಲತಃ ಮಂಡ್ಯ ಜಿಲ್ಲೆಯ ಶಿವಾರ ಗ್ರಾಮದವರು. ಪ್ರಸ್ತುತ ಬೆಂಗಳೂರಿನಲ್ಲಿ ವಾಸ್ತವ್ಯ. ಶಿಕ್ಷಣ ಕ್ಷೇತ್ರ, ಭಾಷಾ ಬೋಧನೆ, ಮಹಿಳಾ ಅಧ್ಯಯನದಲ್ಲಿ ವಿಶೇಷ ಆಸಕ್ತಿ. ವೃತ್ತಿಯಲ್ಲಿ ಕನ್ನಡ ಪ್ರಾಧ್ಯಾಪಕಿಯಾಗಿದ್ದಾರೆ. ಕೃತಿಗಳು: ಟುಂಟುಣಿ ಮತ್ತು ಇತರ ಪುಟಾಣಿ ಕತೆಗಳು ...

READ MORE

Related Books