ಹಿಮಾಚಲವನ್ನಾಳಿದ ಕರ್ನಾಟ ಸೇನರು

Author : ಸದಾನಂದ ಕನವಳ್ಳಿ

Pages 114

₹ 50.00




Year of Publication: 2004
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು

Synopsys

ಹಿಮಾಚಲ ಪ್ರದೇಶದ ಜನರಿಗೆ ಬೀರಸೇನನ ವೀರೋಚಿತ ಭವ್ಯ ಸಾಧನೆಗಳು ಹೆಚ್ಷೂ ಕಡಿಮೆ ಪರಿಚಿತವಿದೆ. ಆದರೆ, ದಕ್ಷಿಣದಿಂದ (ಕರ್ನಾಟಕದಿಂದ) ವಲಸೆ ಬಂದ ಮೇಲೆ ಬೀರಸೇನನ ಪೂರ್ವಜರು ಬಂಗಾಲವನ್ನು ಅಳಿದುದಾಗಲಿ, ದಕ್ಷಿಣ ಭಾರತದ ಸಾಂಸ್ಕೃತಿಕ ಅಂಶಗಳ ಕೊಡುಗೆಯಿಂದ ಬಂಗಾಲದ ಸಂಸ್ಕೃತಿ ಶ್ರೀಮಂತಗೊಂಡು ಅಖಿಲ ಭಾರತೀಯ ಸಂಕೀರ್ಣ ಸಂಸ್ಕೃತಿಯಾಗಿ ಮಾರ್ಪಟ್ಟಿತೆಂಬುದಾಗಲಿ ಅಷ್ಟೊಂದು ಪರಿಚಿತವಿಲ್ಲ. ಹೀಗೆ ಹಿಮಾಚಲವನ್ನಾಳಿದ ಕರ್ನಾಟ ಸೇನರ ಕುರಿತು ಈ ಕೃತಿಯು ಮಾಹಿತಿ ನೀಡಿದೆ. ಇಂಗ್ಲಿಷ್‌ನಲ್ಲಿ ಡಾ. ಡಿ.ಬಿ. ಚಕ್ರವರ್ತಿ ಅವರು ರಚಿಸಿದ ಈ ಕೃತಿಯನ್ನು ಪ್ರೊ. ಸದಾನಂದ ಕನವಳ್ಳಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.

About the Author

ಸದಾನಂದ ಕನವಳ್ಳಿ
(18 September 1935 - 03 April 2015)

ಸಾಹಿತ್ಯ, ಸಂಗೀತ, ಕ್ರೀಡಾ ಪ್ರೇಮಿ ಸದಾನಂದ ಕನವಳ್ಳಿಯವರು (ಜನನ: 18-09-1935) ಸವಣೂರ ತಾಲ್ಲೂಕಿನ ಹಿರೇಮುಗದೂರ ಗ್ರಾಮದವರು. ತಂದೆ ವೀರಪ್ಪ, ತಾಯಿ ವೀರಮ್ಮ. ಪ್ರಾರಂಭಿಕ ಶಿಕ್ಷಣ ಹಾವೇರಿಯಲ್ಲಿ, ಧಾರವಾಡದ ಕರ್ನಾಟಕ ಕಾಲೇಜಿನಿಂದ ಬಿ.ಎ. (ಇಂಗ್ಲಿಷ್) ಮತ್ತು ಎಂ.ಎ. (ಇಂಗ್ಲಿಷ್) ಪದವೀಧರರು. ಡಾ. ವಿ.ಕೃ. ಗೋಕಾಕ್ ಮತ್ತು ಅರ್ಮೆಂಡೊ ಮೆನೆಜಿಸ್ ಶಿಷ್ಯರು. ಹುಬ್ಬಳ್ಳಿಯ ಪಿ.ಸಿ. ಜಾಬಿನ ವಿಜ್ಞಾನ ಕಾಲೇಜು, ವಿಜಯ ಕಾಲೇಜು, ವಿಜಾಪುರದ ಎ.ಎಸ್.ಪಿ. ಕಾಮರ್ಸ್ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದರು. ಕೊಪ್ಪಳದ ಗವಿಸಿದ್ದೇಶ್ವರ ಕಾಲೇಜು ಮತ್ತು ಮುನಿಸಿಪಲ್ ಆರ್ಟ್ಸ್ ಕಾಲೇಜು-ಲಕ್ಷ್ಮೇಶ್ವರದಲ್ಲಿ ಪ್ರಾಚಾರ‍್ಯರಾಗಿ ನಿವೃತ್ತರಾದರು. 1991-92ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಪ್ರಸಾರಾಂಗದ ನಿರ್ದೇಶಕರಾಗಿ, ಅಲ್ಪಾವಧಿಯಲ್ಲಿ 110 ಪುಸ್ತಕಗಳ ಪ್ರಕಟಣೆಯ ದಾಖಲೆ ಮಾಡಿದ್ದರು. ಕರ್ನಾಟಕ ವಿ.ವಿ ...

READ MORE

Related Books