ಬಾಲ್ಯದ ನೆನಪುಗಳು

Author : ನಾ. ದಾಮೋದರ ಶೆಟ್ಟಿ

Pages 170

₹ 180.00




Year of Publication: 2001
Published by: ನ್ಯಾಷನಲ್ ಬುಕ್ ಟ್ರಸ್ಟ್ ಆಫ್ ಇಂಡಿಯಾ
Address: #5, ನೆಹರೂ ಭವನ, ಇನ್ ಸ್ಟಿಟ್ಯೂಶನಲ್ ಏರಿಯಾ, 2ನೇ ಹಂತ, ವಸಂತ ಕುಂಜ, ಹೊಸದೆಹಲಿ-110070

Synopsys

‘ಬಾಲ್ಯದ ನೆನಪುಗಳು’ ಕಮಲಾ ಸುರಯ್ಯಾ ಅವರ ಮೂಲ ಕೃತಿಯಾಗಿದ್ದು, ನಾ. ದಾಮೋದರ ಶೆಟ್ಟಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಕೃತಿಯಲ್ಲಿನಮ ಕೆಲವೊಂದು ವಿಚಾರಗಳು ಹೀಗಿವೆ; ಅರಮನೆಯ ಮಹಾದ್ವಾರದಲ್ಲಿ ಎರಡು ಶಿಲಾವಿಗ್ರಹಗಳನ್ನು ಕಂಡ ನೆನಪು, ಅವರು ದ್ವಾರಪಾಲಕರೆಂಬುದಾಗಿ ಅಜ್ಜಿ ನನಗೆ ತಿಳಿಸಿದ್ದರು. ಕಲ್ಕತ್ತಾದ ಪಾರ್ಕ್‌ಟ್‌ನಲ್ಲಿ ನನ್ನ ಅಪ್ಪ ಅಮ್ಮಂದಿರು ವಾಸಿಸುತ್ತಿದ್ದ ಮನೆಯ ಗೇಟಿನ ಬಳಿ ಕಾಣುತ್ತಿದ್ದ ಕಾವಲುಗಾರನನ್ನು ನಾನು ಪ್ರೀತಿಪೂರ್ವಕ ನೆನಪಿಸಿಕೊಂಡೆ. ಜೀವಂತ ದ್ವಾರಪಾಲಕ, ಹಗ್ಗದ ಖೋಲಿಯಲ್ಲಿ ನನ್ನನ್ನು ತನ್ನೊಂದಿಗೆ ಕುಳ್ಳಿರಿಸಿಕೊಂಡು ನನ್ನ ಟೀಚರ ಬಗ್ಗೆಯೂ ದಾದಿಯ ಬಗ್ಗೆಯೂ ಪ್ರಶ್ನೆಗಳನ್ನು ಕೇಳುತ್ತಿದ್ದ ಪ್ರಿಯ ಸ್ನೇಹಿತ. ಅರಮನೆಯ ಮೊಗಸಾಲೆಯ ದಿಣ್ಣಿಗೆ ಆತು ಮಲಗಿಯೂ ನಲದಲ್ಲಿ ಅತ್ತಿತ್ತ ಅಲೆದಾಡುತ್ತಲೂ ಇದ್ದ ಅನೇಕ ಅರೆನಗ್ನ ಪುರುಷರು ನನ್ನ ಕಣ್ಣೆದುರು ಪ್ರತ್ಯಕ್ಷರಾದರು. ಅಂಗಿ ಧರಿಸದ ಅವರೆಲ್ಲ ಹಣೆಯಲ್ಲಷ್ಟೇ ಅಲ್ಲ; ಎದೆಯ ಮೇಲೂ ಚಂದನ ಹಚ್ಚಿದ್ದರು. ಮಳಲಿನಲ್ಲಿ ತಾಂಬೂಲದ ರಸ ಹರಡಿಕುಳಿತಿತ್ತು ಎಂದು ವಿವರಿಸಿದ್ದಾರೆ.

About the Author

ನಾ. ದಾಮೋದರ ಶೆಟ್ಟಿ
(02 August 1951)

ನಾದಾ ಎಂತಲೂ ಕರೆಯಲಾಗುವ ನಾ. ದಾಮೋದರ ಶೆಟ್ಟಿ ಅವರು 1951 ಆಗಸ್ಟ್‌ 2ರಂದು ಕಾಸರಗೋಡಿನ ಕುಂಬಳೆಯಲ್ಲಿ ಜನಿಸಿದರು. ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಇವರ ಪ್ರಮುಖ ಕೃತಿಗಳೆಂದರೆ ಸುಳುವಿನೊಳಗೆ, ಸರದಿ (ಕಾದಂಬರಿ), ಕೆ.ಎನ್. ಟೇಲರ್‌, ಮುದ್ದಣ ಬದುಕು-ಬರಹ, ನಾರಾಯಣಗುರು, ಪೇಜಾವರ ಸದಾಶಿವರಾಯರು, ಕೆ.ವಿ. ಸುಬ್ಬಣ್ಣ (ವ್ಯಕ್ತಿ ಪರಿಚಯ), ಭತ್ತದ ಕಾಳುಗಳು, ಕರಿಯ ದೇವರ ಹುಡುಕಿ, ಅಶ್ವತ್ಥಾಮ, ಬಾಲ್ಯದ ನೆನಪುಗಳು, ದೇವರ ವಿಕರಾಳಗಳು, ಸಾಕ್ಷಾತ್ಕಾರ, ಮಹಾಕವಿ ಜಿ. ಶಂಕರ ಕುರುಪ್, ಭರತವಾಕ್ಯ (ಅನುವಾದ), ಅದ್ಭುತ ರಾಮಾಯಣ, ಸ್ವಾತಂತ್ರದ ಸ್ವರ್ಣಹೆಜ್ಜೆ, ಸಾನ್ನಿಧ್ಯ, ಪೋಲಿ, ...

READ MORE

Related Books