ಹುಲ್ಲುಗಾವಲಲ್ಲಿ ಪುಟ್ಟ ಪಟ್ಟಣ

Author : ಎಸ್. ಅನಂತನಾರಾಯಣ

Pages 256

₹ 170.00




Published by: ಅಂಕಿತ ಪುಸ್ತಕ
Address: (ಪ್ರಕಾಶಕರು ಮತ್ತು ಪುಸ್ತಕ ಮಾರಾಟಗಾರರು), 53, ಗಾಂಧಿಬಜಾರ್‍ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು- 560 004
Phone: 08026617100

Synopsys

ಎಸ್. ಅನಂತನಾರಾಯಣ ಅವರ ಅನುವಾದಿತ ಕೃತಿ ‘ಹುಲ್ಲುಗಾವಲಲ್ಲಿ ಪುಟ್ಟ ಪಟ್ಟಣ’. ಲಾರಾ ಇಂಗಲ್ಸ್ ವೈಲ್ಡರ್ 1867ರಲ್ಲಿ ಅಮೆರಿಕಾದ ವಿಸ್ಕಾನ್ಸಿನ್ನಿನ (ಬಿಗ್ವುಡ್ಸ್) ದೊಡ್ಡ ಕಾಡಿನ ಪುಟ್ಟ ಮನೆಯಲ್ಲಿ ಹುಟ್ಟಿದಳು. ಕಾನ್ಸಾಸ್, ಮಿನ್ನೆಸೋಟ ಮತ್ತು ಡಕೋಟ ಪ್ರದೇಶಗಳಿಗೆ ತನ್ನವರೊಂದಿಗೆ ಮುಚ್ಚಿದ ಬಂಡಿಯಲ್ಲಿ ಪ್ರಯಾಣ ಮಾಡಿದಳು. ಅಲ್ಮಾಂಜೊ ವೈಲ್ಡರನ್ನು ಭೇಟಿಯಾಗಿ ಮದುವೆಯಾದಳು. ತನ್ನ ಎಳೆತನದ ಕಾಲದ ಅನುಭವಗಳನ್ನೇ ಆಧಾರವಾಗಿಟ್ಟುಕೊಂಡು ಆಕೆ ಒಂಬತ್ತು ಕಾದಂಬರಿಗಳನ್ನು ಬರೆದಿದ್ದಾಳೆ. ಕಾಡಿನಲ್ಲಿ ಪುಟ್ಟ ದಿಮ್ಮಿಯ ಮನೆಯೊಂದರಲ್ಲಿ ಇದ್ದುಕೊಂಡು, ಸ್ವಯಂ ಪರಿಪೂರ್ಣವಾಗಿದ್ದ ಅವರ ಸಂಸಾರದ ಸರಸ ಸುಂದರ ಚಿತ್ರಣ ಇಲ್ಲಿದೆ. ಅಮೆರಿಕದ ಜನರ ಬದುಕಿನ ನೈಜ ಚಿತ್ರಣ ಈ ಕಾದಂಬರಿಗಳಲ್ಲಿ ಮೂಡಿಬಂದಿದೆ. ಗಾರ್ತ್ ವಿಲಿಯಂಸ್ ಈ ಎಲ್ಲ ಕಾದಂಬರಿಗಳಿಗೂ ವಿಶೇಷವಾದ ಚಿತ್ರಗಳನ್ನು ರಚಿಸಿಕೊಟ್ಟಿದ್ದಾರೆ. ಲವಲವಿಕೆಯ ಕಥನಗಾರಿಕೆಯಿಂದ ಮನಸೆಳೆಯುವ ಲಾರಾ ಇಂಗಲ್ಸ್ ವೈಲ್ಡರ್ ಳ ಈ ಕಥಾಸರಣಿಯನ್ನು ಎಸ್. ಅನಂತನಾರಾಯಣ ಅವರು ‘ಹುಲ್ಲುಗಾವಲಲ್ಲಿ ಪುಟ್ಟ ಪಟ್ಟಣ’ ಎಂದು ಕನ್ನಡಕ್ಕೆ ಅನುವಾದಿಸಿದ್ದಾರೆ.

About the Author

ಎಸ್. ಅನಂತನಾರಾಯಣ
(30 November 1925 - 25 August 1992)

ಎಸ್. ಅನಂತನಾರಾಯಣ  ಕನ್ನಡದ ಪ್ರಗತಿಶೀಲ ಬರಹಗಾರರಲ್ಲಿ ಪ್ರಮುಖರೆನಿಸಿದ್ದಾರೆ. ಪ್ರೊ. ಅನಂತ ನಾರಾಯಣ ಅವರು ನವೆಂಬರ್ 30, 1925 ರಲ್ಲಿ ಮೈಸೂರಿನಲ್ಲಿ ಜನಿಸಿದರು. ತಂದೆ ಆರ್. ಸದಾಶಿವಯ್ಯನವರು ಮತ್ತು ತಾಯಿ ರಂಗಮ್ಮನವರು.  ಇಂಗ್ಲಿಷ್ ಸಾಹಿತ್ಯದಲ್ಲಿ ಬಿ.ಎ. (ಆನರ್ಸ್) ಮತ್ತು ಎಂ.ಎ. ಪದವಿಗಳನ್ನು ಪ್ರಪ್ರಥಮ ಶ್ರೇಣಿಯಲ್ಲಿ ಚಿನ್ನದ ಪದಕಗಳೊಂದಿಗೆ ಗಳಿಸಿದರು. ಅವರು ಮೈಸೂರು ವಿಶ್ವವಿದ್ಯಾನಿಲಯದ ಹಲವಾರು ಕಾಲೇಜುಗಳಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ, ಸಂಗೀತ, ನಾಟಕ ಕಾಲೇಜಿನಲ್ಲಿ ಮೂರು ವರ್ಷ ನಾಟಕ ಶಾಸ್ತ್ರದ ಬೋಧಕರಾಗಿ, ನಾಟಕ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ್ಧಾರೆ.  ನವೋದಯ ಕಾಲದ ಬರಹಗಾರರು ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಂಡಿದ್ದು ಸಹಜ ಕ್ರಿಯೆ. ...

READ MORE

Related Books