ಬೆಂಕಿಯ ನೆನಪು

Author : ಕೆ.ಪಿ. ಸುರೇಶ್

Pages 144

₹ 75.00




Year of Publication: 2005
Published by: ಅಭಿನವ ಪ್ರಕಾಶನ
Address: 17/18-2 1ನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ- 560040
Phone: 9448804905

Synopsys

ಪ್ರಖರ ರಾಜಕೀಯ ಪ್ರಜ್ಞೆ, ಮತ್ತು ಕಾವ್ಯಾತ್ಮಕ ಬರವಣಿಗೆಗೆ ಖ್ಯಾತನಾದ ಎಡುವರ್ಡೊ ಗೆಲಿಯಾನೋ ರಚಿಸಿದ ಮೆಮೊರಿ ಆಫ್ ಫೈರ್ ಕೃತಿಯ ಕನ್ನಡಾನುವಾದವನ್ನು ಅನುವಾದಕ, ಬರಹಗಾರ ಕೆ. ಪಿ ಸುರೇಶ್ ’ಬೆಂಕಿಯ ನೆನಪು’ ಎಂಬ ಶೀರ್ಷಿಕೆಯಡಿ ತಂದಿದ್ಧಾರೆ. 

1973 ರಲ್ಲಿ ಉರುಗ್ವೆಯಲ್ಲಿ ಬಲಪಂಥೀಯ ಸೈನಿಕ ಸರ್ವಾಧಿಕಾರ ಬಂದಾಗ ಗೆಲಿಯಾನೋ ದೇಶ ಬಿಡಬೇಕಾದ ಸಂದರ್ಭ ಒದಗಿತು. ಅರ್ಜೈಂಟೈನಾ ಸ್ಪೇನ್ ದೇಶಗಳಲ್ಲಿ ದೇಶಾಂತರ ಅನುಭವಿಸುತ್ತಿದ್ದ ವೇಳೆಯಲ್ಲಿ ಗೆಲಿಯಾನೋ ’ಮೆಮೊರಿ ಆಫ್ ಫೈರ್’ ಕೃತಿಯನ್ನು ರಚಿಸಿದ. 

ಈ ಕೃತಿಗೆ 1989 ರಲ್ಲಿ ಎಡುವರ್ಡೊ ಗೆಲಿಯಾನೋ ಅಮೆರಿಕಾದ ’ವರ್ಷದ ಶ್ರೇಷ್ಠ ಕೃತಿ’ ಪ್ರಶಸ್ತಿಯನ್ನು ಪಡೆದುಕೊಂಡನು. ಮತ್ತು ಈ ಕೃತಿಯ ಅನುವಾದ ಕಾರ್ಯಕ್ಕಾಗಿ ಲೇಖಕ ಕೆ.ಪಿ ಸುರೇಶ್ ಅವರಿಗೆ ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ದೊರೆತಿದೆ.

About the Author

ಕೆ.ಪಿ. ಸುರೇಶ್

ಕೆ.ಪಿ. ಸುರೇಶ್ ಅವರು ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ.  ಸುಸ್ಥಿರ/ಸಾವಯವ ಕೃಷಿ,  ಗಾಂಧೀ ವಿಚಾರಗಳು, ಸಾಹಿತ್ಯ- ವಿಭಿನ್ನ ವಿಷಯಗಳಲ್ಲಿ ಆಸಕ್ತಿಯನ್ನು ಹೊಂದಿರುವ ಇವರು ಈಗಾಗಲೇ ಎರಡು ಕವನ ಸಂಕಲನ, ಎರಡು ಅನುವಾದಿತ ಕೃತಿಗಳನ್ನು ರಚಿಸಿದ್ದಾರೆ. ಕೃಷಿ ಮತ್ತು ಗ್ರಾಮೀಣ ಆರ್ಥಿಕತೆ ಅಭಿವೃದ್ಧಿ, ಇವುಗಳ ಬಗ್ಗೆ ಸತತ ಚಿಂತನೆ ನಡೆಸುವ ಇವರು ತೆರೆಯ ಹಿಂದೆಯೇ 'ಅನಾಮಿಕ'ರಾಗಿ ಇರಲು ಬಯಸುವವರು. ಇವರ ಸಾಹಿತ್ಯ ಕೈಂಕರ್ಯ, ಸಾಹಿತ್ಯಾಸಕ್ತರ ಮೆಚ್ಚುಗೆಗೆ ಪಾತ್ರವಾಗಿದೆ. ...

READ MORE

Awards & Recognitions

Related Books