ಲೀಲಾ ತಿಲಕಂ

Author : ವಿವಿಧ ಅನುವಾದಕರು

Pages 118

₹ 147.00




Year of Publication: 1974
Published by: ಪ್ರಸಾರಾಂಗ ಕುವೆಂಪು ವಿಶ್ವವಿದ್ಯಾಲಯ
Address: ಮೈಸೂರು ವಿಶ್ವವಿದ್ಯಾಲಯ

Synopsys

‘ಲೀಲಾ ತಿಲಕಂ’ ಪಿ. ಸುಬ್ರಾಯ ಭಟ್ ಹಾಗೂ ಬಿ.ಕೆ. ತಿಮ್ಮಪ್ಪ ಅವರ ಅನುವಾದಿತ ಗ್ರಂಥವಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ; ವಿಶಿಷ್ಟವಾದ ಈ ಗ್ರಂಥದ ಕರ್ತೃ ಯಾರಿರಬಹುದೆಂದು ತಿಳಿಯುವುದಕ್ಕೆ ಯಾವ ಮಾರ್ಗವೂ ಇಲ್ಲ. ತಿರುವನಂತಪುರದಿಂದ ಹಿಡಿದು ಸೇರಾ' ವರೆಗೆ ಇರುವ ಪ್ರದೇಶ ಗಳೆಲ್ಲ ಆತನಿಗೆ ಸುಪರಿಚಿತವಾಗಿದ್ದುವು. ಆ ಭಾಗದ ಉತ್ತರಕ್ಕಿರುವ ಪ್ರದೇಶಗಳನ್ನು ಕುರಿತು ಪ್ರತಿಪಾದಿಸುವ ಪದ್ಯಗಳನ್ನು ಉದಾಹರಿಸಿರುವಂತೆ ತೋರುವುದಿಲ್ಲ. (ಮಾತಮ್ಮ ಆಲಿ ರಾಜವಂಶದಲ್ಲಿ ರಾಣಿಯಾಗಿದ್ದಳು ಎನ್ನುವ ಭಾವನೆ ಚಾರಿತ್ರಿಕವಾಗಿ ಸರಿಯಲ್ಲ. ಹದಿನಾರನೆಯ ಶತಕದಲ್ಲಷ್ಟೇ ಆ ಕುಟುಂಬ ರಾಜಪದವಿಗೇರುವುದಕ್ಕೆ ಪ್ರಾರಂಭವಾದದ್ದು.) ತಿರುವಲ್ಲದಿಂದ ಉತ್ತರಕ್ಕಿರುವ ದೇಶಗಳನ್ನು ವರ್ಣಿಸುವ ಮೂರು ಶ್ಲೋಕಗಳನ್ನು ಮಾತ್ರವೇ ಲೀಲಾತಿಲಕದಲ್ಲಿ ಉದ್ಧರಿಸಲಾಗಿದೆ ಎಂದು ಕೇರಳ ಸಾಹಿತ್ಯ ಚರಿತ್ರೆಯಲ್ಲಿ ಹೇಳಲಾಗಿದೆ. (ಪುಟ ೪೦೪) ಆದರೂ ಅದರಲ್ಲಿ ಸೂಚಿತವಾಗಿರುವ ತೃಕ್ಯಾರಿಯರ್", ತೃವ ಪೇರೂರ್, ಪೇರಾರ್ ಇವಲ್ಲದೆ ಮಹೋದಯಪುರಂ, ಅಟ್ಟೂರು, ಮಾತ್ತೂರು ಮೊದಲಾದ ಸ್ಥಳಗಳಿರುವುದೂ ತಿರುವಲ್ಲದಿಂದ ಉತ್ತರಕ್ಕಲ್ಲವೆ? ಮಾರ್ತಾಂಡವರ್ಮ, ರವಿವರ್ಮ ಮತ್ತು ವಿಕ್ರಮಪಾಂಡ್ಯ-ಈ ಮೂರು ರಾಜರನ್ನು ಸ್ತುತಿಸುವ ಶ್ಲೋಕಗಳು ಗ್ರಂಥದಲ್ಲಿ ಕಂಡುಬರುತ್ತವೆ. ಉಳ್ಳೂರ್ ಅವರ ಹೇಳಿಕೆಯಂತೆ ಅವರೆಲ್ಲ ಕೊಲ್ಲಂ (ವೇನಾಡು) ರಾಜವಂಶಕ್ಕೆ ಸಂಬಂಧಪಟ್ಟವರು. ಗ್ರಂಥರಚನೆಯ ಕಾಲ ಕ್ರಿ. ಶ. 1385 ರಿಂದ 1400ರ ಮಧ್ಯೆ ಎಂದು ಮುಂದೆ ಹೇಳಲಾಗಿದೆ. ಆಗ ವೇನಾಡನ್ನು ಆಳುತ್ತಿದ್ದವರು ಮಾರ್ತಾಂಡವರ್ಮನೂ ತೃಪ್ಪಾಪೂರನ್ನು ಸ್ವಾಧೀನಪಡಿಸಿ ಕೊಂಡಿದ್ದದ್ದು ರವಿವರ್ಮನೂ ಆಗಿದ್ದರು. ಈ ಗ್ರಂಥದ ಕರ್ತೃ ಅವರ ಆಶ್ರಿತನಾಗಿದ್ದ ನಂದು ಊಹಿಸಬಹುದು. ಈ ಗ್ರಂಥಕರ್ತೃವಿಗೆ ಅಲಂಕಾರ ಶಾಸ್ತ್ರದಲ್ಲಿ ಅದ್ವಿತೀಯವಾದ ಪಾಂಡಿತ್ಯವಿತ್ತು. ಅಷ್ಟೇ ಅಲ್ಲ; ಭಾರತೀಯ ಆಲಂಕಾರಿಕರ ಸಮೂಹದಲ್ಲಿ ವಿಶಿಷ್ಟ ಸ್ಥಾನವನ್ನು ಪಡೆಯಲು ಅರ್ಹತೆಯುಳ್ಳವನಾಗಿದ್ದನೆಂಬುದೂ ವ್ಯಕ್ತವಾಗುತ್ತದೆ. ಏಳನೆಯ ಅಧ್ಯಾಯದ ಉಪಕ್ರಮಣಿಕೆಯಿಂದ ಈ ಸಂಗತಿಯನ್ನು ಊಹಿಸಬಹುದು ಎನ್ನುತ್ತದೆ ಈ ಕೃತಿ.

About the Author

ವಿವಿಧ ಅನುವಾದಕರು

ವಿವಿಧ ಅನುವಾದಕರು ...

READ MORE

Related Books