
‘ನೌಕಾಘಾತಕ್ಕೆ ಸಿಕ್ಕಿಬಿದ್ದ ನಾವಿಕನ ಕಥೆ’ ಗ್ಯಾಬ್ರಿಯಲ್ ಗಾರ್ಸಿಯಾ ಮಾರ್ಕೆಸ್ ಅವರ ಕೃತಿಯಾಗಿದೆ. ರಘುನಾಥ್ ಟಿ.ಎಸ್. ಅವರ ಅನುವಾದಿತ ಕೃತಿಯಾಗಿದೆ. ಇಲ್ಲಿ ಗ್ಯಾಬ್ರಿಯಲ್ ಗಾರ್ಸಿಯ ಮಾರ್ಕ್ವೆಸ್ ಜೀವನದ ಚಿತ್ರಣವನ್ನು ಕಟ್ಟಿಕೊಡಲಾಗಿದೆ. 1955 ರಲ್ಲಿ ಬೊಗೋತ ಎನ್ನುವ ನಗರದಲ್ಲಿ ದಿನಪತ್ರಿಕೆಯೊಂದರಲ್ಲಿ ಕೆಲಸ ಮಾಡುತ್ತಿದ್ದನು. ಅದೇ ವರ್ಷದ ಫೆಬ್ರವರಿ ತಿಂಗಳಿನಲ್ಲಿ ಕೊಲಂಬಿಯಾದ ಹಡಗೊಂದರಲ್ಲಿ ಪ್ರಯಾಣ ಮಾಡುತ್ತಿದ್ದ ಹಡಗಿನ ಸಿಬ್ಬಂದಿ ಕಾಣಿಯಾಗಿಬಿಟ್ಟರು. ಹತ್ತು ದಿವಸಗಳ ನಂತರ ಅವರಲ್ಲಿ ಒಬ್ಬನು ಅರೆ ಸತ್ತ ಸ್ಥಿತಿಯಲ್ಲಿ ಉತ್ತರ ಕೊಲಂಬಿಯಾದ ಜನ ವಿರಳ ಬೀಚ್‌ನಲ್ಲಿ ಕಾಣಿಸಿಕೊಂಡನು. ಈ ಕೃತಿಯು ಮೊತ್ತ ಮೊದಲು ಕಾಣಿಸಿಕೊಂಡಿದ್ದು ದಿನಪತ್ರಿಕೆಯಲ್ಲಿ ಧಾರಾವಾಹಿಯಾಗಿ, ಆ ನಾವಿಕನ ಕಠಿಣ ಪರಿಸ್ಥಿತಿಯನ್ನು ಸಮಸ್ತ ಓದುಗರಿಗೆ ತೋರಿಸಲು ಕಾರಣ- ಕರ್ತನಾಗಿದ್ದು ಗ್ಯಾಬ್ರಿಯಲ್ ಗಾರ್ಸಿಯಾ ಮಾರ್ಕ್ವೆಸ್.
©2025 Book Brahma Private Limited.