ಮೀಸಲಾತಿ-ಮಹತ್ವದ ಕೆಲ ಸಂಗತಿಗಳು

Author : ಬಿ.ಎ.ಕೆಂಚರೆಡ್ಡಿ

Pages 48

₹ 40.00




Year of Publication: 2023
Published by: ಸಂಗಾತ ಪುಸ್ತಕ
Address: ಗಜೇಂದ್ರಗಡ್ ತಾಲ್ಲೂಕು, ಗದಗ್ ಜಿಲ್ಲೆ, ಪೋಸ್ಟ್ ರಾಜೂರ್ – 582114.
Phone: 9341757653

Synopsys

ಶಾಸನಾತ್ಮಕ, ಕಾರ್ಯಕ್ರಮಾತ್ಮಕ, ಯೋಜನಾತ್ಮಕ ಕ್ರಮಗಳನ್ನು ಒಳಗೊಂಡಂತೆ ಮೀಸಲಾತಿ ಮತ್ತು ಸಾಮಾಜಿಕ ನ್ಯಾಯಕ್ರಮಗಳ ಒಂದು ಸಮಗ್ರ ಪಟ್ಟಿಗಳನ್ನೊಳಗೊಂಡ ಒಂದು ‘ಮಾರ್ಗ ನಕ್ಷೆ’ ತಯಾರಿಸಿ ನಾನು, ಅನುಕ್ರಮ ಸರಕಾರಗಳಿಗೆ, ವಿವಿಧ ಪ್ರಧಾನ ಮಂತ್ರಿಗಳಿಗೆ, ವಿವಿಧ ಮಹತ್ವದ ಸಚಿವರಿಗೆ, ವಿವಿಧ ರಾಜಕೀಯ ಪಕ್ಷಗಳಿಗೆ ಅದರ ಪ್ರತಿ ವಿತರಿಸಿದ್ದೇನೆ. ರಾಜ್ಯಮಟ್ಟದಲ್ಲಾಗಲಿ, ಕೇಂದ್ರ ಮಟ್ಟದಲ್ಲಾಗಲಿ ಭಾರತದ ಯಾವುದೇ ರಾಜಕೀಯ ಪಕ್ಷಗಳ ಸರಕಾರಗಳು ಈ ಅಮೂಲ್ಯ ರಾಷ್ಟ್ರೀಯ ಕಾರ್ಯಕ್ರಮದಲ್ಲಿ ತಮ್ಮನ್ನು ಸಮರ್ಪಕವಾಗಿ ತೊಡಗಿಸಿಕೊಳ್ಳಲಿಲ್ಲ.

ಸಾಂವಿಧಾನಿಕ ಆದೇಶಗಳು ರಾಷ್ಟ್ರಪತಿಯವರ ಸಂಸತ್ತಿನ ಜಂಟಿ ಅಧಿವೇಶನಗಳ ಬದ್ಧತೆಗಳು, ನಿರ್ದಿಷ್ಟ ಸಾಂವಿಧಾನಿಕ ತಿದ್ದುಪಡಿಗಳು, ನಾನು ಒಂದಲ್ಲ ಒಂದು ರೀತಿಯಲ್ಲಿ ಅಧ್ಯಕ್ಷ, ಸದಸ್ಯ, ಸಲಹೆಗಾರ ಅಥವಾ ಅನೌಪಚಾರಿಕ ಸಲಹೆಗಾರನಾಗಿಯೂ ಸಂಬಂಧ ಹೊಂದಿರುವ ಅನೇಕ ಅಧಿಕೃತ ಸಂಸ್ಥೆಗಳ ಶಿಫಾರಸ್ಸುಗಳನ್ನು ಆಧರಿಸಿ ನಾನೇ ರೂಪಿಸಿದ ಸಾರ್ವಜನಿಕ ದಾಖಲೆಗಳನ್ನು ಅನುಕ್ರಮ ಸರಕಾರಗಳು ಭಾಗಶಃ ಅಥವಾ ಇಡಿಯಾಗಿ 1996 ರ ದಲಿತ ಮ್ಯಾನಿಫೆಸ್ಟೋದ ರೀತಿಯಲ್ಲಿ ಅಳವಡಿಸಿಕೊಂಡಿವೆ. ಆದರೆ ಅನುಷ್ಠಾನಗೊಂಡಿಲ್ಲ.

ಈ ಪ್ರಮುಖ ಕಾರ್ಯ ಪೂರೈಸದ ಹೊರತು, ಸಾಮಾಜಿಕ ಸಮಾನತೆ ಸ್ಥಾಪಿಸದ ಹೊರತು ಮತ್ತು ನನ್ನ ‘ಮಾರ್ಗ ನಕ್ಷೆ’ಯಲ್ಲಿ ವಿವರಿಸಿದ ಕಾರ್ಯಕ್ರಮಾತ್ಮಕ/ಯೋಜನಾತ್ಮಕ ಕ್ರಮಗಳ ಪ್ರಾಮಾಣಿಕ ಅನುಷ್ಠಾನದ ಮೂಲಕ ದಮನಿತರ ಸಾಮರ್ಥ್ಯಗಳನ್ನು ಅಭಿವೃದ್ಧಿ ಪಡಿಸದ ಹೊರತು ಭಾರತವು ಉನ್ನತ ಪ್ರಗತಿ ಹೊಂದಲು ಸಾಧ್ಯವಿಲ್ಲ. ಜಾತಿ ವ್ಯವಸ್ಥೆ ಮತ್ತು ಅದರ ಪ್ರಮುಖ ಉತ್ಪನ್ನ ಅಸ್ಪೃಶ್ಯತೆ, ಸುತ್ತಲೂ ಆವರಿಸಿದ ತಾರತಮ್ಯದಂಥ ಅಸಮಾನತೆಗಳು ಈ ದೇಶದ ಮೇಲೆ ಹೇರಿದ ಭಾರವಾದ ಬಂಡೆಗಳಂತೆ ತೋರುತ್ತವೆ.

About the Author

ಬಿ.ಎ.ಕೆಂಚರೆಡ್ಡಿ

ಬಿ.ಎ.ಕೆಂಚರೆಡ್ಡಿ ಅವರು ಮೂಲತಃ ಗದಗ ಜಿಲ್ಲೆಯ ಗಜೇಂದ್ರಗಡದವರು. ಅನುವಾದ ಅವರ ಆಸಕ್ತಿಯಾಗಿದೆ. ಪಿ.ಎಸ್.ಕೃಷ್ಣನ್ ಅವರ 'ಮೀಸಲಾತಿ ಕೆಲ ಮಹತ್ವದ ಸಂಗತಿಗಳು' ಅವರ ಅನುವಾದಿತ ಕೃತಿಯಾಗಿದೆ. ...

READ MORE

Related Books