ಸೋಮದೇವ ಮಹಾಕವಿಯ ಕಥಾಸರಿತ್ಸಾಗರ

Author : ಗೊರೂರು ರಾಮಸ್ವಾಮಿ ಅಯ್ಯಂಗಾರ್

Pages 769

₹ 990.00




Year of Publication: 2024
Published by: ಐಬಿಎಚ್ ಪ್ರಕಾಶನ
Address: #77, 2ನೇ ಮುಖ್ಯರಸ್ತೆ, ರಾಮರಾವ್ ಲೇಔಟ್, ಬಿಎಸ್ ಕೆ ಮೂರನೇ ಸ್ವೇಜ್, ಬೆಂಗಳೂರು- 560085.
Phone: 080 - 48371555

Synopsys

‘ಸೋಮದೇವ ಮಹಾಕವಿಯ ಕಥಾಸರಿತ್ಸಾಗರ’ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ಕನ್ನಡಕ್ಕೆ ಅನುವಾದಗೊಳಿಸಿದ್ದು, ಇದೊಂದು ಚರಿತ್ರೆಯನ್ನ ಒಳಗೊಂಡ ಕೃತಿಯಾಗಿದೆ. ಸುಮಾರು 2500 ವರುಷಗಳ ಹಿಂದೆ, ಗೌತಮಬುದ್ಧನ ಕಾಲದಲ್ಲಿ ಗುಣಾಡ್ಯ ಎನ್ನುವ ಕವಿಯು ಬೃಹತ್ ಕಥಾ ಎನ್ನುವ ಕಥೆಗಳ ಪುಸ್ತಕವನ್ನು ರಚಿಸಿದನು. ಆ ಕಾಲದಲ್ಲಿ ಉಪಯೋಗದಲ್ಲಿದ್ದ ಭಾಷೆಯ ಹೆಸರು ಪೈಶಾಚಿ. ಅದೇನೂ ಅಂತಹ ಉತ್ತಮ ಭಾಷೆಯಲ್ಲ, ಹಾಗೂ ಪಂಡಿತರುಗಳು ಉಪಯೋಗಿಸುವ ಭಾಷೆಯಲ್ಲ. ಆ ಬೃಹತ್‌ಕಥಾ ಪುಸ್ತಕ ಪೂರ್ಣವಾಗಿ ಕಳೆದುಹೋಗಿದೆ. ಅದರ ವಿಷಯವೊಂದೇ ಉಳಿದಿದೆ. ಆದರೆ, ಒಳ್ಳೆಯ ವಾರ್ತೆ ಏನೆಂದರೆ ಆ ಮಹಾಗ್ರಂಥದ ಕೆಲವು ಭಾಗಗಳು ಉಳಿದುಕೊಂಡಿವೆ. ಸಂಶೋಧನೆಯ ಪ್ರಕಾರ ಮೂರು ಭಾಗಗಳು, ಒಂದನೆ ಭಾಗ ಬೃಹತ್ ಕಥಾಮಂಜರಿ, ಎರಡನೆ ಭಾಗ ಬೃಹತ್ ಕಥಾ ಶ್ಲೋಕಸಂಗ್ರಹ, ಸಂಸ್ಕೃತದ ವಿದ್ಯಾವಂತರ ಪ್ರಕಾರ ಗುಣಾಡ್ಯನನ್ನು ಮಹಾಭಾರತವನ್ನು ಸೃಷ್ಟಿಸಿದ ವ್ಯಾಸ ಮಹರ್ಷಿಗೂ, ರಾಮಾಯಣ ಕಾವ್ಯವನ್ನು ಸೃಷ್ಟಿಸಿದ ವಾಲ್ಮೀಕಿ ಮಹರ್ಷಿಗೂ ಹೋಲಿಸಬಹುದು- ವ್ಯಾಸ ಮತ್ತು ವಾಲ್ಮೀಕಿ ಮಹರ್ಷಿಗಳು ಸಂಸ್ಕೃತದಲ್ಲಿ ಕಾವ್ಯವನ್ನು ರಚಿಸಿದರು. ಗುಣಾಡ್ಯನ ಭಾಷೆ ಅಷ್ಟು ಉತ್ತಮವಾಗಿರಲಿಲ್ಲ. ಗುಣಾಢನಿಂದ ರಚಿಸಲ್ಪಟ್ಟ ಕಾವ್ಯಗಳು ಭಕ್ತಕಥಾಮಂಜರಿ ಮತ್ತು ಸೋಮದೇವನಿಂದ ರಚಿತವಾದ ಕಥಾಸರಿತ್ಸಾಗರವನ್ನು ನಾವಿಲ್ಲಿ ಕಾಣಬಹುದಾಗಿದೆ.

About the Author

ಗೊರೂರು ರಾಮಸ್ವಾಮಿ ಅಯ್ಯಂಗಾರ್
(04 July 1904 - 28 September 1991)

ಗಾಂಧಿವಾದಿ ಮತ್ತು ಸ್ವಾತಂತ್ರ್ಯ ಹೋರಾಟಗಾರರಾದ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ಕನ್ನಡದ ಜನಪ್ರಿಯ ಸಾಹಿತಿಗಳಲ್ಲಿ ಒಬ್ಬರಾಗಿದ್ದರು. ಗೊರೂರು ಗ್ರಾಮದಲ್ಲಿ 1904ರ ಜುಲೈ 4ರಂದು ಜನಿಸಿದರು. ತಂದೆ ಶ್ರೀನಿವಾಸ ಅಯ್ಯಂಗಾರ್ ತಾಯಿ ಲಕ್ಷ್ಮಮ್ಮ. ಗೊರೂರಿನಲ್ಲಿ ಪ್ರಾಥಮಿಕ ಶಾಲಾ ಶಿಕ್ಷಣವನ್ನು ಮುಗಿಸಿದ ಮೇಲೆ ಹಾಸನದಲ್ಲಿ ಪ್ರೌಢಶಾಲಾ ಶಿಕ್ಷಣ ಪಡೆಯುತ್ತಿದ್ದಾಗಲೇ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದರು. ಅನಂತರ ಗುಜರಾತ್ ಗಾಂಧಿ ಆಶ್ರಮದಲ್ಲಿದ್ದ ವಿದ್ಯಾ ಪೀಠದಲ್ಲಿ ಓದು ಮುಂದುವರೆಸಿದರು. ಅನಂತರ ಪತ್ರಿಕಾರಂಗ ಪ್ರವೇಶಿಸಿದರು. ಮದರಾಸಿನ `ಲೋಕಮಿತ್ರ’ ಆಂಧ್ರ ಪತ್ರಿಕೆ `ಭಾರತಿ’ ಪತ್ರಿಕೆಗಳಲ್ಲಿ ಉಪಸಂಪಾದಕರಾಗಿ, ಸಂಪಾದಕರಾಗಿ ಸೇವೆ ಸಲ್ಲಿಸಿದರು. 1952ರಲ್ಲಿ ವಿಧಾನಸಭೆಗೆ ನಾಮಕರಣಗೊಂಡಿದ್ದ ಅವರು ಅದಕ್ಕೂ ...

READ MORE

Related Books