
ಲೇಖಕ ಅವರ ಅನುವಾದ ಸಂಗ್ರಹ ಕೃತಿ ʻಟು ಸರ್ ವಿತ್ ಲವ್ʼ. ಮೂಲ ಕೃತಿ 1959ರಲ್ಲಿ ಪ್ರಕಟವಾದ ಇ.ಆರ್. ಬ್ರೈತ್ವೈಟ್ ಅವರು ಬರೆದ ಆತ್ಮಚರಿತ್ರೆಯ ಕಾದಂಬರಿ. ಮಾಜಿ ರಾಯಲ್ ಏರ್ ಫೋರ್ಸ್ ಪೈಲಟ್ ಮತ್ತು ಕೇಂಬ್ರಿಡ್ಜ್ ನ ವಿದ್ಯಾವಂತ ಇಂಜಿನಿಯರ್ ಬ್ರೈತ್ವೈಟ್ ಮಾಧ್ಯಮಿಕ ಶಾಲೆಯಲ್ಲಿ ಶಿಕ್ಷಕ ಹುದ್ದೆಯನ್ನು ಪಡೆಯುವಲ್ಲಿ ಎದುರಾದ ಅಡೆತಡೆಗಳು, ಬೆದರಿಕೆಗಳು, ಅಪಹಾಸ್ಯಗಳನ್ನೆಲ್ಲಾ ಎದುರಿಸಿ ಮುಂದೆ ಬಂದ ನೈಜ ಕಥೆಯನ್ನು ಕಾದಂಬರಿ ಹೇಳುತ್ತದೆ. ವಿದ್ಯಾರ್ಥಿಗಳಲ್ಲಿ ಒಳ್ಳೆಯ ಭಾವ ಮೂಡಿಸುತ್ತಾ ಅವರನ್ನು ಸರಿಯಾದ ದಾರಿಯಲ್ಲಿ ನಡೆಸುವಲ್ಲಿ ಶಿಕ್ಷಕನಾಗಿ ಅನುಸರಿಸಿದ ವಿಧಾನ, ಶ್ರಮಗಳನ್ನು ಇಲ್ಲಿ ಕಾಣಬಹುದು. ಜೊತೆಗೆ ಯುದ್ಧಾನಂತರದ ಲಂಡನ್ನಲ್ಲಿದ್ದ ಜನಾಂಗ ಮತ್ತು ವರ್ಗದ ರಾಜಕೀಯದ ಒಳನೋಟವನ್ನೂ 22 ಅಧ್ಯಾಯಗಳಲ್ಲಿ ಈ ಪುಸ್ತಕ ನೀಡುತ್ತದೆ.
©2025 Book Brahma Private Limited.