ಕಡಲಿನ ಮಡಿಲು

Author : ಕುವೆಂಪು (ಕೆ.ವಿ. ಪುಟ್ಟಪ್ಪ)

Pages 114

₹ 130.00




Year of Publication: 1988
Published by: ಪ್ರಸಾರಾಂಗ
Address: ಮೈಸೂರು ವಿಶ್ವವಿದ್ಯಾಲಯ

Synopsys

'ಕಡಲಿನ ಮಡಿಲು’ ಕೆ.ವಿ. ಪುಟ್ಟಪ್ಪ ಪ್ರಧಾನ ಸಂಪಾದಕತ್ವದ ಕೃತಿಯಾಗಿದೆ. ಕೃತಿಯು ಕಡಲು ಮತ್ತು ಮಾನವನ ಸಂಬಂಧ ಎಷ್ಟು ಪ್ರಾಚೀನವೋ ಅಷ್ಟೇ ನಿಕಟವೂ, ಗಾಢವೂ ಆಗಿದೆ ಎನ್ನುವುದರ ಕುರಿತು ಮಾತನಾಡುತ್ತದೆ. ಇತಿಹಾಸದ ಆದಿಯಿಂದಲೂ ಕಡಲು ತನ್ನ ಹಲವಾರು ವೈಶಿಷ್ಟ್ಯತೆಗಳಿಂದ ಮಾನವನನ್ನು ಮುಗ್ಧಗೊಳಿಸಿದೆ. ಪೌರುಷ, ಗಾಂಭೀರ, ಸಂಪನ್ನತ ಇವೇ ಮೊದಲಾದ ಅನೇಕ ಉದಾತ್ತ ಮಾನವೀಯ ಮೌಲ್ಯಗಳಿಗೆ ಸಂಕೇತವಾಗಿರುವ ಕಡಲು ಜಗತ್ತಿನ ಅನೇಕ ಸಂಸ್ಕೃತಿಗಳು, ಅನೇಕ ಧರ್ಮಗಳು, ಕವಿಗಳು, ದಾರ್ಶನಿಕರು ಮತ್ತಿತರ ಬುದ್ದಿ ಜೀವಿಗಳಿಗೆ ಸ್ಫೂರ್ತಿಯನ್ನು ನೀಡಿದೆ. ಭಾವಜೀವಿಯಾದ ಮಾನವನು ಕಡಲನ್ನು ವಿಸ್ಮಯದಿಂದಲೂ ವಿನೀತ ಭಾವದಿಂದಲೂ ಕಂಡಿದ್ದಾನೆ. ಸಾಗರದ ವೈಶಾಲ್ಯತೆ ಹಾಗೂ ನಿಗೂಢತೆಗಳು ಅದರ ಬಗ್ಗೆ ಅನೇಕ ದಂತಕಥೆಗಳೂ, ಪುರಾಣಗಳೂ ರೂಪುಗೊಳ್ಳಲು ಕಾರಣವಾಯಿತು. ಸಾಗರ ಸಮೃದ್ಧ ಸಂಪನ್ಮೂಲಗಳ ಆಗರವೆಂದು ಪ್ರಾಚೀನ ಹಿಂದೂ ದಾರ್ಶನಿಕರು ಮನಗಂಡಿದ್ದರು. ನಮ್ಮ ಪುರಾಣದ ಸಮುದ್ರಮಥನದ ಕಥೆ ಈ ತರದ ನಂಬಿಕೆಗಳಿಗೆ ಪುಷ್ಟಿಯನ್ನು ನೀಡುತ್ತದೆ. ಆದಾಗ್ಯೂ ಅದಾವುದೋ ಪೂರ್ವಾಗ್ರಹದಿಂದ ಪೀಡಿತರಾಗಿದ್ದ ನಮ್ಮ ಹಿರಿಯರು ಸಾಗರವನ್ನು ವೈಜ್ಞಾನಿಕವಾಗಿ ಅಭ್ಯಸಿಸಲಿಲ್ಲ. ಇದರಿಂದಾಗಿ ಸಮುದ್ರ ಯಾನವನ್ನು ಕೈಗೊಂಡ ವ್ಯಕ್ತಿಗಳು ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾಗಬೇಕಾಗುತ್ತಿತ್ತು, ಹಿಂದೂ ಪುರಾಣಗ್ರಂಥಗಳಲ್ಲಿ ಸಾಗರವನ್ನು ಅತಿ ಮೋಹಕವಾಗಿ ವರ್ಣಿಸಲಾಗಿದೆ. ಚಿತ್ರ ವಿಚಿತ್ರವಾದ ಸರೀಸೃಪಗಳಿಂದಲೂ ಚಿತ್ತಾಕರ್ಷಕವಾದ ಮತ್ಸ ಜೀವಿಗಳಿಂದಲೂ, ಮುತ್ತು, ಹವಳ ಮತ್ತಿತರ ಪ್ರಶಸ್ತ ವಸ್ತುಗಳಿಂದಲೂ ಕೂಡಿದ ಸಾಗರಗರ್ಭವನ್ನು ಕಲ್ಪಿಸಿದ ನಮ್ಮ ಪೌರಾಣಿಕರ ಹಾಗೂ ದಾರ್ಶನಿಕರ ಕಲ್ಪನಾಲಹರಿ ಎಷ್ಟು ರೋಚಕವೋ ಅಷ್ಟೇ ವೈಜ್ಞಾನಿಕವೂ ಹೌದು ಎಂಬುವುದನ್ನು ವಿವರಿಸಲಾಗಿದೆ.

About the Author

ಕುವೆಂಪು (ಕೆ.ವಿ. ಪುಟ್ಟಪ್ಪ)
(29 December 1904 - 11 November 1994)

ಕುವೆಂಪು ಎಂಬ ಕಾವ್ಯನಾಮದಿಂದ ಸಾಹಿತ್ಯ ರಚನೆ ಮಾಡಿದ ಕವಿ, ಪ್ರಖರ ವಿಚಾರವಾದಿ-ಚಿಂತಕ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಅವರು ಕನ್ನಡ ಸಾಹಿತ್ಯದ ಮೇರೆಗಳನ್ನು ವಿಸ್ತರಿಸಿದವರು. ತಂದೆ ವೆಂಕಟಪ್ಪಗೌಡ ತಾಯಿ ಸೀತಮ್ಮ. ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿಯವರಾದ ಪುಟ್ಟಪ್ಪ ಜನಿಸಿದ್ದು ಚಿಕ್ಕಮಗಳೂರು ಜಿಲ್ಲೆಯ ಹಿರೇಕೂಡಿಗೆಯಲ್ಲಿ 1904ರ ಡಿಸೆಂಬರ್ 29ರಂದು. ಮನೆಯಲ್ಲೇ ಖಾಸಗಿ ಮೇಷ್ಟರ ಮೂಲಕ ಪ್ರಾರಂಭಿಕ ವಿದ್ಯಾಭ್ಯಾಸದ ನಂತರ ತೀರ್ಥಹಳ್ಳಿಯಲ್ಲಿ ವಿದ್ಯಾಭ್ಯಾಸ ಮುಗಿಸಿ ಮೈಸೂರಿನಲ್ಲಿ ವೆಸ್ಲಿಯನ್ ಮಿಷನ್ ಹೈಸ್ಕೂಲ್, ಮಹಾರಾಜ ಕಾಲೇಜುಗಳಲ್ಲಿ ಓದಿ ಎಂ.ಎ. ಪದವಿ (1929) ಪಡೆದರು. ಮೈಸೂರು ಮಹಾರಾಜ ಕಾಲೇಜಿನಲ್ಲಿ ಅಧ್ಯಾಪಕ (1929) ಆಗಿ ಅನಂತರ ಕ್ರಮೇಣ ಉಪಪ್ರಾಧ್ಯಾಪಕ, ...

READ MORE

Related Books