
ಸದ್ಗುರು ಪ್ರಭಾವ- ಎಂಬುದು ಗಳಗನಾಥರು ಬರೆದ ಪ್ರಬಂಧಗಳ ಸಂಕಲನ. ಈ ಕೃತಿಯಲ್ಲಿ ಪುಸ್ತಕ ಮಾರಾಟ, ಪುಸ್ತಕ ಬರವಣಿಗೆ, ತಮ್ಮ ವ್ಯಕ್ತಿಗತ ಜೀವನ ನಿರ್ವಹಣೆ, ಕನ್ನಡದ ಅಸ್ತಿತ್ವ ಹೀಗೆ ವಿವಿಧ ವಿಷಯಗಳಡಿ ಗಳಗನಾಥರು ಬರೆದ ಪ್ರಬಂಧಗಳಿವೆ. ಬೆಂಗಳೂರು ಧನೌದಾರ್ಯ, ಬೆಂಗಳೂರು ಗುಣೌದಾರ್ಯ, ಗಳಗನಾಥನ ಪುಸ್ತಕಗಳು, ಗಳಗನಾಥನ ಆಶೆ, ಗೃಹಶಿಕ್ಷಣ ಮತ್ತು ಹಿರಿಯರ ಪುಣ್ಯ, ದಂಪತಿ, ಕುಟುಂಬ, ರಾಷ್ಟ್ರ, ವಿಶ್ವ, ಲೇಖಕರು, ವಿದ್ಯಾರ್ಥಿ, ವಿನಯದ ಬೇಡಿಕೆ ಹೀಗೆ ಹಲವು ಪ್ರಬಂಧಗಳು ಇಲ್ಲಿ ಸಂಕಲಿಸಲಾಗಿದೆ. ಪುಸ್ತಕ ಬರವಣಿಗೆ ಹಾಗೂ ಅವುಗಳ ಮಾರಾಟದಿಂದಲೇ ಬದುಕು ನೂಕಿಸುವ ಕನ್ನಡಾಭಿಮಾನಿಯ ನೋವು-ನಲಿವುಗಳನ್ನು ಈ ಕೃತಿ ಸಮರ್ಥವಾಗಿ ಬಿಂಬಿಸುತ್ತದೆ. ಒಂದರ್ಥದಲ್ಲಿ ಈ ಕೃತಿಯು ಗಳಗನಾಥರ ಆತ್ಮಕಥೆಯಂತೆಯೂ ಇದೆ.
©2025 Book Brahma Private Limited.