ಮಧುರ ಚೆನ್ನ

Author : ಗುರುಲಿಂಗ ಕಾಪಸೆ

Pages 128

₹ 30.00




Year of Publication: 2003
Published by: ಕರ್ನಾಟಕ ಸಾಹಿತ್ಯ ಅಕಾಡೆಮಿ
Address: ಕರ್ನಾಟಕ ಸಾಹಿತ್ಯ ಅಕಾಡೆಮಿ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002

Synopsys

ಕವಿ ಮಧುರ  ಚೆನ್ನರ ಬದುಕು, ಬರಹ ಮತ್ತು ಚಿಂತನೆಗಳ ಕುರಿತಾದ ಈ ಪುಸ್ತಕವನ್ನು ಡಾ.ಗುರುಲಿಂಗ ಕಾಪಸೆ ಅವರು ರಚಿಸಿದ್ದಾರೆ.

ಇಪ್ಪತ್ತನೆಯ ಶತಮಾನದ ಸಾಹಿತ್ಯ ಸಂದರ್ಭದಲ್ಲಿ ಶತಮಾನೋತ್ಸವದ ಗೌರವಕ್ಕೆ ಪಾತ್ರರಾದ ಮತ್ತು ಪಾತ್ರರಾಗಬಹುದಾದ ಕೆಲವೇ ಮಹತ್ವದ ಸಾಹಿತಿಗಳ ಸಾಹಿತ್ಯ ಸಾಧನೆಗೆ ಹೋಲಿಸಿದರೆ, ಮಧುರು ಚೆನ್ನರ ಕೊಡುಗೆ ಅಂಥ ಸಮೃದ್ಧವೂ ವೈವಿಧ್ಯಮಯವೂ ಆದದ್ದೇನೂ ಅಲ್ಲ. ಅವರು ತಮ್ಮ ಐವತ್ತು ವರ್ಷಗಳ ಜೀವಿತ ಕಾಲದಲ್ಲಿ ಬರೆದು ಪ್ರಕಟಿಸಿದ ಕವನ ಸಂಗ್ರಹ ಒಂದೇ ಒಂದು, ಅದು ‘ನನ್ನ ನಲ್ಲ’. 1933ರಲ್ಲಿ ಪ್ರಕಟವಾದ ಈ ಸಂಕಲನದೊಳಗಿರುವ ಕವಿತೆಗಳ ಸಂಖ್ಯೆ ಕೇವಲ ಹದಿನೈದು, ಹೀಗೆ ಕೇವಲ ಒಂದೇ ಒಂದು ಕವನ ಸಂಕಲನದ ಮೂಲಕ ಕನ್ನಡದಲ್ಲಿ ಮರೆಯಲಾಗದ ಸ್ಥಾನವನ್ನುಗಳಿಸಿಕೊಂಡು, ಶತಮಾನ ಸ್ಮರಣೆಯ ಗೌರವಕ್ಕೆ ಪಾತ್ರವಾಗುವ ಸತ್ವ ಉಳ್ಳವರು ಮಧುರಚೆನ್ನರೊಬ್ಬರೇ ಎನ್ನುವುದು ಕನ್ನಡ ಸಾಹಿತ್ಯದ ಆಶ್ಚರ್ಯಗಳಲ್ಲಿ ಒಂದು ಎನ್ನುತ್ತಾರೆ ಸಾಹಿತಿ ಜಿ.ಎಸ್.ಶಿವರುದ್ರಪ್ಪ.

ಡಾ.ಕಾಪಸೆಯವರ ಪರಿಶ್ರಮ ಹಾಗೂ ಪ್ರಯತ್ನಗಳ ಕಾರಣದಿಂದಾಗಿ ಮಧುರಚೆನ್ನರ ಚದುರಿ ಹೋದ ಗದ್ಯ ಬರಹಗಳೂ ಆತ್ಮಶೋಧ ರೂಪದ ಅವರ ಅನುಭಾವ ಕಥನವೂ ಮತ್ತೂ ಇನ್ನೂ ಒಂದಷ್ಟು ಕವಿತೆಗಳು ಎರಡು ಸಂಪುಟಗಳಲ್ಲಿ ಪ್ರಕಟಗೊಂಡಿರುವುದು ನಿಜವಾದರೂ, ಒಂದು ವೇಳೆ ’ನನ್ನ ನಲ್” ದಂಥ ಅಪ್ಪಟ ಅನುಭಾವ ಕಾವ್ಯವೇನಾದರೂ ಲಿಖಿತಗೊಳ್ಳದಿದ್ದರೆ ಅಥವಾ ಪ್ರಕಟವಾಗದಿದ್ದರೆ ಬಹುಶಃ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಈ ಮಹತ್ವದ ಸ್ಥಾನವನ್ನು ಮಧುರಚೆನ್ನರು ಪಡೆದುಕೊಳ್ಳುತ್ತಿದ್ದರೋ ಇಲ್ಲವೋ ಎನ್ನುವುದು ಸಂದೇಹದ ಸಂಗತಿಯಾಗಿದೆ ಎಂಬುದು ಜಿ.ಎಸ್.ಶಿವರುದ್ರಪ್ಪನವರ ಅಭಿಪ್ರಾಯವಾಗಿದೆ. 

About the Author

ಗುರುಲಿಂಗ ಕಾಪಸೆ
(02 April 1928)

ಗುರುಲಿಂಗ ಕಾಪಸೆ ಅವರು 1928ರ ಏಪ್ರಿಲ್ 2 ರಂದು ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಬಿ.ಕೆ. ಲೋಣಿಯಲ್ಲಿ ಜನಿಸಿದರು. ಮಧುರಚೆನ್ನರ ಜೀವನ ಹಾಗೂ ಕೃತಿಗಳು ಕುರಿತು ಮಹಾಪ್ರಬಂಧ ಬರೆದಿದ್ದಾರೆ. ‘ಹಲಸಂಗಿ ಗೆಳೆಯರು’ (1998, ಪ್ರಸಾರಾಂಗ ಕನ್ನಡ ವಿಶ್ವವಿದ್ಯಾಲಯ ಹಂಪಿ) ಡಾ. ಕಾಪಸೆ ಅವರು ಸಂಪಾದಿಸಿದ ಮಧುರ ಚೆನ್ನರ ಲೇಖನಗಳಲ್ಲಿ ಆ ಕಾಲದ ಅನೇಕ ಜಾನಪದ ವಿರಳ ಸಂಗತಿಗಳು ದಾಖಲಾಗಿವೆ. ಕನ್ನಡ ವಿಶ್ವವಿದ್ಯಾಲಯವು “ಜಾನಪದ ಅಧ್ಯಯನ” ಕ್ಕೆ ಕೊಟ್ಟ ವಿಶಿಷ್ಠ ಕೊಡುಗೆಯಾಗಿದೆ. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದಾರೆ.  ಕೃತಿಗಳು: ಅಕ್ಕಮಹಾದೇವಿ, ಮಧುರಚೆನ್ನ, ಶ್ರೀ ಅರವಿಂದರು, ಬಸವೇಶ್ವರ, ಹಲಸಂಗಿ ಗೆಳೆಯರು, ಪ್ರವಾಸಕಥನ: ಶಾಲ್ಮಲೆಯಿಂದ ಗೋದಾವರಿಯವರೆಗೆ ಹಾಗೂ ಮಕ್ಕಳ ಸಾಹಿತ್ಯ: ಕವಿ ರವಿಂದ್ರರು, ಶಿ.ಶಿ.ಬಸವನಾಳ ಮತ್ತು ವಿಮರ್ಶೆ: ಸಾಹಿತ್ಯ ಸಂಬಂಧ, ಬೇಂದ್ರೆ-ಮಧುರಚೆನ್ನ ಸಖ್ಯಯೋಗ. ಸಂಪಾದಿತ ಕೃತಿಗಳು: ಕಾಲ-ಕವಿ (ಕಾವ್ಯ), ಪಾರಮಾರ್ಥ ಗೀತಾ ...

READ MORE

Related Books