ಕನ್ನಡ ಕಾದಂಬರಿಗಳಲ್ಲಿ ದಲಿತ ಜಗತ್ತು

Author : ಸಬಿಹಾ ಭೂಮಿಗೌಡ

Pages 440

₹ 350.00




Year of Publication: 2004
Published by: ಚೇತನ ಬುಕ್ ಹೌಸ್
Address: ಅಂಜನಾದ್ರಿ, ರೇಣುಕಾಚಾರ್ಯ ದೇವಸ್ಥಾನ ರಸ್ತೆ, ಲಕ್ಷಣ ಟಾಕೀಸ್ ಹಿಂಬಾಗ, ಮೈಸೂರು - 570009
Phone: 8152099996

Synopsys

‘ಕನ್ನಡ ಕಾದಂಬರಿಗಳಲ್ಲಿ ದಲಿತ ಜಗತ್ತು’ ಸಬಿಹಾ ಭೂಮಿ ಗೌಡ ಅವರ ರಚನೆಯ ನಿಬಂಧ ಪುಸ್ತಕವಾಗಿದೆ. ಸುಮಾರು ನೂರು ವರ್ಷಗಳ ಅವಧಿಯಲ್ಲಿ ಪ್ರಕಟವಾದ ಕನ್ನಡ ಕಾದಂಬರಿಗಳಲ್ಲಿ ದಲಿತ ಜಗತ್ತು ಯಾವ ರೀತಿ ಪ್ರತಿಪಾದಿತವಾಗಿದೆ ಎಂಬ ಸಂಗತಿಯನ್ನು ಈ ಕೃತಿ ವಿವರವಾಗಿ ಚರ್ಚಿಸುತ್ತದೆ. ನವೋದಯ, ಪ್ರಗತಿಶೀಲ, ನವ್ಯ ಮತ್ತು ಬಂಡಾಯ ಸಾಹಿತ್ಯದ ಕಾದಂಬರಿ ಗಳಲ್ಲಿ ಕಂಡುಬರುವ ದಲಿತರ ಜೀವನದ ಚಿತ್ರಣವನ್ನು ಈ ಕೃತಿ ಪರಿಶೀಲಿಸುತ್ತದೆ.

About the Author

ಸಬಿಹಾ ಭೂಮಿಗೌಡ
(04 July 1959)

ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾಗಿರುವ ಸಬಿಹಾ ಭೂಮಿಗೌಡ ಮೂಲತಃ ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಗಜೇಂದ್ರಗಡದವರು.  ತಂದೆ ಎಂ.ಆರ್. ಗಜೇಂದ್ರಗಡ, ತಾಯಿ ಸಾಹಿರಾ. ಎಂ.ಎ., ಪಿಎಚ್.ಡಿ. ಪಡೆದು ಪ್ರಾಧ್ಯಾಪಕಿಯಾಗಿ ಮಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಕಾರ್ಯ ನಿರ್ವಹಿಸಿದ ಅವರು ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರು, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರು, ಕರಾವಳಿ ಲೇಖಕಿಯರು ಮತ್ತು ವಾಚಕಿಯರ ಸಂಘದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ಬಗೆ (ವಿಮರ್ಶೆ) 2001, ಚಿತ್ತಾರ (ಕಾವ್ಯ) 2004, ಕನ್ನಡ ಭಾಷಾ ಪ್ರವೇಶ (ಸಹಲೇಖಕರೊಂದಿಗೆ) 2005, ನಿಲುಮೆ (ವಿಮರ್ಶೆ) 2005, ನುಡಿಗವಳ ...

READ MORE

Reviews

ಹೊಸತು- ನವೆಂಬರ್‌ -2005

ಭೂಮಿಗೌಡ ಅವರು ಪಿಎಚ್‌.ಡಿ. ಪದವಿಗಾಗಿ ಸಲ್ಲಿಸಿದ ಈ ನಿಬಂಧ ಪುಸ್ತಕ ರೂಪದಲ್ಲಿ ಪ್ರಕಟವಾಗಿದೆ. ಸುಮಾರು ನೂರು ವರ್ಷಗಳ ಅವಧಿಯಲ್ಲಿ ಪ್ರಕಟವಾದ ಕನ್ನಡ ಕಾದಂಬರಿಗಳಲ್ಲಿ ದಲಿತ ಜಗತ್ತು ಯಾವ ರೀತಿ ಪ್ರತಿಪಾದಿತವಾಗಿದೆ ಎಂಬ ಸಂಗತಿಯನ್ನು ಈ ಕೃತಿ ವಿವರವಾಗಿ ಚರ್ಚಿಸುತ್ತದೆ. ನವೋದಯ, ಪ್ರಗತಿಶೀಲ, ನವ್ಯ ಮತ್ತು ಬಂಡಾಯ ಸಾಹಿತ್ಯದ ಕಾದಂಬರಿಗಳಲ್ಲಿ ಕಂಡುಬರುವ ದಲಿತರ ಜೀವನದ ಚಿತ್ರಣವನ್ನು ಈ ಕೃತಿ ಪರಿಶೀಲಿಸುತ್ತದೆ. ಅದಕ್ಕೆ ಹಿನ್ನೆಲೆಯಾಗಿ ಮಾರ್ಕ್ಸ್‌ವಾದ, ಲೋಹಿಯಾವಾದ, ಅಂಬೇಡ್ಕರ್‌ವಾದ ಮುಂತಾದ ವಿಚಾರಗಳ ವಿವರಣೆಯನ್ನು ಕಾಣಬಹುದು. ಪ್ರಬಂಧದ ವ್ಯಾಪ್ತಿ ಹೆಚ್ಚಾಗಿರುವುದರಿಂದ ಕೆಲವು ಕಡೆ ಪುನರಾವೃತ್ತಿ ಆಗಿವೆ; ಮತ್ತೆ ಕೆಲವು ಕಡೆ ಪ್ರಾಥಮಿಕ ಸಂಗತಿಗಳ ಚಿತ್ರ ಇದೆ. ದಲಿತರ ಸಮಸ್ಯೆಗಳ ಮತ್ತು ಬದುಕಿನ ಎಲ್ಲಾ ಸಂಗತಿಗಳನ್ನು ವಿವರಿಸಬೇಕೆಂಬ ತವಕದಲ್ಲಿ ಒಳನೋಟಗಳಿಗಿಂತ ಹೆಚ್ಚಾಗಿ ವಿವರಗಳು ಪ್ರಾಧಾನ್ಯತೆ ಪಡೆದುಕೊಂಡಿವೆ. ಸಮಾಜಶಾಸ್ತ್ರ ಸಂಸ್ಕೃತಿಯ ಆಳವಾದ ತಿಳುವಳಿಕೆ ಬರಹದ ಹಿನ್ನೆಲೆಯಲ್ಲಿ ಇಲ್ಲ. ಆದರೂ ಆಧುನಿಕ ಸಾಹಿತ್ಯದಲ್ಲಿ ಕಾದಂಬರಿಗಳ ಮೂಲಕ ಅನಾವರಣಗೊಂಡಿರುವ ದಲಿತ ಜಗತ್ತಿನ ಇತಿಹಾಸ ತಿಳಿಯಲು ಈ ಗ್ರಂಥ ಉತ್ತಮ ಆಕರವಾಗಿದೆ.

Related Books