ಸಮಗ್ರ ಲಲಿತ ಪ್ರಬಂಧ

Author : ವೀರೇಂದ್ರ ಸಿಂಪಿ

Pages 216

₹ 150.00




Year of Publication: 2010
Published by: ಬಸವ ಪ್ರಕಾಶನ ಮತ್ತು ಪುಸ್ತಕ ವ್ಯಾಪಾರಿಗಳು
Address: ಮುಖ್ಯಬೀದಿ, ಗುಲಬರ್ಗಾ- 585101
Phone: 9449825431

Synopsys

‘ಸಮಗ್ರ ಲಲಿತ ಪ್ರಬಂಧ’ ಲೇಖಕ ಪ್ರೊ. ವೀರೇಂದ್ರ ಸಿಂಪಿ ಅವರ ಕೃತಿ. ಪ್ರಬಂಧ ಪ್ರಕಾರಕ್ಕೆ ಮೆರುಗು ತಂದ ಲೇಖಕ ವೀರೇಂದ್ರ ಸಿಂಪಿ ಅವರು ಈ ಕೃತಿಯಲ್ಲಿ ಅವರ 50 ಪ್ರಬಂಧಗಳು ಸಂಕಲನಗೊಂಡಿವೆ. ಇಲ್ಲಿಯ ಪ್ರತಿಯೊಂದು ಪ್ರಬಂಧವೂ ವಸ್ತು-ವಿಷಯ ವೈವಿಧ್ಯತೆಗಳಿಂದ ಕೂಡಿವೆ. ಬರಹದಲ್ಲಿ ಚಾಟಿ ಏಟು, ನಾರದ ಹಾಸ್ಯ, ವ್ಯಂಗ್ಯ, ವಿಡಂಬನೆ, ಸೊಗಸಾದ ಚಿತ್ರಣದೊಂದಿಗೆ ಓದುಗರನ್ನು ಸೆರೆಹಿಡಿಯುವ ಜಾಣ್ಮೆಯನ್ನು ಕಾಣಬಹುದು.

About the Author

ವೀರೇಂದ್ರ ಸಿಂಪಿ
(14 October 1938)

ಲೇಖಕ, ಪ್ರಬಂಧಕಾರ ವೀರೇಂದ್ರ ಸಿಂಪಿ ಅವರು ಹುಟ್ಟಿದ್ದು ವಿಜಾಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಚಡಚಣದಲ್ಲಿ. ತಂದೆ ಜಾನಪದ ತಜ್ಞ ಸಿಂಪಿ ಲಿಂಗಣ್ಣ, ತಾಯಿ ಸೊಲಬವ್ವ. ಪ್ರಾರಂಭಿಕ ಶಿಕ್ಷಣ ಚಡಚಣದಲ್ಲಿ ಪೂರೈಸಿದ ಅವರು ಬಿಜಾಪುರದ ವಿಜಯಾ ಕಾಲೇಜಿನಿಂದ ಬಿ.ಎ. ಪದವಿ, ಕರ್ನಾಟಕ ವಿ.ವಿ.ಯಿಂದ ಎಂ.ಎ. ಪದವಿ ಪಡೆದರು. ಆನಂತರ ಬಿ.ವಿ. ಭೂಮರೆಡ್ಡಿ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ವೃತ್ತಿ ಆರಂಭಿಸಿದ ಅವರು 1999ರಲ್ಲಿ ನಿವೃತ್ತಿಯಾದರು. ತದನಂತರವೂ ಚಿದಂಬರ ಶಿಕ್ಷಣ ಸಂಸ್ಥೆಯಲ್ಲಿ ಪ್ರಾಚಾರ್ಯರಾಗಿ ನಾಲ್ಕು ವರ್ಷ ಸೇವೆ ಸಲ್ಲಿಸಿದರು. ಶಾಲಾ ದಿನಗಳಿಂದಲೇ ಸಾಹಿತ್ಯದತ್ತ ಆಕರ್ಷಿತರಾಗಿದ್ದ ವೀರೇಂದ್ರ ಸಿಂಪಿ ಅವರು ಹೈಸ್ಕೂಲಿನಲ್ಲಿದ್ದಾಗಲೇ  ‘ಖೊಟ್ಟಿ ...

READ MORE

Related Books