ಜಾಲಾರ ಹೂವು ಮತ್ತು ಇತರ ಪ್ರಬಂಧಗಳು

Author : ಜಿ.ವಿ. ಆನಂದಮೂರ್ತಿ

Pages 96

₹ 85.00




Year of Publication: 2014
Published by: ಅಹರ್ನಿಶಿ ಪ್ರಕಾಶನ
Address: ಜ್ಞಾನವಿಹಾರ ಬಡಾವಣೆ, ಕಂಟ್ರಿಕ್ಲಬ್ ಹತ್ತಿರ, ವಿದ್ಯಾನಗರ, ಶಿವಮೊಗ್ಗ-577203

Synopsys

ಕಥೆಗಾರ, ಲೇಖಕ ಜಿ.ವಿ. ಆಂದಮೂರ್ತಿ ಅವರ ಪ್ರಬಂಧಗಳ ಸಂಕಲನ-ಜಾಲಾರ ಹೂವು ಮತ್ತು ಇತರ ಪ್ರಬಂಧಗಳು. ಓದುಗರನ್ನು ಸೆಳೆಯುವ ಲಲಿತ ಪ್ರಬಂಧಗಳ  ಬರಹಗಳಿವೆ.   ಬೌದ್ಧಿಕತೆಯ ಭಾರವಿಲ್ಲ. ಚಿಂತನೆಯನ್ನುಪ್ರೇರೇಪಿಸುತ್ತವೆ. ಜೀವನೋತ್ಸಾಹ ಮೂಡಿಸುತ್ತವೆ. ಎಲ್ಲ ಪ್ರಬಂಧಗಳಲ್ಲಿ ಆತ್ಮಕಥೆಯ ಆಪ್ತತೆ ಇದೆ. ಜೀವನಕ್ರಮ ಕುರಿತು ಮಾತನಾಡುತ್ತದೆ. ಹಳ್ಳಿಯ ಬದುಕನ್ನು ಚಿತ್ರಿಸುತ್ತದೆ. ಆಧುನಿಕತೆಯಿಂದ ಪಡೆದುಕೊಂಡಿದ್ದೆಷ್ಟು ಕಳೆದುಕೊಂಡಿದ್ದೆಷ್ಟು ಎಂಬ ಜಿಜ್ಞಾಸೆಯು ಓದುಗರ ಚಿಂತನೆಯನ್ನು ಬಡಿದೆಬ್ಬಿಸುತ್ತವೆ. 

About the Author

ಜಿ.ವಿ. ಆನಂದಮೂರ್ತಿ

ಡಾ. ಜಿ.ವಿ.ಆನಂದಮೂರ್ತಿ ಅವರು ಮೂಲತಃ ತುಮಕೂರು ಜಿಲ್ಲೆಯ ಬೆಳ್ಳಾವೆ ಮಜರೆ ಗ್ರಾಮದ ತಿಗಳರ ಗೊಲ್ಲಹಳ್ಳಿಯವರು.   ತುಮಕೂರು ಮತ್ತು ಬೆಂಗಳೂರಿನಲ್ಲಿ ಪದವಿವರೆಗೆ  ಶಿಕ್ಷಣ ಪಡೆದು ನಂತರ ಮೈಸೂರು ವಿಶ್ವವಿದ್ಯಾನಿಲಯದಿಂದ  (2005) ರಲ್ಲಿ ಪಿಎಚ್.ಡಿ ಪಡೆದರು. ಸಾಹಿತಿ-ಲೇಖಕರಾಗಿರುವ ಅವರು (1998-2001)ರಲ್ಲಿ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಸದಸ್ಯರಾಗಿದ್ದರು.  ಕೃತಿಗಳು: ಬುದ್ದತೋರಿದ ದಾರಿ (ಬುದ್ಧದೇವನ ಜೀವತದ ವಿವರಗಳು), ನೀರಗಂಧ (ಕವನಸಂಕಲನ), ಹೊಳೆಸಾಲು (ಜನಪದ ಕಲಾವಿದರನ್ನು ಕುರಿತ ಬರಹ), ಜಾಲಾರ ಹೂವು (ಪ್ರಬಂಧ). ಶಾಂತವೇರಿ ಗೋಪಾಲಗೌಡ ನೆನಪಿನ ಸಂಪುಟ, ಗರಿಗೆದರಿದ ನವಿಲು (ಜನಪದ ಕಲಾವಿದರ ಆತ್ಮಕಥೆಗಳ ನಿರೂಪಣೆ), ಸಾಲ ಸಂಪಿಗೆ ನೆರಳು (ಎಳೆಯರಿಗಾಗಿ ಜಾನಪದ ಹಲವು ತೋಟದ ಹೂಗಳು -ಜನಪದ ತತ್ವಪದಗಳ ...

READ MORE

Related Books