ಕುಟ್ಟವಲಕ್ಕಿ

Author : ಪ್ರಶಾಂತ ಆಡೂರ

Pages 136

₹ 100.00




Year of Publication: 2012
Published by: ಛಂದ ಪುಸ್ತಕ
Address: ಐ- 004, ಮಂತ್ರಿ ಪ್ಯಾರಡೈಸ್, ಬನ್ನೇರುಘಟ್ಟ ರಸ್ತೆ, ಬೆಂಗಳೂರು – 76
Phone: 9844422782

Synopsys

ಲೇಖಕ ಪ್ರಶಾಂತ ಆಡೂರ ಅವರ ಪ್ರಬಂಧಗಳ ಸಂಕಲನ ’ಕುಟ್ಟವಲಕ್ಕಿ’.

ಉತ್ತರ ಕರ್ನಾಟಕದ ಭಾಷಾ ಬಳಕೆಯಲ್ಲಿನ ನಿರೂಪಣೆಯ ಇವರ ಪ್ರಹಸನ ಬರಹಗಳು ಓದುಗರನ್ನು ಸಲೀಸಾಗಿ ಓದಿಸಿಕೊಂಡು ಸಾಗುವ ಹಾಗೆ ನವಿರಾಗಿದೆ. ಲೇಖಕರ ಬಾಲ್ಯದ ದಿನಗಳು, ಆಟ ಪಾಟಗಳು, ನೋವು ನಲಿವುಗಳ ಕಥಾ ಹಂದರದಂತೆ ಇವರ ಪ್ರಬಂಧಗಳು ಈ ಕೃತಿಯಲ್ಲಿದೆ.

ಊರುಕೇರಿಗಳ ನೆನಪನ್ನು ಹೆಕ್ಕುವ, ತಿನಿಸು ಅಂಗಳದಲ್ಲಿ ಕಳೆದ ದಿನಗಳ ಬಗ್ಗೆ ತಮ್ಮ ಹಾಡು ಹರಟೆಯ ಶೈಲಿಯಲ್ಲಿಯೇ ಲೇಖಕರು ಬರಹವನ್ನು ಈ ಕೃತಿಯಲ್ಲಿರಿಸಿದ್ದಾರೆ.

About the Author

ಪ್ರಶಾಂತ ಆಡೂರ
(13 October 1973)

ಬರಹಗಾರ ಪ್ರಶಾಂತ್‌ ಆಡೂರ ಅವರು ಜನಿಸಿದ್ದು 1973 ಅಕ್ಟೋಬರ್‌ 13ರಂದು. ಹುಟ್ಟಿದ್ದು ಶಿವಮೊಗ್ಗದಲ್ಲಿಯಾದರೂ ಬಾಲ್ಯವೆಲ್ಲಾ ಹುಬ್ಬಳ್ಳಿಯಲ್ಲಿ. ಬಿಎಸ್ಸಿ, ಎಂಬಿಎ ಪದವಿ ಶಿಕ್ಷಣ ಪಡೆದಿದ್ದಾರೆ. ಪ್ರಸ್ತುತ ಹುಬ್ಬಳ್ಳಿಯಲ್ಲಿ ಖಾಸಗಿ ಕಂಪನಿಯೊಂದನ್ನು ನಡೆಸುತ್ತಿದ್ದಾರೆ. ತಮ್ಮದೇ ಆದ ಬ್ಲಾಗ್‌ ಬರವಣಿಗೆಯಲ್ಲಿಯೂ ತೊಡಗಿಸಿಕೊಂಡಿರುವ ಇವರು, ವಿಜಯಕರ್ನಾಟಕ ಹಾಗೂ ವಿಜಯವಾಣಿಯಲ್ಲಿ ಅಂಕಣಗಳನ್ನು ಬರೆದಿದ್ದಾರೆ. ...

READ MORE

Related Books