ವಿದೇಶದ ತಿಳಿವಳಿಕೆಗಳು

Author : ಬಿ.ಎಚ್. ಶ್ರೀಧರ

Pages 98

₹ 1.00




Year of Publication: 1959
Published by: ಶ್ರೀರಾಮಕೃಷ್ಣ ಪ್ರಿಂಟಿಂಗ್ ವರ್ಕ್ಸ್ ಪ್ರೈ. ಲಿಮಿಟಡ್
Address: ಕುಮಟಾ, ಉತ್ತರ ಕನ್ನಡ ಜಿಲ್ಲೆ

Synopsys

‘ವಿದೇಶದ ತಿಳಿವಳಿಕೆಗಳು’ ಕೃತಿಯು ಬಿ.ಎಚ್. ಶ್ರೀಧರ ಅವರ ಗ್ರಂಥವಾಗಿದೆ. ಎಂಬ ಪ್ರಸ್ತುತ ಗ್ರಂಥವು ಮೊದಲು ಶ್ರೀ ವಿ. ಎಮ್‌. ಮಿರ್ಜಾರವರ “ಕರ್ನಾಟಕ ಧುರೀಣ”ದಲ್ಲಿ ಖಂಡಶಃ ಪ್ರಕಟವಾಗಿ ಆನಂತರ ಪುಸ್ತಕ ರೂಪದಲ್ಲಿ ಪ್ರಸಿದ್ಧವಾಗುತ್ತಿದೆ. ಅದರ ಗ್ರಂಥಕರ್ತರು ಶ್ರೇಷ್ಠ ಕವಿಗಳೂ ಜನಪ್ರಿಯ ವಾಗ್ಮಿಗಳೂ ವಿಚಾರವನ್ನು ಕೆಣಕಿ ಸಮಾಧಾನ ಪಡಿಸಬಲ್ಲ ಪ್ರಬಂಧಕಾರರೂ ಆಗಿ ಆಗಲೇ ಮೈಸೂರು ರಾಜ್ಯದ ಎಲ್ಲಡಿಯ ಕನ್ನಡಿಗರಿಗೂ ಸುಪರಿಚಿತರಾದವರು. ಗ್ರಂಥದಲ್ಲಿ ಪ್ಲೇಟೋವಿನಿಂದ ಹಿಡಿದು ರಸೆಲ್‌ ಡ್ಯೂಯಿಗಳ ವರೆಗಿನ ಖ್ಯಾತನಾಮ ತತ್ವಜ್ಞಾನಿಗಳ ರಾಜಕೀಯ, ಆರ್ಥಿಕ ಹಾಗೂ ನೈತಿಕ ಸುಧಾರಣಾಪರ ವಿಚಾರಗಳನ್ನು ಸಂಕ್ಷೇಪತಃ ಕಾಣಬಹುದು. ಭಾಷೆಯ ಸರಳತೆಯೂ ವಾಕ್ಯಗತಿಯ ನೇರವಾದ ಓಟವೂ ವಿಚಾರಗಳ ಧಾರಾವಾಹಿತ್ರವೂ ಗ್ರಂಥದಲ್ಲಿ ಎದ್ದು ಕಾಣುವ ಗುಣಗಳು. ಮೈಸೂರು ಅಭಿನವ ವಿಜಯನಗರ ಕರ್ನಾಟಕವಾಗಿ ರೂಪುಗೊಳ್ಳುತ್ತಿರುವ ಕನ್ನಡಿಗರ ಈ ವರ್ಧಮಾನ ದಶೆಯಲ್ಲಿ ಪ್ರಸ್ತುತ ಬರೆಹವೂ ಪ್ರಜಾಕೋಟಯ ವಿಜಾರನಿಪಾಸೆಯನ್ನು, ನಿವಾರಿಸುವುದರಲ್ಲಿ ಮೊದಲ ಹೆಜ್ಜೆಯನ್ನಿಟ್ಟ ಪ್ರಯತ್ನಗಳಲ್ಲಿ ಒಂದಾಗಿ ನಿಂತಿರುವುದು ಅಭಿನಂದನೀಯ ಎನ್ನುತ್ತದೆ ಈ ಕೃತಿ.

About the Author

ಬಿ.ಎಚ್. ಶ್ರೀಧರ
(24 April 1918 - 24 April 1990)

ಕವಿ, ಅನುವಾದಕ, ಪ್ರಬಂಧಕಾರ ಶ್ರೀಧರರು ಹುಟ್ಟಿದ್ದು ದ. ಕನ್ನಡ ಜಿಲ್ಲೆಯ ಬಿಜೂರು ಗ್ರಾಮದ ಬವಲಾಡಿಯಲ್ಲಿ. ತಂದೆ ಸೀತಾರಾಮ ಹೆಬ್ಬಾರರು, ತಾಯಿ ನಾಗಮ್ಮ. ಬಾರ್ಕೂರಿನಿಂದ ಬವಲಾಡಿಗೆ ಬಂದು ನೆಲೆಸಿದ ವಂಶಸ್ಥರು. ಪ್ರಾಥಮಿಕದಿಂದ ಹೈಸ್ಕೂಲು ವರೆಗೆ ಸೊರಬ, ಸಾಗರದಲ್ಲಿ ವಿದ್ಯಾಭ್ಯಾಸ, ಇಂಟರ್ ಮೀಡಿಯೆಟ್‌ಗೆ ಸೇರಿದ್ದು ಮೈಸೂರು. ಊಟಕ್ಕೆ ವಾರಾನ್ನ, ಪುಸ್ತಕಗಳಿಗೆ ಗ್ರಂಥಾಲಯ, ಫೀಸಿಗೆ ಸ್ಕಾಲರ್‌ಶಿಪ್, ಇಂಟರ್ ಮೀಡಿಯೆಟ್ ಮುಗಿಸಿದರು. ದೊರೆತ ಶಿಷ್ಯ ವೇತನ, ಮನೆ ಪಾಠ ಹೇಳಿ ತಂದೆಗೂ ಹಣ ಸಹಾಯ. ಬಿ.ಎ. ಆನರ್ಸ್‌ ಪಾಸು. ಹಲವಾರು ಪದಕ ಬಹುಮಾನ ಗಳಿಕೆ ಸಂತಸ. ಆದರೆ ಎಂ.ಎ. ಓದಲು ಹಣದ ಅಡಚಣೆಯಿಂದ ಬೆಂಗಳೂರಿನ ಪ್ರೆಸ್ ...

READ MORE

Related Books