ಶಬ್ಧದೊಳಗಣ ನಿಶ್ಯಬ್ಧ (ಲೇಖನಗಳು)

Author : ಸಿದ್ಧರಾಮ ಉಪ್ಪಿನ್



Year of Publication:
Published by: ತೇಜು ಪಬ್ಲಿಕೇಷನ್ಸ್
Address: #233, 7ನೇ ’ಎ’ ಅಡ್ಡರಸ್ತೆ, ಶಾಸ್ತ್ರೀನಗರ ಬೆಂಗಳೂರು ಕರ್ನಾಟಕ-560028
Phone: 9902474199

Synopsys

‘ಶಬ್ದದೊಳಗಿನ ನಿಶ್ಯಬ್ಧ’ ಕೃತಿಯು ಸಿದ್ದರಾಮ ಉಪ್ಪಿನ ಅವರ ಲಲಿತ ಪ್ರಬಂಧವಾಗಿದೆ. ಕೃತಿಗೆ ಬೆನ್ನುಡಿ ಬರೆದಿರುವ ಮಹಿಪಾಲರೆಡ್ಡಿ ಮುನ್ನೂರ್ ಅವರು, ಶಬ್ದದೊಳಗಣ ನಿಶ್ಯಬ್ಧ ಎಂಬ ಲಲಿತ ಪ್ರಬಂಧಗಳ ಸಂಕಲನದಲ್ಲಿ ಘನ ನೆನಪುಗಳ, ಒಂದು ಕಾಲಘಟ್ಟದ ಸಂಸ್ಕೃತಿಯ ಮತ್ತು ಪ್ರಚ್ಛನ್ನ ನಂಬಿಕೆಗಳ ಗಾಢಸಂಸ್ಕೃತಿಯ ಕಥನವಿದೆ. ಮೂವತ್ತು ವರ್ಷಗಳಿಂದ “ ಉಪ್ಪಿನ ,ಮೀಮಾಂಸೆ” ಯ ನೈಪುಣ್ಯದ ಬರಹದ ಹಾಗೂ ನ್ಯಾಯ ನಿಷ್ಠುರದ ಬರವಣಿಗೆ ಖಾಯಂ ಓದುಗಾರ ನಾನು ಎಂದಿದ್ದಾರೆ. ಅವರ ಆರಂಭದ ‘ಎರಡು ಆತ್ಮಒಂದು ಕವಿತೆಗಳಿಂದ ಹಿಡಿದು ಇದೂವರೆಗಿನ ಅವರ ಅಕ್ಷರ ಸುಗ್ಗಿ’ ಯ ಫಲಾನುಬಾವಿ. ಈ ನಿಶ್ಯಬ್ಧಗಳು ಲಾಲಿತ್ಯಪೂರ್ಣ, ಸಮಾಜದ ಕಳಕಳಿ ಇಲ್ಲದಿದ್ದರೆ, ಬದುಕು ಸಮಾಜಮುಖಿ ಆಗದಿದ್ದರೆ, ಇಂತಹ ಅಪ್ಯಾಯಮಾನ ಕೃತಿ ಕೊಡುವುದಕ್ಕೆ ಸಾಧ್ಯವಾ’? ಶಬ್ದದೊಳಗಣ ನಿಶ್ಯಬ್ಧ ರಸಪೂರ್ಣ. ಉಪ್ಪಿನವರದು ಮಾಯೆಯನ್ನು ಮೆಲುಕು ಹಾಕುವಂತಹ ಹದವಾದ ಬರವಣಿಗೆ. ಬೆರಗು ಭಿನ್ನಾಣಗಳ ಅಕ್ಷರ ಪಾಕದ ಸುಗ್ರಾಸ ಭೋಜನವಿದು ಎಂದಿದ್ದಾರೆ.

About the Author

ಸಿದ್ಧರಾಮ ಉಪ್ಪಿನ್
(06 June 1952)

ಹಿರಿಯ ಲೇಖಕ ಸಿದ್ಧರಾಮ ಉಪ್ಪಿನ ಮೂಲತಃ ಅವಿಭಜಿತ ವಿಜಯಪುರ ಜಿಲ್ಲೆಯ ಆಲಮೇಲದವರು.ಈಗ ಆಲಮೇಲವೇ ತಾಲೂಕು ಕೇಂದ್ರವಾಗಿದೆ.  ವೃತ್ತಿಯಿಂದ ಕೃಷಿಕರು. ಬರವಣಿಗೆ ಅವರ ಆಸಕ್ತಿದಾಯಕ ಕ್ಷೇತ್ರ. ಬಿ.ಕಾಂ ಶಿಕ್ಷಣವನ್ನು ಹುಬ್ಬಳ್ಳಿಯ ಜೆ.ಜಿ ವಾಣಿಜ್ಯ ಕಾಲೇಜಿನಲ್ಲಿ ಪೂರ್ಣಗೊಳಿಸಿದರು. 1996 ರಿಂದ 1999 ರವರೆಗೆ ಕನ್ನಡಪ್ರಭ ತಾಲ್ಲೂಕು ವರದಿಗಾರರಾಗಿ, ಶ್ರೀ ದತ್ತ ನಾಟ್ಯ ವಸ್ತು ಭಂಡಾರದ ಸಂಚಾಲಕರಾಗಿ, ರಂಗ ಪರಿಕರ ಪ್ರಕಾಶನದ ಸಂಚಾಲಕರಾಗಿ ಹಲವಾರು ಕೃತಿಗಳನ್ನು ಪ್ರಕಟಿಸಿದ್ದಾರೆ. ಇವರ ಹಲವಾರು ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. 1996 ರಿಂದ 1999 ರವರೆಗೆ ಶಹಾಪುರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ,  1998 ರಿಂದ 2001 ರವರೆಗೆ ತಾಲೂಕಿನ ಕನ್ನಡ ...

READ MORE

Related Books