ಕೊಡುವುದೇನು? ಕೊಂಬುದೇನು?

Author : ಸುನಂದಾ ಬೆಳಗಾಂವಕರ

Pages 208

₹ 130.00




Year of Publication: 2012
Published by: ಅಂಕಿತ ಪುಸ್ತಕ
Address: ಅಂಕಿತ ಪುಸ್ತಕ, #53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು - 560 004
Phone: 080 - 2661 7100 / 2661 7755

Synopsys

'ಕೊಡುವುದೇನು? ಕೊಂಬುದೇನು?' ಸುನಂದಾ ಬೆಳಗಾಂವಕರ ಅವರ ಕೃತಿಯಾಗಿದೆ. ಕೊಡುವುದೇನು? ಕೊಂಬುದೇನು? ವ್ಯಕ್ತಿ ಚಿತ್ರ ಪ್ರಬಂಧಗಳ ಸಂಕಲನ. ಇಲ್ಲಿ ಚಿತ್ರಿತಗೊಂಡಿರುವ ವ್ಯಕ್ತಿಗಳು ಸಾಮಾನ್ಯರಾದರೂ ಗುಣದಲ್ಲಿ ಅಸಾಮಾನ್ಯರು. ತಮ್ಮ ನಿರ್ಮಲಾಂತಃಕರಣದಿಂದ ಹೃದಯ ತುಂಬ ಪ್ರೀತಿ ಕೊಟ್ಟವರು. ಜೀವನದ ಹೋರಾಟದಲ್ಲಿ ಬಿದ್ದರೂ ಎದ್ದು ಬಂದವರು. ಈ ಎಲ್ಲ ಹಿರಿಯ ವ್ಯಕ್ತಿಗಳ ಹೃದಯವೇ ಅವರ ಗುರು. ಅವರ ಅಂತರ್ವಾಹಿನಿ ಪ್ರೀತಿ, ಮಾನವೀಯತೆ ಬತ್ತದ ಸೆಲೆ, ಮನುಷ್ಯನ ಎದೆಯ ದನಿಗೆ ಮಿಗಿಲಾದ ಯಾವ ಶಾಸ್ತ್ರವೂ ಇಲ್ಲ. ಧರ್ಮವೂ ಇಲ್ಲ ಎಂಬುದನ್ನು ಈ ಪ್ರಬಂಧಗಳು ಮನಮುಟ್ಟುವಂತೆ ಹೇಳುತ್ತದೆ.

About the Author

ಸುನಂದಾ ಬೆಳಗಾಂವಕರ
(20 October 1935)

ಇಪ್ಪತ್ತನೆ ಶತಮಾನದ ಪೂರ್ವಾರ್ಧದ ಸಮಕಾಲೀನ ಲೇಖಕಿಯರಲ್ಲಿ ಒಂದು ಗಣನೀಯ ಹೆಸರೆಂದರೆ ಸುನಂದಾ ಬೆಳಗಾಂವಕರ. ಧಾರವಾಡದ ಮಹಿಷಿ ಕುಟುಂಬದವರು. ವಿವಾಹದ ನಂತರ ಆಫ್ರಿಕಾ ಖಂಡದ ಝಾಂಬಿಯ ದೇಶದಲ್ಲಿ ತಮ್ಮ ಪತಿಯೊಡನೆ ಮೂವತ್ತು ವರ್ಷ ಕಳೆದು, ಬಳಿಕ ಭಾರತಕ್ಕೆ ಹಿಂತಿರುಗಿದರು. ಸುನಂದಾ ಬೆಳಗಾವಕರರವರು ಬರೆದ ‘ಕಜ್ಜಾಯ(ಪ್ರಬಂಧ)’ ಸುಧಾ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿ  ಅಪಾರ ಜನಪ್ರಿಯತೆಯನ್ನು ತಂದುಕೊಟ್ಟಿತು. ಇದಲ್ಲದೆ ಅವರು ‘ಶಾಲ್ಮಲಿ’ ಎನ್ನುವ ಕಾವ್ಯಸಂಕಲನ, ‘ನಾಸು’, ‘ಝವೇರಿ’ ಎನ್ನುವ ಕಾದಂಬರಿಗಳನ್ನು ಬರೆದಿದ್ದಾರೆ. ಸುನಂದಾ ಬೆಳಗಾಂವಕರ ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರ ‘ನಾಸು’ ಕಾದಂಬರಿಗೆ 1990 ರಲ್ಲಿಕರ್ನಾಟಕ ವಿದ್ಯಾವರ್ಧಕ ಸಂಘದ ರತ್ನಮ್ಮ ಹೆಗ್ಗಡೆ ಪ್ರಥಮ ಬಹುಮಾನ ಲಭಿಸಿದೆ. 2017ರಲ್ಲಿ ನಿಧನ ಹೊಂದಿದರು.  ...

READ MORE

Related Books