
ಕೆ. ಸತ್ಯನಾರಾಯಣ ಕನ್ನಡದ ಬಹುಮುಖ್ಯ ಕತೆಗಾರ. ’ಮಾನ್ಯ ಸಾಮಾನ್ಯರ ಬದುಕು’ ಅವರ ಬಾಲ್ಯ, ಕೌಟುಂಬಿಕ ಜೀವನ, ವೃತ್ತಿ ಬದುಕು, ಸಾಂಸ್ಕೃತಿಕ ಒಡನಾಟದಲ್ಲಿ ಕಂಡು ಕೇಳಿದ ಕೆಲವು ಪ್ರಸಂಗಗಳ ಗುಚ್ಛ.
’ಇವುಗಳಲ್ಲಿ ಕೆಲವು ವ್ಯಾಖ್ಯಾನಗಳಾಗಿವೆ. ಇನ್ನು ಕೆಲವು ಕತೆಯ, ಪ್ರಬಂಧದ ಜಾಡನ್ನು ಹಿಡಿಯುತ್ತಿರುವಂತೆ ಕಂಡರೂ ನಿಜದಲ್ಲಿ ಅವು ಕತೆಗಳಲ್ಲ, ಪ್ರಬಂಧಗಳಲ್ಲ. ಹಾಗೆ ಆಗಬೇಕೆಂಬ ಆಸೆ ಕೂಡ ನನಗಿಲ್ಲ. ಇವುಗಳ ಜೀವಂತಿಕೆ, ಆತ್ಮೀಯತೆ, ಮುಕ್ತಸಾಧ್ಯತೆ-ಸ್ವಭಾವ ನನ್ನನ್ನು ಆಕರ್ಷಿಸಿದೆ. ಓದುಗರಿಗೂ ಅವರವರ ಬದುಕಿನ ಪ್ರಸಂಗಗಳನ್ನು ಮತ್ತೆ ರೂಪಿಸಿಕೊಳ್ಳಲು, ಹಂಚಿಕೊಳ್ಳಲು ಈ ಬರವಣಿಗೆಯಿಂದ ಪ್ರೇರಣೆ ಸಿಕ್ಕರೆ ನನಗೆ ಸಂತೋಷವಾಗುತ್ತದೆ’ ಎಂದಿದ್ದಾರೆ.
ಪ್ರಸಂಗದ ಸ್ಪರ್ಶ ಇರುವುದರಿಂದ ಕೃತಿ ಓದುಗರನ್ನು ಸುಲಭವಾಗಿ ಸೆಳೆಯುತ್ತದೆ. ಸನ್ನಿಧಿ ಪ್ರಕಾಶನ ಕೃತಿಯನ್ನು ಹೊರತಂದಿದೆ.

©2025 Book Brahma Private Limited.