ತರ್ಲೆ ತಿಮ್ಮನ ಬಿ. ಫಾರ್ಮ್

Author : ಅಜಮೀರ ನಂದಾಪುರ

Pages 180

₹ 170.00




Published by: ಶರ್ಮಿಳಾ ಪ್ರಕಾಶನ ಕನಕಗಿರಿ
Phone: 9449705672

Synopsys

ಕನ್ನಡ ಸಾಹಿತ್ಯದಲ್ಲಿ ಲಲಿತ ಪ್ರಬಂಧಗಳಿಗೆ ಅದರದೇ ಆದ ಇತಿಹಾಸವಿದೆ. ಲಲಿತ ಪ್ರಬಂಧಗಳಿಗೆ ಅದರದೇ ಆದ ಓದುಗ ಬಳಗವೂ ಇದೆ. ಎ.ಎನ್. ಮೂರ್ತಿ ರಾಯರಿಂದ ಹಿಡಿದು, ರಾಜಕೀಯ ವಿಡಂಬನೆಗಳ ಮೂಲಕ ಹೆಸರಾಗಿರುವ ಬಿ. ಚಂದ್ರೇಗೌಡರವರೆಗೆ, ಈ ಕ್ಷೇತ್ರವನ್ನು ಬೇರೆ ಬೇರೆ ಲೇಖಕರು ಬೇರೆ ಬೇರೆ ರೀತಿಯಲ್ಲಿ ಪ್ರಯೋಗಕ್ಕೆ ಒಡ್ಡಿದ್ದಾರೆ. ಕೆಲವರು ಇದನ್ನು ಬರಿದೆ ಹಾಸ್ಯಕ್ಕಷ್ಟೇ ಬಳಸಿಕೊಂಡರೆ, ಹಲವರು ಹಾಸ್ಯದ ಜೊತೆಗೇ ಬದುಕಿನ ಅಗಾಧತೆಯನ್ನು ತೆರೆದುಕೊಟ್ಟಿದ್ದಾರೆ. ರಾಜಕೀಯ ವಿಡಂಬನೆಗಳ  ಮೂಲಕವೂ ಈ ಕ್ಷೇತ್ರವನ್ನು ದುಡಿಸಿಕೊಂಡವರಿದ್ದಾರೆ. ಇಂದಿಗೂ ಲಲಿತ ಪ್ರಬಂಧಗಳ ಕೆಲವು ಪಾತ್ರಗಳು ಜೀವಂತ ಪಾತ್ರಗಳೋ ಎಂಬಂತೆ ನಮ್ಮಲ್ಲಿ ಉಳಿದುಕೊಂಡಿವೆ. ಅಜಮೀರ ನಂದಾಪುರ ಅವರು ತಮ್ಮನನ್ನೇ ನಾಯಕನನ್ನಾಗಿಸಿ, ಬರದ ಲಲಿತ ಪ್ರಬಂಧಗಳ ಸಂಕಲನ 'ತರ್ಲೆ ತಿಮ್ಮನ ಬಿ. ಫಾರ್ಮ್' ಇಲ್ಲಿದೆ. ತರ್ಲೆ ತಿಮ್ಮನ ಮೂಲಕ ನಗೆಗೆ ಊನವಾಗದಂತೆ ಸಮಾಜದ ಹತ್ತು ಹಲವು ಕಪ್ಪು ಬಿಳುಪು ಮುಖಗಳನ್ನು ಲೇಖಕರು ಇಲ್ಲಿ ಸೃಜನಶೀಲವಾಗಿ ಅನಾವರಣಗೊಳಿಸಿದ್ದಾರೆ. ಸಮಾಜದ ಬೇರೆ ಬೇರೆ ಸಮಸ್ಯೆಗಳನ್ನು ಲೇಖಕರು ಇವನ ಮೂಲಕ ಈ ಕೃತಿಯಲ್ಲಿ ವಿವರಿಸಿದ್ದಾರೆ.

About the Author

ಅಜಮೀರ ನಂದಾಪುರ
(01 June 1972)

ಅಜಮೀರ ನಂದಾಪುರ ಅವರು ಜನಿಸಿದ್ದು 1972 ಜೂನ್‌ 1ರಂದು. ಮೂಲತಃ ಗಂಗಾವತಿಯ ಕನಕಗಿರಿಯವರಾದ ಇವರು ಜನತಾ ಸೇವಾ ಅನುದಾನಿಕ ಕನ್ನಡ ಮಾಧ್ಯಮ ಪ್ರೌಢಶಾಲಾ ಮುಖ್ಯೋಪಾಧ್ಯಾಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಂದೆ ಶ್ಯಾಮೀದಸಾಬ ನಂದಾಪುರ,ತಾಯಿ ಹೊನ್ನುರುಬಿ. ಬಿ,ಎ, ಬಿ,ಎಡ್, ಹಾಗೂ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸಾಹಿತ್ಯದ ಬಗ್ಗೆ ಅತೀವ ಆಸಕ್ತಿ ಇದ್ದ ಇವರು ಸಾಹಿತ್ಯ ಕೃಷಿಯಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಹಲವಾರು ದಿನಪತ್ರಿಕೆಗಳಲ್ಲಿ ಅಂಕಣ ಬರಹಗಳನ್ನು ಬರೆದಿರುವ ಇವರ ಪ್ರಮುಖ ಕೃತಿಗಳೆಂದರೆ ಹುಚ್ಚು ಮನಸ್ಸುಗಳು ಕವನ ಸಂಕಲನ, ತರ್ಲೆ ತಿಮ್ಮನ ಗಾಂಧಿ ಹೌಸ್, ತರ್ಲೆ ತಿಮ್ಮನ ಭಿ ಪಾರ್ಮ್ ಲಲಿತ ...

READ MORE

Related Books