
ಪ್ರಬಂಧ-ಅಂಕಣ ಸಾಹಿತ್ಯದಲ್ಲಿ ಪ್ರಮುಖ ಹೆಸರಾಗಿರುವ ಚಂದ್ರಶೇಖರ ಆಲೂರು ಅವರ ಆಯ್ದ 64 ಪ್ರಬಂಧಗಳು ಈ ಸಂಕಲನದಲ್ಲಿವೆ. ’ನಾನು ಒಲಿದಂತೆ ಹಾಡುವೆ’ ಮತ್ತು ’ಸಖೀಗೀತ’ ಪ್ರಬಂಧ ಸಂಕಲನಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿರುವ ಆಲೂರು ಅವರ ಆ ಎರಡು ಸಂಕಲನಗಳು ಸೇರಿ ಇದುವರೆಗೆ ಪ್ರಕಟಿಸಿರುವ ಪ್ರಬಂಧ ಸಂಕಲನಗಳಿಂದ ಆಯ್ದು ಪ್ರಕಟಿಸಿದಾರೆ.
ಮುನ್ನುಡಿಯಲ್ಲಿ ರಹಮತ್ ತರೀಕೆರೆ ಅವರು ’ಇಡೀ ಸಂಕಲನ ಸುಂದರವಾದ ವ್ಯಕ್ತಿಚಿತ್ರಗಳ ಸಂಪುಟದಂತಿದೆ. ದನದ ಮಾರಾಟಗಾರ, ನಟಿ, ರೈತ, ವಾಚ್‌ವುಮನ್, ಸ್ಟೇಶನ್ ಮಾಸ್ಟರ್ ಹೀಗೆ ಹಲವಾರು ಪಾತ್ರಗಳು ಇಲ್ಲಿವೆ. ಬಹುತೇಕ ವ್ಯಕ್ತಿಗಳು ಚೈತನ್ಯವಂತ ಸ್ತ್ರೀಯರು. ಇಷ್ಟಾಗಿ ಸ್ಟೇಷನ್ ಮಾಸ್ತರಾಗಿರುವ ಪ್ರಬಂಧ ನಾಯಕನ ತಂದೆಯ ಪಾತ್ರವು ಓದುಗರ ಚಿತ್ತದಲ್ಲಿ ಗಾಢವಾಗಿ ನಿಂತು ಬಿಡುತ್ತದೆ. ಈ ಪಾತ್ರದ ಭಾಗವಾಗಿ ರೈಲು ರೈಲ್ವೆ ಹಳಿ ಸಿಗ್ನಲ್ ಪ್ಲಾಟ್ ಫಾರಂ ಸ್ಟೇಶನ್ ಕ್ವಾರ್ಟಸ್ಸುಗಳ ಜಗತ್ತೇ ಇಲ್ಲಿ ಮೈದಳೆಯುತ್ತದೆ. ಕುವೆಂಪು ಪ್ರಬಂಧಗಳಲ್ಲಿ ಕಾಡಿನಂತೆ, ಗೊರೂರು ಪ್ರಬಂಧಗಳಲ್ಲಿ ಹೊಳೆಯಂತೆ ಪುತಿನ ಪ್ರಬಂಧಗಳಲ್ಲಿನ ದೇಗುಲದಂತೆ ಇಲ್ಲಿ ರೈಲ್ವೆ ಸ್ಟೇಶನ್ನು ರಸ್ತೆ ಮತ್ತು ಸಿಗ್ನಲ್ಲುಗಳ ಲೋಕವಿದೆ. ಈ ಲೋಕವು ರೂಪಕವಾಗಿ ಸಂಕೇತವಾಗಿ ಮತ್ತೆಮತ್ತೆ ಪ್ರಬಂಧಗಳಲ್ಲಿ ಆವರಿಸುತ್ತದೆ’ ಎಂದಿದ್ದಾರೆ.
©2025 Book Brahma Private Limited.