ಚಲ್ ಮೇರಿ ಲೂನಾ

Author : ಆರ್. ನಿರ್ಮಲಾ

Pages 144

₹ 75.00




Year of Publication: 1997
Published by: ಅಭಿನವ ಪ್ರಕಾಶನ
Address: ಮುಖ್ಯರಸ್ತೆ, ಮಾರೇನಹಳ್ಳಿ, 17/18-2, 1ನೇ ವಿಜಯನಗರ, ಬೆಂಗಳೂರು -560040
Phone: 9448804905

Synopsys

ಆರ್‍. ನಿರ್ಮಲಾ ಅವರು ಬರೆದಿರುವ ಪ್ರಬಂಧಗಳ ಸಂಕಲನವಾದ ’ಚಲ್ ಮೇರಿ ಲೂನಾ’ ಇವರ ಮೊದಲ ಪ್ರಕಟಿತ ಕೃತಿಯಾಗಿದೆ. 

ಲೇಖಕಿಯ ಕಾಲೇಜು ದಿನಗಳ ಹತ್ತಿರದ ಅನುಭವಗಳನ್ನು ಪ್ರಬಂಧಗಳ ಮೂಲಕ ಈ ಕೃತಿಯಲ್ಲಿ ಸೇರಿಸಿದ್ದಾರೆ. ಮೈಸೂರಿನಿಂದ ಇದ್ದಕ್ಕಿದ್ದಂತೆ ಮಂಡ್ಯಾದ ಸರ್ಕಾರಿ ಕಾಲೇಜಿಗೆ ವರ್ಗವಾಗಿ ಆಗಿನ ನಿತ್ಯದ ಪ್ರಯಾಣವನ್ನು ಕುರಿತಾದ ಎರಡು ಪ್ರಬಂಧಗಳಿವೆ.  ಮೈಸೂರಿನಿಂದ ರೈಲಿನಲ್ಲಿ ಹೊರಟು ಮಂಡ್ಯಾ ಸೇರುವವರೆಗಿನ ಹಳ್ಳಿಗಳು, ಇತಿಹಾಸದಲ್ಲಿ ದಾಖಲಾಗಿರುವ ಊರುಗಳು, ಪುರಾಣಗಳು ಇತ್ಯಾದಿಗಳನ್ನೊಳಗೊಂಡ ’ಹಸಿರದಾರಿ’ ಮತ್ತು ಮೈಸೂರು -ಮಂಡ್ಯಾ ನಡುವೆ ಪ್ರಯಾಣ ಮಾಡುವಾಗ ಅನುಭವಿಸಿದ್ದನ್ನು ಹೇಳುವ ಪ್ರಯಾಣಕಾಲ ಎಂಬ ಎರಡು ಬರಹಗಳಿವೆ.

ಈ ಸಂಕಲನದಲ್ಲಿರುವ ಇಪ್ಪತ್ತೆರಡು ಪ್ರಬಂಧಗಳಲ್ಲಿ ವಿಷಾದ, ತೆಳುಹಾಸ್ಯವನ್ನು ಹೆಚ್ಚಾಗಿ ಗಮನಿಸಬಹುದು. ಸ್ತ್ರೀ ಜಗತ್ತಿನ ಒಳಮುಖಗಳನ್ನುಹಿಡಿದಿಡುವ ನಿಟ್ಟಿನಲ್ಲಿ  ಇವರ ಬರಹಗಳು ಸಾಗಿವೆ.

ನಲ್ದಾಣ, ಅಂಟಿದನಂಟು, ಆ ಬಿಸಿಲಕೋಲು, ಹಸಿರ ದಾರಿ, ಪ್ರಯಾಣ ಕಾಲ, ಅಜ್ಜಿಯ ಕೈತುತ್ತು, ರಸ್ತೆ, ಕರಗದಿರಿ ಗುಡ್ಡಗಳೇ, ಕೈಹಿಡಿದವರು, ನಾಮಫಲಕ,ಕದಿಯಲಾಗದ ಹೂವುಗಳು, ಹುಡುಕಾಟದ ಮೋಜು, ಕಾಡದಿರಿ ನೆನಪುಗಳೆ, ಚಲ್ ಮೇರಿ ಲೂನಾ, ಸಣ್ಣ ಸಂಗತಿ, ಹಳದಿ ಎಲೆ, ಬಾ ಮೋಡವೆ…, ಕತೆ-ದಂತಕತೆ, ಸೆರಗ ಬಿಡು ಮರುಳೆ, ಮನದ ಮೂಲೆಯ ಮಾತು ಮುಂತಾದ ಪ್ರಬಂದ ಬರಹಗಳನ್ನು ಈ ಕೃತಿ ಒಳಗೊಂಡಿದೆ.

About the Author

ಆರ್. ನಿರ್ಮಲಾ

ಲೇಖಕಿ ಆರ್. ನಿರ್ಮಲಾ ಅವರು ಮೂಲತಃ ಶಿವಮೊಗ್ಗದ ಜೋಗದವರು. ವಿಚಾರವಾದಿ, ಸಾಮಾಜಿಕ ಚಿಂತಕ ದಿ. ಪ್ರೊ.ಕೆ. ರಾಮದಾಸ್ ಅವರ ಪತ್ನಿ. ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು, 1997ರಲ್ಲಿ ಚಲ್ ಮೇರೆ ಲೂನಾ ಪ್ರಬಂಧ ಸಂಗ್ರಹಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿತ್ತು. ಪಚ್ಚೆ ಪೈರು ಮತ್ತು ಉರಿವ ಒಲೆ ಸೇರಿದಂತೆ ಹಲವು ಕೃತಿಗಳನ್ನು ಪ್ರಕಟಿಸಿದ್ದರು. ಅನಾರೋಗ್ಯದಿಂದ ಅವರು 2007ರ ನವೆಂಬರ್ 24ರಂದು ಕುವೆಂಪುನಗರದ ಸ್ವಗೃಹದಲ್ಲಿ ನಿಧನರಾದರು.   ...

READ MORE

Related Books