ಮಹಿಳಾ ಸಾಹಿತ್ಯ ಸಂಪುಟ- ಲಲಿತಾ ಪ್ರಬಂಧ

Author : ತಮಿಳ್ ಸೆಲ್ವಿ

Pages 256

₹ 180.00




Year of Publication: 2020
Published by: ಕನ್ನಡ ಸಾಹಿತ್ಯ ಪರಿಷತ್ತು
Address: ಪಂಪಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು- 560018

Synopsys

‘ಮಹಿಳಾ ಸಾಹಿತ್ಯ ಸಂಪುಟ- ಲಲಿತಾ ಪ್ರಬಂಧ’ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಮನು ಬಳಿಗಾರ್ ಪ್ರಧಾನ ಸಂಪಾದಕತ್ವದಲ್ಲಿ ಪ್ರಕಟವಾದ ಕೃತಿ. ಡಾ. ಮಲ್ಲಿಕಾ ಘಂಟಿ ಅವರು ಈ ಮಾಲಿಕೆಯ ಸಂಪಾದಕರಾಗಿದ್ದು, ಲೇಖಕಿ ಡಾ. ತಮಿಳ್ ಸೆಲ್ವಿ ಹಾಗೂ ಬಾ. ಹ. ರಮಾಕುಮಾರಿ ಅವರು ಈ ಕೃತಿಯನ್ನು ಸಂಪಾದಿಸಿದ್ದಾರೆ. ಈ ಕೃತಿಗೆ ಸ್ವತಃ ಡಾ. ಮನು ಬಳಿಗಾರ್ ಬೆನ್ನುಡಿ ಬರೆದಿದ್ದಾರೆ. ಕನ್ನಡದ ಲೇಖಕಿಯರ ಅನುಭವ ಲೋಕ, ಆಲೋಚನೆ, ಆಳದ ತಲ್ಲಣ ಮತ್ತು ಪ್ರತಿಭಟನೆಗಳು ಅವರ ಕೃತಿಗಳಲ್ಲಿ ಅಭಿವ್ಯಕ್ತಗೊಂಡ ಬಗೆಯನ್ನು ಈ ಮಹಿಳಾ ಸಂಪುಟಗಳು ಹಿಡಿದು ಇಟ್ಟಿವೆ. ಇದೇ ಮೊದಲ ಬಾರಿ ಅವರ ಬಹುಮುಖ ಅಭಿವ್ಯಕ್ತಿಯನ್ನು ಒಟ್ಟಂದದಲ್ಲಿ ಗ್ರಹಿಸಲು ಅನುವಾಗುವಂತೆ ಈ ಸಂಪುಟಗಳನ್ನು ರೂಪಿಸಲಾಗಿದೆ ಎನ್ನುತ್ತಾರೆ ಮನು ಬಳಿಗಾರ್. ಜೊತೆಗೆ ಹೆಣ್ಣು ಮತ್ತು ಗಂಡಿನ ಸಂವೇದನೆಗಳ ನಡುವಿನ ಭಿನ್ನತೆಗಳನ್ನು ಮತ್ತು ಸಾಮ್ಯತೆಗಳನ್ನು ಗುರುತಿಸಲು ಈ ಸಂಪುಟಗಳು ನೆರವಾಗುತ್ತವೆ ಎಂಬ ನಂಬಿಕೆ ನನ್ನದು ಎನ್ನುತ್ತಾರೆ. ಮಹಿಳಾ ಸಾಹಿತ್ಯ ಕುರಿತ ಉನ್ನತ ಅಧ್ಯಯನಕ್ಕೆ ಈ ಸಂಪುಟಗಳು ಆಕರಗಳಾಗುತ್ತವೆ ಹಾಗೂ ಆ ಅಧ್ಯಯನವನ್ನು ಇನ್ನಷ್ಟು ಎತ್ತರಕ್ಕೆ ತೆಗೆದುಕೊಂಡು ಹೋಗಲು ನೆರವಾಗುತ್ತವೆ.

About the Author

ತಮಿಳ್ ಸೆಲ್ವಿ
(13 April 1969)

ಭಾಷಾಂತರಗಾರ್ತಿ, ಭಾಷಾ ಸಂಶೋಧಕಿ ತಮಿಳ್ ಸೆಲ್ವಿಅವರು ಕನ್ನಡ ಪ್ರಾಧ್ಯಾಪಕರು. 1969 ಮಾರ್ಚ್ 13 ರಂದು ಜನಿಸಿದ ಅವರು ದ್ರಾವಿಡ ಮೂಲದ “ಕನ್ನಡ-ತಮಿಳು” ಎಂಬ ಸಂಶೋಧನಾ ಕೃತಿ ಹೊರತಂದಿದ್ಧಾರೆ. ತಮಿಳು ಕನ್ನಡ ಸಾಹಿತ್ಯದ ಸಂಬಂಧ (ತಮಿಳಿನಲ್ಲಿ-ಸಂಶೋಧನೆ), ಚೋಳ-ಪಲ್ಲವ-ಶಿಲ್ಪಕಲೆ, ಅಶೋಕ ಮಿತ್ರನ್ ಕಥೆಗಳು (ಭಾಷಾಂತರ), ಸಂಕ್ರಾಂತಿ (ಭಾಷಾಂತರ), ಅತ್ತಿಮಬ್ಬೆ (ಸಂಶೋಧನೆ), ಶ್ರೀಲಂಕಾದ ತಮಿಳು ಕವಿತೆಗಳು, 6, 7, 8  ಮತ್ತು 10ನೇ ತರಗತಿಯ ವಿಜ್ಞಾನ ಪಠ್ಯಪುಸ್ತಕಗಳ ಸಂಪಾದನೆ, ನಾನು ಅವನಲ್ಲ ಅವಳು (ಅನುವಾದ). ಕರ್ನಾಟಕ ಲೇಖಕಿಯರ ಸಂಘದ ’ಎಚ್.ವಿ.ಸಾವಿತ್ರಮ್ಮ ದತ್ತಿನಿಧಿ ಬಹುಮಾನ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತ” ಲಭಿಸಿದೆ. ಕಾಂತಾವರ ಕನ್ನಡಸಂಘವು ’ಕರ್ನಾಟಕ ...

READ MORE

Related Books