ಮುಳ್ಳು ಬೇಲಿಯ ಹೂಬಳ್ಳಿ

Author : ಕೆ. ಆರ್. ಉಮಾದೇವಿ ಉರಾಳ

Pages 96

₹ 120.00




Year of Publication: 2022
Published by: ನವಕರ್ನಾಟಕ ಪಬ್ಲಿಕೇಷನ್‌
Address: ಎಂಬೆಸಿ ಸೆಂಟರ್‌, ಕ್ರೆಸೆಂಟ್‌ ರಸ್ತೆ, ಬೆಂಗಳೂರು- 560 001
Phone: 080-22161900

Synopsys

ಮುಳ್ಳು ಬೇಲಿಯ ಹೂಬಳ್ಳಿ ಕೆ.ಆರ್‌ ಉಮಾದೇವಿ ಉರಾಳ ಅವರ ಪ್ರಬಂಧ ಸಂಕಲನ. ಇಲ್ಲಿನ ಲೇಖನಗಳು ಲಲಿತ ಪ್ರಬಂಧಗಳ ಸ್ವರೂಪದವು. ತಾವು ಬದುಕಿನಲ್ಲಿ ಅನುಭವಿಸಿದ ತಮ್ಮ ಕಾಲದ ಅನೇಕ ಅವಿಸ್ಮರಣೀಯ ಘಟನೆಗಳನ್ನು ಲೇಖಕಿ ಉಮಾದೇವಿ ಇಲ್ಲಿ ಮೆಲುಕು ಹಾಕಿದ್ದು, ಕಳೆದುಕೊಂಡ ಆ ಕಾಲದ ಅನೇಕ ಸಾಮಾಜಿಕ ಮೌಲ್ಯಗಳನ್ನು ನಮಗೂ ನೆನಪು ಮಾಡಿಕೊಟ್ಟಿದ್ದಾರೆ. ಕಾಲ ಕಳೆದಂತೆ ಅಥವಾ ಬದಲಾದಂತೆ ಹಲವು ಸಂಸ್ಕೃತಿಗಳೂ ಬದಲಾಗಿ ಆ ಜಾಗಕ್ಕೆ ಹೊಸದಾಗಿ ಬಂದು ಸೇರುವಂಥವು ಎಷ್ಟೋ ಇವೆ. ನಾವೂ ಆದರೊಂದಿಗೆ ಹೆಜ್ಜೆ ಹಾಕಲೇಬೇಕಾದ ಅನಿವಾರ್ಯತೆ ನಮಗೂ ಇದೆ. ಏನೇ ಆದರೂ ಜೀವಿತದಲ್ಲಿ ನಾವು ಗಳಿಸಿದ್ದನ್ನೂ ಕಳೆದುಕೊಂಡಿದ್ದನ್ನೂ ಲೆಕ್ಕ ಹಾಕುತ್ತ ಇನ್ನಷ್ಟು ಪ್ರಬುದ್ಧರಾಗುತ್ತ ಸಾಗುವ ಜೀವನದ ದಾರಿಯೇ ಒಂದು ಆಹ್ಲಾದಕರ ಅನುಭವವೆಂದು ಲೇಖನಗಳಲ್ಲೆಲ್ಲ ವ್ಯಕ್ತವಾಗಿದೆ.

 “ಇಲ್ಲಿನ ಲೇಖನಗಳು ಪ್ರಬಂಧದ ಸ್ವರೂಪದಲ್ಲಿದ್ದರೂ, ಅವುಗಳಲ್ಲಿ ಹಲವು ಲಲಿತ ಪ್ರಬಂಧಗಳ ಲಕ್ಷಣಗಳನ್ನೂ ಹೊಂದಿವೆ. ಆತ್ಮೀಯ ಶೈಲಿ, ಭಾರವಲ್ಲದ ವೈಚಾರಿಕತೆ ಹಾಗೂ ವೈನೋದಿಕ ಧಾಟಿ ಲಲಿತ ಪ್ರಬಂಧದ ಮುಖ್ಯ ಗುಣಗಳು. ಇಲ್ಲಿನ ಪ್ರಬಂಧಗಳಲ್ಲಿ ವೈನೋದಿಕ ಧಾಟಿಗೆ ಪ್ರಾಮುಖ್ಯವಿಲ್ಲ. ಅದರ ಬದಲು ಅವುಗಳು ನೆನಪುಗಳನ್ನು ಹೆಚ್ಚು ನಂಬಿವೆ. ಹಾಗಾಗಿ ಇಲ್ಲಿನ ಬರಹಗಳು ಪ್ರಬಂಧಗಳನ್ನು ನೆನಪಿಸುತ್ತವೆ. 'ಕರುಬುವವರಿರಬೇಕಿರಬೇಕು...' ಎಂಬ ಪ್ರಬಂಧ ಸಾಕಷ್ಟು ವಿನೋದವನ್ನು ಒಳಗೊಳ್ಳಲು ಅನುಕೂಲವಿರುವ ಬರಹ. ಆದರೆ ಉಮಾದೇವಿಯವರು ಅಲ್ಲಿ ವಿಶ್ಲೇಷಣೆ ಮತ್ತು ವಿವರಣೆಗಳ ಹದನಾದ ವೈಚಾರಿಕ ಬಂಧವನ್ನು ಆತ್ಮೀಯವಾದ ಶೈಲಿಯಲ್ಲಿಯೇ ಹೇಳಿದ್ದಾರೆ. ಅವರಿಗೆ ವಿನೋದಕ್ಕಿಂತಲೂ ವಿಚಾರ ಮುಖ್ಯ ಎಂಬುದು ಸಂಕಲನದ ಮೊದಲಿಗೇ ಭಾಸವಾಗುತ್ತದೆ. ಹಾಗಾಗಿ ಅವರಿಗೆ ಇನ್ನೊಬ್ಬರ ಭಾಗ್ಯಕ್ಕೆ ಕರುಬದೆ ತನ್ನ ಭಾಗ್ಯವನ್ನು ಬೇರೊಂದೆಡೆ ಕಾಣುವ ಸುರೇಶ ಸದಾ ನೆನಪಿನಲ್ಲುಳಿಯುತ್ತಾನೆ. ನೆನಪು ಅವರಿಗೆ ಪೂರಕ ಅನುಭವ” ಎಂದು ಎಸ್.‌ಆರ್.‌ ವಿಜಯಶಂಕರ ಅವರು ಪುಸ್ತಕದಲ್ಲಿ ಮುನ್ನುಡಿಯ ಮಾತುಗಳನ್ನಾಡಿದ್ದಾರೆ. 

 

About the Author

ಕೆ. ಆರ್. ಉಮಾದೇವಿ ಉರಾಳ

ಕೆ. ಆರ್. ಉಮಾದೇವಿ ಉರಾಳ ಅವರು ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಕಮ್ಮರಡಿಯವರು. ಆಂಗ್ಲಭಾಷಾ ಉಪನ್ಯಾಸಕಿಯಾಗಿ, ಮೂವತ್ತೊಂಬತ್ತು ವರ್ಷಗಳ ಸೇವಾವಧಿಯ ನಂತರ ನಿವೃತ್ತಿ. ಓದುವಿಕೆ, ಬರಹ, ಭಾಷಣ, ವಿಚಾರಗೋಷ್ಠಿಗಳಲ್ಲಿ ಪ್ರಬಂಧ ಮಂಡನೆ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸಕ್ರಿಯ ಪಾತ್ರ. ರಾಜ್ಯದ ಪ್ರಮುಖ ಪತ್ರಿಕೆಗಳು, ಸಂಚಿಕೆಗಳಲ್ಲಿ ಲೇಖನಗಳು ಪ್ರಕಟವಾಗಿವೆ. "ಮುಂಬೆಳಕಿನ ಮಿಂಚು", "ಮಕ್ಕಳಿಗಿದು ಕಥಾಸಮಯ" ಪ್ರಕಟಿತ ಕೃತಿಗಳು. ಜಾನಪದ ವಿಶ್ವವಿದ್ಯಾಲಯವು ಪ್ರಕಟಿಸಿರುವ ಕರ್ನಾಟಕ ಗ್ರಾಮ ಚರಿತ್ರೆ ಕೋಶದಲ್ಲಿ ತೀರ್ಥಹಳ್ಳಿ ತಾಲ್ಲೂಕಿನ ನೂರಾರು ಗ್ರಾಮಗಳಲ್ಲಿ ಕ್ಷೇತ್ರಕಾರ್ಯ: ಅವು ವಿವಿಧ ಸಂಕಲನಗಳಲ್ಲಿ ಸೇರ್ಪಡೆಯಾಗಿವೆ. ಕೆಲವು ...

READ MORE

Related Books