ಲ್ಯಾಪ್‌ಟಾಪ್‌ ಪರದೆಯಾಚೆಗೆ

Author : ಸಂಯುಕ್ತಾ ಪುಲಿಗಲ್‌

Pages 128

₹ 140.00




Year of Publication: 2019
Published by: ಬಹುರೂಪಿ ಪ್ರಕಾಶನ
Address: ಎಂಬೆಸ್ಸೆ ಎಂಟರ್‌, ಕ್ರೆಸೆಂಟ್‌ ರಸ್ತೆ, ಕುಮಾರ ಪಾರ್ಕ್‌ ಪಶ್ಚಿಮ, ಬೆಂಗಳೂರು
Phone: 9945440841

Synopsys

ಸಂಯುಕ್ತ ಪುಲಿಗಲ್‌ ಅವರು ಅವಧಿ ಜಾಲತಾಣಕ್ಕೆ ಬರೆದ ಅಂಕಣ ಬರಹಗಳ ಸಂಕಲಿತ ರೂಪ ಲ್ಯಾಪ್‌ಟಾಪ್‌ ಪರದೆಯಾಚೆಗೆ. ಇದರಲ್ಲಿ ಒಟ್ಟು 22 ಪ್ರಬಂಧಗಳಿವೆ. ದಿನನಿತ್ಯ ನೋಡಿದ, ಅನುಭವಿಸಿದ, ಕಂಡುಂಡ ವಿಷಯಗಳನ್ನೇ ಇಟ್ಟುಕೊಂಡು ಇವರು ಬರೆದಿರುವ ಪ್ರಬಂಧಗಳು ಟಿಪ್ಪಣಿಗಳ ರೂಪದಲ್ಲಿವೆ. ಪ್ರಶ್ನಿಸುವಿಕೆ ಇವರ ಪ್ರಬಂಧಗಳಲ್ಲಿ ಕಂಡುಬರುತ್ತದೆ. 

About the Author

ಸಂಯುಕ್ತಾ ಪುಲಿಗಲ್‌

ಸಂಯುಕ್ತಾ ಪುಲಿಗಲ್ ಬೆಂಗಳೂರಿನ ನಿವಾಸಿ. ಐಟಿ ಉದ್ಯೋಗಿ. ಕನ್ನಡ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿಗಳನ್ನು ಪಡೆದಿದ್ದಾರೆ. ಓದು - ಬರಹಗಳಲ್ಲಿ ಅಪಾರವಾದ ಆಸಕ್ತಿಯನ್ನು ತಳೆದಿರುವ ಅವರು ‘ಪರ್ವತದಲ್ಲಿ ಪವಾಡ’ ಮತ್ತು ‘ರೆಬೆಲ್ ಸುಲ್ತಾನರು’ ಎಂಬ ಅನುವಾದಿತ ಕೃತಿಗಳನ್ನು ಹಾಗೂ ’ಲ್ಯಾಪ್ ಟಾಪ್ ಪರದೆಯಾಚೆಗೆ’ ಎಂಬ ಅಂಕಣ ಬರಹಗಳ ಪುಸ್ತಕವನ್ನು ಹೊರತಂದಿದ್ದಾರೆ. ಹಲವು ನಿಯತಕಾಲಿಕೆಗಳಲ್ಲಿ ವಿವಿಧ ವಿಷಯಗಳ ಕುರಿತಾದ ಲೇಖನಗಳನ್ನು ಪ್ರಕಟಿಸಿದ್ದಾರೆ. ...

READ MORE

Reviews

‘ಬೈನರಿ ಜಗತ್ತಿನ ಮಧ್ಯೆ ಇದ್ದೂ ಜಗತ್ತು ಅದಕ್ಕಿಂತ ಭಿನ್ನವಾಗಿ ಕಟ್ಟಲ್ಪಟ್ಟಿದ್ದು ಎನ್ನುವುದನ್ನು ಸಮರ್ಥವಾಗಿ ಈ ಕೃತಿಯಲ್ಲಿ ಮನವರಿಕೆ ಮಾಡಿಸುತ್ತಿದ್ದಾರೆ' ಎನ್ನುವ ಮಾತು ಸಂಯುಕ್ತಾ ಪುಲಿಗಲ್ ಅವರ 'ಲ್ಯಾಪ್‌ಟಾಪ್ ಪರದೆಯಾಚೆಗೆ' ಪುಸ್ತಕದ ಬೆನ್ನುಡಿಯಲ್ಲಿ ಇದೆ. ಈ ಪುಸ್ತಕದಲ್ಲಿ ಇರುವ ಬಿಡಿ ಬರಹಗಳನ್ನು ಓದುತ್ತಿದ್ದರೆ ಈ ಮಾತು, ಪುಸ್ತಕಕ್ಕೆ ಬಹಳ ಸೂಕ್ತ ಎಂಬ ಅನಿಸಿಕೆ ಮೂಡುತ್ತದೆ. 'ಡಾರ್ಕ್ ಅಂಡ್ ಲವೀ ಟೂ...' ಬರಹದಲ್ಲಿ ಮನುಷ್ಯನ ಕಪ್ಪು ಮತ್ತು ಬಿಳಿ ತೊಗಲಿನ ಕುರಿತು ಸಂಯುಕ್ತಾ ಅವರು ದಾಖಲಿಸಿರುವ ಅನುಭವ-ಅನಿಸಿಕೆಗಳು ನೆನಪಿನಲ್ಲಿ ಉಳಿಯುವಂಥವು. ಇಲ್ಲಿನ ಒಂದೆರಡು ಬರಹಗಳು ಚರ್ಚಾರ್ಹ ವಸ್ತುಗಳನ್ನು ಅಯ್ಕೆ ಮಾಡಿಕೊಂಡಿವೆ. ಅವುಗಳಲ್ಲಿ ಲೇಖಕಿ ತಮ್ಮ ಅಭಿಪ್ರಾಯವನ್ನು ಸ್ಪುಟವಾಗಿ ದಾಖಲಿಸಿದ್ದಾರೆ. ಅಲ್ಲಿ ಪಾರಿಭಾಷಿಕದ ರೂಪದಲ್ಲಿ ಬಳಸಿರುವ ಪದಗುಚ್ಛಗಳ ಬಗ್ಗೆ ಪ್ರಶ್ನೆಗಳು ಮೂಡಬಹುದು - ಆದರೆ, ಅಲ್ಲಿ ಲೇಖಕಿ ಹೊಂದಿರುವ ಸದಾಶಯವು ಪ್ರತಿಫಲಿತವಾಗಿದೆ ಎಂಬುದನ್ನೂ ಗುರುತಿಸಬೇಕು. ಅಂದಹಾಗೆ, ಇಲ್ಲಿರುವವು ಸಂಯುಕ್ತಾ ಅವರು ಬ್ಲಾಗಿನಲ್ಲಿ ಬಿಡಿಬಿಡಿಯಾಗಿ ಬರೆದ ಬರಹಗಳು.

ಕೃಪೆ : ಪ್ರಜಾವಾಣಿ (2020 ಮಾರ್ಚಿ 08)

Related Books