ಸೇನಾ ಪರ್ವ

Author : ರವಿಕುಮಾರ ಕಾಶಿ

Pages 152

₹ 650.00




Year of Publication: 2019
Published by: ರಿಲಯಬಲ್‌ ಕಾಪಿ
Address: #101, ಡೆನಿಸನ್‌ ಅಪಾರ್ಟ್‌‌ಮೆಂಟ್ಸ್‌, ಹಾಲ್‌ ರಸ್ತೆ, ರಿಚರ್ಡ್ಸ್‌ ಟೌನ್‌, ಬೆಂಗಳೂರು- 560005
Phone: 8128053203

Synopsys

ಬೆಂಗಳೂರಿನಲ್ಲಿ ನೋಡುಗರ ಗಮನ ಸೆಳೆವ, ಸೆಳೆದಿರುವ ಸಂಗತಿಗಳು, ಸ್ಥಳಗಳು ಹಲವಾರಿವೆ. ಕಲಾವಿದ ರವಿಕುಮಾರ ಅವರ ಗಮನ ಸೆಳೆದದ್ದು ಫ್ಲೆಕ್ಸ್‌ ಹಾಗೂ ಬ್ಯಾನರ್‌ಗಳು. ಇಂದು ಬಿಬಿಎಂಪಿ ಫ್ಲೆಕ್ಸ್‌ ತೆರವಿಗೆ ಕಠಿಣ ಕಾನೂನು ಜಾರಿಮಾಡಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರಸ್ತುತ ಬಟ್ಟೆ ಬ್ಯಾನರ್‌ಗಳನ್ನು ಮಾತ್ರ ಬಳಸಲು ಅವಕಾಶವಿದೆ. ಆದರೆ ವಿಷಯ ಏನಪ್ಪ ಅಂದರೆ ಈ ಬ್ಯಾನರ್‌ಗಳಲ್ಲಿ ಕಂಡುಬರುತ್ತಿದ್ದ ಭಾಷೆ, ಸಮುದಾಯ, ಜಾತಿ, ಸಿನಿಮಾ ನಾಯಕರ ಹೆಸರಲ್ಲಿ ಆರಂಭವಾಗಿರುವ ’ಸೇನೆ’ಗಳು. ವಿಷ್ಣು ಸೇನೆ, ಸಂಗೊಳ್ಳಿ ರಾಯಣ್ಣ ಸೇನೆ, ಹೀಗೆ ಹಲವಾರು ಸೇನೆಗಳ ಫ್ಲೆಕ್ಸ್‌ಗಳು ಎಲ್ಲೆಲ್ಲೂ ರಾರಾಜಿಸುತ್ತಿವೆ. 

ಸೇನಾ ಪರ್ವ ಕೃತಿಯು ರಾಜಕೀಯ ಫ್ಲೆಕ್ಸ್‌ ಬ್ಯಾನರ್‌ಗಳ ಮಾಧ್ಯಮ, ಸಂಯೋಜನೆ ಹಾಗೂ ವಸ್ತುಗಳನ್ನು ಕುರಿತು ಕನ್ನಡ ಮತ್ತು ಇಂಗ್ಲಿಷ್‌ ಪ್ರಬಂಧಗಳನ್ನು ಒಳಗೊಂಡಿದೆ. ಕಳೆದ ಒಂದು ದಶಕದಲ್ಲಿ ಲೇಖಕರು ತೆಗೆದ ಛಾಯಾಚಿತ್ರಗಳನ್ನು ಒಳಗೊಂಡಿದೆ. ಈ ಕೃತಿಯು ಹೆಚ್ಚಾಗುತ್ತಿರುವ ಆಕ್ರಮಣಕಾರಿ ಪ್ರವೃತ್ತಿ ಮತ್ತು ದೌರ್ಬಲ್ಯತೆಯನ್ನು ಗುರುತಿಸುತ್ತಾ ಬದಲಾಗುತ್ತಿರುವ ನಗರದ ಭಾವ ಚಿತ್ರವನ್ನು ಕಟ್ಟಿಕೊಡುತ್ತದೆ. 

About the Author

ರವಿಕುಮಾರ ಕಾಶಿ

ಕಲಾವಿದ ಹವ್ಯಾಸಿ ಬರಹಗಾರ ರವಿಕುಮಾರ ಕಾಶಿ ಅವರು ಜನಿಸಿದ್ದು ಬೆಂಗಳೂರಿನಲ್ಲಿ. ಬೆಂಗಳೂರಿನ ಕಾಲೇಜ್‌ ಆಫ್‌ ಫೈನ್‌ ಆರ್ಟ್‌‌ನಿಂದ ಪದವಿ ಹಾಗೂ ಬರೋಡಾದ ಫೈನ್‌ ಆರ್ಟ್ಸ್‌ ಫ್ಯಾಕಲ್ಟಿ ಕಾಲೇಜಿನಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಚಿತ್ರ, ಶಿಲ್ಪ, ಛಾಯಾಗ್ರಹಣ ಮತ್ತು ಇನ್‌ಸ್ಟಾಲೇಷನ್‌ ಕ್ಷೇತ್ರದಲ್ಲಿ ಕಲಾಕೃತಿ ರಚಿಸುವ ಕಾಯಕದಲ್ಲಿ ನಿರತರಾಗಿದ್ದಾರೆ. ಜೊತೆಜೊತೆಗೆ ದೃಶ್ಯಸಂಸ್ಕೃತಿಯ ಬಗ್ಗೆ ಉಪನ್ಯಾಸ ನೀಡುತ್ತಾರೆ. ಇವರ ಕಣ್ನೆಲೆ ಪುಸ್ತಕಕ್ಕೆ ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಲಭಿಸಿದೆ. ವಿವಿಧ ದೇಶಗಳಲ್ಲಿ ದೃಶ್ಯಸಂಸ್ಕೃತಿಯ ಬಗ್ಗೆ ಉಪನ್ಯಾಸ ನೀಡಿದ್ದಾರೆ. ಕನ್ನಡ ಮಾತ್ರವಲ್ಲದೆ ಇಂಗ್ಲಿಷ್‌ ಭಾಷೆಯಲ್ಲಿಯೂ ಕೃತಿ ರಚಿಸಿದ್ದಾರೆ. ಇವರ ಸೇನಾ ಪರ್ವ ಕೃತಿಯು ಕನ್ನಡ ...

READ MORE

Related Books