
ಲೇಖಕ ಸಂತೋಷ್ ನಂಬಿಯಾರ್ ಅವರು ಇಂಗ್ಲೀಷಿನಲ್ಲಿ ರಚಿಸಿದ ಕೃತಿಯ ಕನ್ನಡ ಅನುವಾದ ʻಭಯಮುಕ್ತ ಬದುಕಿನೆಡೆಗೆʼ. ಲೇಖಕ ಶೀನಾ ನಾಡೋಳಿ ಅವರು ಕನ್ನಡಕ್ಕೆ ತಂದಿರುವ ಈ ಪುಸ್ತಕವು ಯಶಸ್ವಿ ಬದುಕಿನ ಸೂತ್ರಗಳ ಬಗ್ಗೆ ಹೇಳುತ್ತದೆ. ಅದೃಷ್ಟಕ್ಕಾಗಿ ಕಾಯುತ್ತಾ ಕುಳಿತರೆ ಯಾವಾಗಲೂ ಭಯ ಮತ್ತು ಆತಂಕದಲ್ಲಿ ಬದುಕಬೇಕಾಗುತ್ತದೆ. ಆದರೆ ಸರಿಯಾದ ಉದ್ದೇಶ ಮತ್ತು ಅದಕ್ಕೆ ಬೇಕಾದ ಸಾಮರ್ಥ್ಯವನ್ನು ಹೊಂದಿ ಮುನ್ನಡೆದರೆ ಎದುರಾಗುವ ಎಲ್ಲಾ ಸವಾಲುಗಳನ್ನು ಧೈರ್ಯದಿಂದ ಎದುರಿಸಿ ಯಶಸ್ಸನ್ನು ಪಡೆಯಬಹುದು. ಇನ್ನು, ಯೋಚನೆಯ ಚಲನೆ ನಿಂತು ಸುಳ್ಳು, ‘ಅಹಂ’ ಕರಗಿದಾಗ ಭಯವು ಇಲ್ಲವಾಗುವುದು ಎನ್ನುತ್ತಾರೆ ಸಂತೋಷ್ ಅವರು.
©2025 Book Brahma Private Limited.