
`ಹದ್ದು ಮತ್ತುಇತರ ಪ್ರಬಂಧಗಳು’ ಎಚ್. ಜಿ. ಸಣ್ಣಗುಡ್ಡಯ್ಯ ಅವರ ರಚನೆಯ ಲಲಿತ ಪ್ರಬಂಧವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಕೆ. ಸತ್ಯನಾರಾಯಣ, ಚಂದ್ರಶೇಖರ ಆಲೂರು ಅಂತಹವರು ಲಲಿತ ಪ್ರಬಂಧಕ್ಕೆ ಮತ್ತೆ ಪ್ರಾಮುಖ್ಯತೆಯನ್ನು ತಂದುಕೊಟ್ಟಿದ್ದಾರೆ. ಅಂತಹ ಪಟ್ಟಿಯಲ್ಲಿ ಎಚ್. ಜಿ. ಸಣ್ಣಗುಡ್ಡಯ್ಯ ಅವರೂ ಸೇರುತ್ತಾರೆ. ಹದ್ದು ಮತ್ತು ಇತರ ಪ್ರಬಂಧಗಳು ಪರಿಷ್ಕೃತ ರೂಪದಲ್ಲಿ 2004ರಲ್ಲಿ ಬಂದಿದೆ. ಲಲಿತ ಪ್ರಬಂಧಕ್ಕೆ ನಿರ್ದಿಷ್ಟ ಬಂಧ ಇರ ಬೇಕೆಂದು ಖಚಿತವಾಗಿ ಹೇಳಲು ಆಗದಿದ್ದರೂ ಅದು ಕಲಾಕೃತಿಯಾಗಿ ಮೂಡಿಬರುವಲ್ಲಿ ಉತ್ತಮವಾದ ಗದ್ಯಶಿಲ್ಪ ಬೇಕಾಗುತ್ತದೆ.

ಹೊಸತು- ಜುಲೈ-2005
ನವೋದಯ ಸಾಹಿತ್ಯದ ಸಂದರ್ಭದಲ್ಲಿ ಪ್ರಮುಖ ಸಾಹಿತ್ಯ ಪ್ರಕಾರವಾಗಿದ್ದ ಲಲಿತ ಪ್ರಬಂಧ ನವ್ಯದ ಸಂದರ್ಭದಲ್ಲಿ ಹಿಂದಕ್ಕೆ ಸರಿದಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಕೆ. ಸತ್ಯನಾರಾಯಣ, ಚಂದ್ರಶೇಖರ ಆಲೂರು ಅಂತಹವರು ಲಲಿತ ಪ್ರಬಂಧಕ್ಕೆ ಮತ್ತೆ ಪ್ರಾಮುಖ್ಯತೆಯನ್ನು ತಂದುಕೊಟ್ಟಿದ್ದಾರೆ. ಅಂತಹ ಪಟ್ಟಿಯಲ್ಲಿ ಎಚ್. ಜಿ. ಸಣ್ಣಗುಡ್ಡಯ್ಯ ಅವರೂ ಸೇರುತ್ತಾರೆ. ಹದ್ದು ಮತ್ತು ಇತರ ಪ್ರಬಂಧಗಳು ಪರಿಷ್ಕೃತ ರೂಪದಲ್ಲಿ ೨೦೦೪ರಲ್ಲಿ ಬಂದಿದೆ. ಲಲಿತ ಪ್ರಬಂಧಕ್ಕೆ ನಿರ್ದಿಷ್ಟ ಬಂಧ ಇರ ಬೇಕೆಂದು ಖಚಿತವಾಗಿ ಹೇಳಲು ಆಗದಿದ್ದರೂ ಅದು ಕಲಾಕೃತಿಯಾಗಿ ಮೂಡಿಬರುವಲ್ಲಿ ಉತ್ತಮವಾದ ಗದ್ಯಶಿಲ್ಪ ಬೇಕಾಗುತ್ತದೆ. ಸಣ್ಣಗುಡ್ಡಯ್ಯ ಅವರ ಪ್ರಬಂಧಗಳಲ್ಲಿ ಇಂತಹ ನಿರ್ದಿಷ್ಟ ಆಕೃತಿ ಕಾಣುವುದಿಲ್ಲ, ಭಾಷಣದ ಧಾಟಿಯಲ್ಲಿ, ಹರಟೆಯ ಬಗೆಯಲ್ಲಿ, ವೈಚಾರಿಕ ಪ್ರಬಂಧದ ರೀತಿಯಲ್ಲಿ ಇಲ್ಲಿನ ಪ್ರಬಂಧಗಳು ವ್ಯಕ್ತವಾಗಿವೆ. ಲೇಖಕರ ಮಾನವೀಯ ಉದಾರ ಧೋರಣೆ, ಪ್ರಗತಿಶೀಲ ಮನೋಭಾವ, ಅಧ್ಯಯನಶೀಲತೆ, ವ್ಯಕ್ತಿ-ಸಮಾಜ ಸಂತೋಷ ವಾಗಿರಬೇಕೆಂಬ ಹಂಬಲ ಪ್ರಬಂಧಗಳು ಓದನ್ನು ಆಪ್ತವಾಗಿಸುತ್ತದೆ.
©2025 Book Brahma Private Limited.