
ಹಿಂದಿ ಸಾಹಿತ್ಯ ಕ್ಷೇತ್ರದಲ್ಲಿನ ಹೆಸರಾಂತ ಲೇಖಕ ಕಮಲೇಶ್ವರ್ ಅವರು ರಚಿಸಿದ ’ನೀಲಿ ಜಲ್’ ಎನ್ನುವ ಹಿಂದಿ ಕಥೆಯನ್ನು ಕನ್ನಡಕ್ಕೆ ಅನುವಾದ ಮಾಡಿದವರು ಚಿದಾನಂದ ಸಾಲಿ. ಕೆ.ಕೆ. ಬಿರ್ಲಾ ಅನುಷ್ಠಾನದ ಅನುದಾನ ವತಿಯಿಂದ ’ನೀಲಿ ಸರೋವರ’ ಪುಸ್ತಕವನ್ನು ಪ್ರಕಟಿಸಲಾಗಿದೆ. ಕಥನ ಶೈಲಿಯುಳ್ಳ ಪುಸ್ತಕದ ನಿರೂಪಣೆ ಮಕ್ಕಳ ಸಾಹಿತ್ಯಕ್ಕೂ ಹೋಲುವಂತದ್ದು. ಕಥೆಗಳಲ್ಲಿನ ಪಾತ್ರ ಸೃಷ್ಟಿ ಸರಳವಾದರೂ ನಮ್ಮ ಸುತ್ತಮುತ್ತಲಿನ ವಾತಾವರಣದ ಘಟನೆಗಳನ್ನು ಕಥೆಯ ವಸ್ತುಗಳ ಮೂಲಕ ಚಿತ್ರಿಸಿದ್ಧಾರೆ. ’ನೀಲಿ ಸರೋವರ’ ಎನ್ನುವುದು ಸಣ್ಣಪುಟ್ಟ ಸಂಗತಿಗಳನ್ನು, ಕತೆಯೊಳಗಿನ ಮತ್ತೊಂದು ಕತೆಯನ್ನು ಸೃಷ್ಟಿಸಿ, ಬೆರಗು, ಕುತೂಹಲಗಳಿಂದ ಹೆಣೆದಿರುವ ರಚನೆಯಾಗಿದೆ.
©2025 Book Brahma Private Limited.