
ಲೇಖಕಿ ಭಾರತಿ ಬಿ ವಿ ಅವರ ಲಲಿತ ಪ್ರಬಂಧಗಳ ಸಂಕಲನ ’ಮಿಸಳ್ ಭಾಜಿ’.
ಲೇಖಕಿ ತಮ್ಮ ಅನುಭವ ಬದುಕಿನ ನಗೆ ತರಿಸುವ ಸಂಗತಿಗಳನ್ನು ಇಲ್ಲಿ ದಾಖಲಿಸಿದ್ದಾರೆ. ಮತ್ತು ಅಷ್ಟೇ ಗಂಭೀರ ಬದುಕಿನ ಚಿತ್ರಣಗಳನ್ನೂ, ವ್ಯಕ್ತಿತ್ವ ಧೋರಣೆಗಳನ್ನೂ ಸಹ ಸೂಕ್ಷ್ಮವಾಗಿ ಹಿಡಿದಿಟ್ಟಿದ್ದಾರೆ. ಸಾವಿನ ಆತಂಕ, ಬದುಕಿನ ಕಷ್ಟ ಕಾರ್ಪಣ್ಯಗಳ ನಡುವಿನ ಧೋರಣೆ, ಗಂಡನ ಮನೆಯ ಹೊಸತನಕ್ಕೆ ಹೊಂದಿಕೊಳ್ಳುವ ಸಂಕಷ್ಟ, ಗಂಭೀರ ಚಿಂತನೆ, ಯಾತನೆಗಳನ್ನು ಹೊತ್ತಿರುವ ಇವರ ಅನುಭವ ಕಥನವೆಂದೇ ಪರಿಗಣಿಸಬಹುದಾದ ಲಲಿತ ಪ್ರಬಂಧಗಳನ್ನು ಅವರ ’ಮಿಸಳ್ ಭಾಜಿ’ ಕೃತಿಯಲ್ಲಿ ಸಂಕಲಿಸಿದ್ದಾರೆ.
©2025 Book Brahma Private Limited.